ಪ್ರವಾಸೋದ್ಯಮ ಅಭಿವೃದ್ಧಿ ನಿಗಮದಲ್ಲಿ ವಿವಿಧ ಹುದ್ದೆಗಳಿಗೆ ಇಂಟರ್ ವ್ಯೂ

ಈ ಸುದ್ದಿಯನ್ನು ಶೇರ್ ಮಾಡಿ

kstdc

ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ ನಿಯಮಿತ (ಕೆಎಸ್‍ಟಿಡಿಸಿ)ದಲ್ಲಿ ವಿವಿಧ ಹುದ್ದೆಗಳ ನೇಮಕಾತಿಗೆ ವಾಕ್ ಇನ್ ಇಂಟರ್ ವ್ಯೂ ಕರೆದಿದ್ದು, ಅರ್ಹ ಅಭ್ಯರ್ಥಿಗಳು ಭಾಗವಹಿಸುವಣತೆ ತಿಳಿಸಿದೆ.

ಹುದ್ದೆಗಳ ಸಂಖ್ಯೆ : 39
ಹುದ್ದೆಗಳ ವಿವರ
1.ಪ್ರಾಜೇಕ್ಟ್ ಡೈರೆಕ್ಟರ್ (ದಿ ಗೋಲ್ಡನ್ ಚಾರಿಯಟ್) – 01
2.ಎಕ್ಸಿಕ್ಯೂಟೀವ್ ಅಸಿಸ್ಟೆಂಟ್ ಟು ಮ್ಯಾನೇಜಿಂಗ್ ಡೈರೆಕ್ಟರ್ – 01
3.ಸಾರ್ವಜನಿಕ ಸಂಪರ್ಕ ಅಧಿಕಾರಿ – 01
4.ಐಟಿ ಕನ್ಸಲ್‍ಟೆಂಟ್ – 01
5.ಸಾಫ್ಟ್ ವೇರ್ ಇಂಜಿನಿಯರ್ – 02
6.ಡಾಟಾ ಬೇಸ್ ಅಡ್ಮಿನಿಸ್ಟೇಟರ್ – 01
7.ನೆಟ್ ವರ್ಕ್ ಇಂಜಿನಿಯರ್ – 01
8.ಮ್ಯಾನೇಜರ್ (ಅಡ್ಮಿನ್) – 01
9.ಮ್ಯಾನೇಜರ್ (ಹೋಟೆಲ್ಸ್) – 02
10.ಮ್ಯಾನೇಜರ್ (ಟೂರ್ಸ್) – 01
11.ಮ್ಯಾನೇಜರ್ (ಮಾರ್ಕೇಟಿಂಗ್ ಅಂಡ್ ಸೇಲ್) – 02
12.ಅಸಿಸ್ಟೆಂಟ್ ಮ್ಯಾನೇಜರ್ (ಅಡ್ಮಿನ್) – 01
13.ಅಸಿಸ್ಟೆಂಟ್ ಮ್ಯಾನೇಜರ್ (ಕಾನೂನು) -01
14. ಅಸಿಸ್ಟೆಂಟ್ ಮ್ಯಾನೇಜರ್ (ಹೋಟೆಲ್ಸ್) – 07
15.ಜೂನಿಯರ್ ಅಡ್ಮಿನಿಸ್ಟೇಟರ್ ಅಸಿಸ್ಟೆಂಟ್ – 02
16.ಡಾಟಾ ಎಂಟ್ರಿ ಅಪರೇಟರ್ – 04
17 ಚಾಲಕರು – 10

ವಿದ್ಯಾರ್ಹತೆ : ಕ್ರ.ಸಂ 1,2,8ರ ಹುದ್ದೆಗೆ ಎಂಬಿಎ/ಪಿಜಿಡಿಎಂ/ಎಂಡಿಎ, ಕ್ರ.ಸಂ 3ರ ಹುದ್ದೆಗೆ ಪದವಿ, ಕ್ರ.ಸಂ 4,5,6,7ರ ಹುದ್ದೆಗೆ ಬಿಇ/ಬಿ.ಟೆಕ್ (ಕಂಪ್ಯೂಟರ್ ಸೈನ್ಸ್ / ಐಟಿ) / ಬಿಸಿಎ / ಎಂಸಿಎ, ಕ್ರ.ಸಂ 9,14ರ ಹುದ್ದೆಗೆ ಪದವಿ/ಡಿಪ್ಲೋಮಾ (ಹೋಟೆಲ್ ಮ್ಯಾನೇಜ್‍ಮೆಂಟ್), ಕ್ರ.ಸಂ 10ರ ಹುದ್ದೆಗೆ ಎಂಬಿಎ/ಪಿಜಿಡಿಬಿಎಂ (ಅಪರೇಷನ್ಸ್)/ ಎಂಟಿಎ/ಬಿಇ/ಬಿ.ಟೆಕ್ (ಮ್ಯಾಕಾನಿಕಲ್/ಆಟೋಮೊಬೈಲ್), ಕ್ರ.ಸಂ 11ರ ಹುದ್ದೆಗೆ ಎಂಬಿಎ (ಮಾರ್ಕೇಟಿಂಗ್) / ಎಂಟಿಎ, ಕ್ರ.ಸಂ 12ರ ಹುದ್ದೆಗೆ ಪದವಿ, ಕ್ರ.ಸಂ 13ರ ಹುದ್ದೆಗೆ ಕಾನೂನು ಪದವಿ, ಕ್ರ.ಸಂ 15,16ರ ಹುದ್ದೆಗೆ ಕನಿಷ್ಠ ಪಿಯುಸಿ / 10+2, ಕ್ರ.ಸಂ 17ರ ಹುದ್ದೆಗೆ ಕನ್ನಡ ಒಂದು ಭಾಷೆಯೊಂದಿಗೆ ಎಸ್.ಎಸ್.ಎಲ್.ಸಿ ಉತ್ತೀರ್ಣರಾಗಿರಬೇಕು, ಚಾಲನಾ ಪರವಾನಗಿ ಹೊಂದಿರಬೇಕು.

ವಯೋಮಿತಿ : ಕನಿಷ್ಠ ವಯೋಮಿತಿಯನ್ನು 18 ವರ್ಷಕ್ಕೆ ನಿಗದಿ ಮಾಡಲಾಗಿದ್ದು, ಗರಿಷ್ಠ ವಯಸನ್ನು ಕ್ರ.ಸಂ 1,8,9ರ ಹುದ್ದೆಗೆ 45, ಕ್ರ.ಸಂ 2,3,4,10,14ರ ಹುದ್ದೆಗೆ 40, ಕ್ರ.ಸಂ 5,6,7,11,12,13,17ರ ಹುದ್ದೆಗೆ 35, ಕ್ರ.ಸಂ 15,16ರ ಹುದ್ದೆಗೆ 30 ವರ್ಷ ನಿಗದಿಮಾಡಲಾಗಿದೆ.

ವಾಕ್ ಇನ್ ಇಂಟರ್ ವ್ಯೂ ದಿನಾಂಕ : ಕ್ರ.ಸಂ 1 ರಿಂದ 7ರ ವರೆಗಿನ ಹುದ್ದೆಗಳಿಗೆ 16/01/2018, ಕ್ರ.ಸಂ 8 ರಿಂದ 12ರ ವೆರೆಗಿನ ಹುದ್ದೆಗಳಿಗೆ 17/01/2018, ಕ್ರ.ಸಂ 13 ರಿಂದ 17ರ ವೆರೆಗಿನ ಹುದ್ದೆಗಳಿಗೆ 18/01/2018 ರಂದು ನೇರ ನೇಮಕಾತಿ ಸಂದರ್ಶನ ನಡೆಯಲಿದೆ.
ಸಮಯ : ಪ್ರತಿ ದಿನ ಬೆಳಿಗ್ಗೆ 10 ರಿಂದ ಸಂಜೆ 5ರ ವರೆಗೆ ಸಂದರ್ಶನಕ್ಕೆ ಹಾಜರಾಗಬಹುದು.
ಹೆಚ್ಚಿನ ಮಾಹಿತಿಗಾಗಿ ವೆಬ್ ಸೈಟ್ ವಿಳಾಸ www.kstdc.co  ಗೆ ಭೇಟಿ ನೀಡಿ.

ಅಧಿಸೂಚನೆಗಾಗಿ ಇಲ್ಲಿ ಕ್ಲಿಕ್ಕಿಸಿ 

Facebook Comments

Sri Raghav

Admin