ಪ್ರಧಾನಿ ಮೋದಿ ಮೇಲೆ ರಮ್ಯಾ ಟ್ವೀಟಾಸ್ತ್ರ

ಈ ಸುದ್ದಿಯನ್ನು ಶೇರ್ ಮಾಡಿ

Ramya--01

ಬೆಂಗಳೂರು, ಅ.26-ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಚಿತ್ರನಟಿ ಮತ್ತು ಮಾಜಿ ಸಂಸದೆ ರಮ್ಯಾ ಮತ್ತೆ ವಾಗ್ದಾಳಿ ನಡೆಸಿದ್ದಾರೆ. ಬಿಜೆಪಿ ಮತ್ತು ಆರ್‍ಎಸ್‍ಎಸ್ ವಿರುದ್ಧ ಟ್ವೀಟರ್‍ನಲ್ಲಿ ಮತ್ತೆ ಟೀಕಾಸ್ತ್ರಗಳನ್ನು ಪ್ರಯೋಗಿಸಿರುವ ರಮ್ಯಾ, ನರೇಂದ್ರ ಮೋದಿ ಎಂದರೆ ಕೋಮುವಾದ, ದ್ವೇಷ ಮತ್ತು ಸುಳ್ಳು ಎಂದರ್ಥ ಎಂದು ಛೇಡಿಸಿದ್ದಾರೆ. ಆರ್‍ಎಸ್‍ಎಸ್ ಸಂಸ್ಥಾಪಕ ಹೆಗಡೆವಾರ್ ಅವರಿಂದ ಹಿಡಿದು ಮೋದಿವರೆಗೆ ಎಲ್.ಕೆ.ಅಡ್ವಾಣಿ, ಅಟಲ್ ಬಿಹಾರಿ ವಾಜಪೇಯಿ ಸೇರಿದಂತೆ ಕೇಸರಿ ಪಕ್ಷದ ಮುಖಂಡರನ್ನು ರಮ್ಯಾ ಟ್ವೀಟರ್‍ನಲ್ಲಿ ಟೀಕಿಸಿದ್ದಾರೆ. 2019ರಲ್ಲಿ ಮೋದಿಯವರೇ ಅಧಿಕಾರದಿಂದ ನಿರ್ಗಮಿಸುತ್ತಾರೆ ಎಂದು ಹೇಳಿದ್ದಾರೆ.

Facebook Comments

Sri Raghav

Admin