ಪ್ರಧಾನಿ ಮೋದಿ ನೋಟ್ ಬ್ಯಾನ್ ನಿರ್ಧಾರಕ್ಕೆ ಸಿಕ್ತು ಭಾರಿ ಜನಬೆಂಬಲ

ಈ ಸುದ್ದಿಯನ್ನು ಶೇರ್ ಮಾಡಿ

Modi-93

ನವದೆಹಲಿ ನ.23 : ರೂ.1000 ಮತ್ತು 500 ಮುಖಬೆಲೆಯ ನೋಟುಗಳನ್ನು ರದ್ದು ಮಾಡಿರುವ ಕೇಂದ್ರ ಸರ್ಕಾರದ ನಿರ್ಧಾರವನ್ನು ಶೇ.93 ಮಂದಿ ಬೆಂಬಲಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಮನವಿಯ ಹಿನ್ನೆಲೆಯಲ್ಲಿ ಸಾರ್ವಜನಿಕರು ಕೇವಲ 24 ಗಂಟೆಗಳಲ್ಲಿ 5 ಲಕ್ಷ ಜನರು 500 ಮತ್ತು 1000 ರೂ ನೋಟುಗಳನ್ನು ಹಿಂಪಡೆದಿರುವ ಕೇಂದ್ರ ಸರ್ಕಾರದ ನಡೆಗೆ ಭಾರಿ ಬೆಂಬಲ ವ್ಯಕ್ತವಾಗಿದೆ. ಮೋದಿ ಮನವಿ ಮಾಡಿದ್ದ ಆಪ್ ನಲ್ಲಿ ಶೇ.73 ರಷ್ಟು ಜನರು 5 ಸ್ಟಾರ್ ರೇಟಿಂಗ್ ನೀಡಿದ್ದಾರೆ.

ಶೇ.57 ರಷ್ಟು ಜನರು ಸರ್ಕಾರದ ಕ್ರಮವನ್ನು ಅತ್ಯುತ್ತಮ ಎಂದು ರೇಟ್ ಮಾಡಿದ್ದು, ಒಟ್ಟಾರೆ ಕೇಂದ್ರ ಸರ್ಕಾರವನ್ನು ಅತ್ಯುತ್ತಮ ಎಂದು ಶೇ.92 ರಷ್ಟು ಜನರು ರೇಟ್ ಮಾಡಿದ್ದಾರೆ. 5 ಲಕ್ಷ ಜನರ ಪೈಕಿ ಕೇವಲ ಶೇ. 2ರಷ್ಟು ಜನರು ಮಾತ್ರ ಸರ್ಕಾರದ ಕ್ರಮವನ್ನು ಅತ್ಯಂತ ಕಳಪೆ ಎಂದು ರೇಟ್ ಮಾಡಿದ್ದಾರೆ. ಸಮೀಕ್ಷೆಗೆ ಪ್ರತಿ ನಿಮಿಷವೊಂದಕ್ಕೆ 400ಕ್ಕಿಂತಲೂ ಹೆಚ್ಚು ಪ್ರತಿಕ್ರಿಯೆಗಳು ಲಭಿಸಿವೆ. 2000 ವಿವಿಧ ಪ್ರದೇಶಗಳಿಂದ ಪ್ರತಿಕ್ರಿಯೆಗಳು ಲಭಿಸಿದ್ದು, ಶೇ.93 ಮಂದಿ ಭಾರತದವರಾಗಿದ್ದಾರೆ. ಇದರಲ್ಲಿ ಶೇ.24 ಮಂದಿ ಹಿಂದಿಯಲ್ಲಿ ಪ್ರತಿಕ್ರಿಯಿಸಿದ್ದಾರೆ. ಭ್ರಷ್ಟಾಚಾರದ ವಿರುದ್ಧದ ಹೋರಾಟಕ್ಕಾಗಿ ಶೇ. 92 ರಷ್ಟು ಮಂದಿ ಬೆಂಬಲ ಸೂಚಿಸಿ ಸರ್ಕಾರದ ಹೆಜ್ಜೆಯನ್ನು ಶ್ಲಾಘಿಸಿದ್ದಾರೆ.  ಈ ಈತಿಹಾಸಿಕ ನಿರ್ಧಾರಕ್ಕೆ ಬೆಂಬಲ ವ್ಯಕ್ತಪಡಿಸಿದ ದೇಶದ ಜನರಿಗೆ ಪ್ರಧಾನಿ ಮೋದಿ ಧನ್ಯವಾದ ಹೇಳಿದ್ದಾರೆ.

ಇದಕ್ಕೂ ಮುನ್ನ ಸಿ-ಓಟರ್ ಸಂಸ್ಥೆ ನಡೆಸಿದ್ದ ಸಮೀಕ್ಷೆಯಲ್ಲಿ ದೇಶದ ಶೇ.86 ರಷ್ಟು ಜನರು ನೋಟು ನಿಷೇಧ ಕ್ರಮವನ್ನು ಬೆಂಬಲಿಸಿದ್ದರು.

> ಯಾವ ಸುದ್ದಿಯನ್ನೂ ಮಿಸ್ ಮಾಡ್ಕೋಬೇಡಿ… :  Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

Sri Raghav

Admin