ಪ್ರವಾಹ ನಿಧಿಯಿಂದ ಕೊಹ್ಲಿಗೆ 47 ಲಕ್ಷ ನೀಡಿ ವಿವಾದಕ್ಕೆ ಸಿಲುಕಿದ ಉತ್ತರಾಖಂಡ ಸಿಎಂ ರಾವತ್

ಈ ಸುದ್ದಿಯನ್ನು ಶೇರ್ ಮಾಡಿ

Virat-Kohli

ಡೆಹ್ರಾಡೂನ್, ಫೆ.25-ವಿಧಾನಸಭೆ ಚುನಾವಣೆ ಫಲಿತಾಂಶಕ್ಕೆ ಮುನ್ನವೇ ಉತ್ತರಾಖಂಡ ಮುಖ್ಯಮುಂತ್ರಿ ಹರೀಶ್ ರಾವತ್ ಮತ್ತೊಂದು ಹಗರಣದ ಸುಳಿಗೆ ಸಿಲುಕಿದ್ದಾರೆ. ಉತ್ತರಾಖಂಡ ಪ್ರವಾಸೋದ್ಯಮದ ಪ್ರಚಾರ ರಾಯಭಾರಿ ಆಗಲು ಭಾರತೀಯ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಅವರಿಗೆ ಪ್ರವಾಹ ಪರಿಹಾರ ನಿಧಿಯಿಂದ 47 ಲಕ್ಷ ರೂ.ಗಳನ್ನು ರಾವತ್ ಸರ್ಕಾರ ಪಾವತಿಸಿದೆ ಎಂಬ ಆರೋಪ ಈಗ ವಿವಾದಕ್ಕೆ ಎಡೆ ಮಾಡಿಕೊಟ್ಟಿದೆ.    ಕೇದಾರನಾಥ್‍ನಲ್ಲಿ 2013ರಲ್ಲಿ ಸಂಭವಿಸಿದ ವಿನಾಶಕಾರಿ ಪ್ರವಾಹ ಸಂತ್ರಸ್ತರಿಗೆ ಮೀಸಲಾಗಿದ್ದ ನೆರೆ ಪರಿಹಾರ ನಿಧಿಯಿಂದ ಜೂನ್ 2015ರಲ್ಲಿ ವಿರಾಟ್‍ಗೆ 47.19 ಲಕ್ಷ ರೂಗಳನ್ನು ಪಾವತಿಸಲಾಗಿದೆ ಎಂದು ಆರೋಪ ಕೇಳಿಬಂದಿದೆ.

60 ಸೆಕೆಂಡ್‍ಗಳ ಪ್ರವಾಸೋದ್ಯಮ ವಿಡಿಯೋಗಾಗಿ ಅವರಿಗೆ ಸಂಭಾವನೆ ರೂಪದಲ್ಲಿ ಈ ಮೊತ್ತ ನೀಡಲಾಗಿದೆ. ಆ ಸಂದರ್ಭದಲ್ಲಿ ಅವರು ಉತ್ತರಾಖಂಡ ರಾಜ್ಯದ ಪ್ರಚಾರ ರಾಯಭಾರಿಯಾಗಿದ್ದರು ಎಂದು ಆರ್‍ಟಿಐ (ಮಾಹಿತಿ ಹಕ್ಕು ಕಾಯ್ದೆ) ಅಡಿ ಪಡೆದ ಮಾಹಿತಿಯನ್ನು ಆಧರಿಸಿ ಬಿಜೆಪಿ ಕಾರ್ಯಕರ್ತರೊಬ್ಬರು ಹೇಳಿದ್ದಾರೆ.   ಆದರೆ, ಈ ಆರೋಪವನ್ನು ತಳ್ಳಿ ಹಾಕಿರುವ ವಿರಾಟ್ ಕೊಹ್ಲಿ ಏಜೆಂಟ್ ಮತ್ತು ಕಾರ್ನರ್‍ಸ್ಟೋನ್ ಸ್ಫೋಟ್ರ್ಸ್ ಅಂಡ್ ಎಂಟರ್‍ಟೈನ್‍ಮೆಂಟ್ ಸಂಸ್ಥಾಪಕ ಬಂಟಿ ಸಾಜ್‍ದೇ ಇಂತಹ ಯಾವುದೇ ಹಣಕಾಸು ವ್ಯವಹಾರ ನಡೆದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿಯವರ ಮಾಧ್ಯಮ ಸಲಹೆಗಾರ ಸುರೇಂದ್ರ ಕುಮಾರ್, ಪ್ರವಾಸೋದ್ಯಮ ರಾಜ್ಯ ಆರ್ಥಿಕತೆಯ ಬೆನ್ನೆಲುಬು. ಖ್ಯಾತನಾಮರೊಬ್ಬರನ್ನು ಪ್ರಚಾರ ರಾಯಭಾರಿಯಾಗಿ ಬಳಸಿಕೊಳ್ಳುವುದರಲ್ಲಿ ತಪ್ಪೇನಿದೆ ಎಂದು ಪ್ರಶ್ನಿಸಿದ್ದಾರೆ. ಕೇದಾರನಾಥ್ ಪ್ರವಾಹ ಸಂತ್ರಸ್ತರಿಗೆ ರಾಜ್ಯ ಸರ್ಕಾರ ಸೂಕ್ತ ಪರಿಹಾರ ನೀಡಿ, ಅದರ ಮರು ಅಭಿವೃದ್ಧಿಗೆ ಸಕಲ ಕ್ರಮ ಕೈಗೊಂಡಿದೆ. ಇದರಲ್ಲಿ ದೋಷವಾಗಿರುವ ಪ್ರಶ್ನೆಯೇ ಇಲ್ಲ ಎಂದು ಅವರು ತಿಳಿಸಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin