ಪ್ರಶ್ನೆ ಪತ್ರಿಕೆ ಬಿಡಿಸುವ ಕಾರ್ಯಾಗಾರ ಮುಕ್ತಾಯ ಸಮಾರಂಭ

ಈ ಸುದ್ದಿಯನ್ನು ಶೇರ್ ಮಾಡಿ

 

7
ಮುಧೋಳ,ಫೆ.14- ಇಂದಿನ ಸಮಾಜದಲ್ಲಿ ವಿದ್ಯಾರ್ಥಿನಿಯರು ದಾರಿದೀಪವಿದ್ದಂತೆ. ನೀವು ಸಮಾಜವನ್ನು ಬೆಳಗಬಲ್ಲಿರಿ, ಸಮಾಜವೇ ನಿಮ್ಮ ಕೈಯಲ್ಲಿದೆ. ಎಲ್ಲ ಫಲಿತಾಂಶಗಳಲ್ಲಿ ವಿದ್ಯಾರ್ಥಿನಿಯರೇ ಮೇಲುಗೈ ಸಾಧಿಸುತ್ತಿದ್ದಾರೆ. ತಾವುಗಳು ಪರೀಕ್ಷೆಯಲ್ಲಿ ಉತ್ತಮ ಗುಣಗಳನ್ನು ಪಡೆದು, ರ್ಯಾಂಕ್ ಪಡೆದು ಪತ್ರಿಕೆಯಲ್ಲಿ ತಮ್ಮ ಭಾವಚಿತ್ರ ಬರಬೇಕೆಂದು ಪತ್ರಕರ್ತ ಅಶೋಕ ಕುಲಕರ್ಣಿ ಆಶಿಸಿದರು.ಬಸವೇಶ್ವರ ಮಹಿಳಾ ಕಲಾ ಹಾಗೂ ವಾಣಿಜ್ಯ ಪ.ಪೂ. ಕಾಲೇಜನಲ್ಲಿ ಏರ್ಪಡಿಸಿದ್ದ ಪ್ರಶ್ನೆ ಪತ್ರಿಕೆ ಬಿಡಿಸುವ ಮುಕ್ತಾಯ ಸಮಾರಂಭ ಹಾಗೂ ದ್ವಿತೀಯ ವರ್ಷದ ವಿದ್ಯಾರ್ಥಿನಿಯರ ಬಿಳ್ಳೋಡುವ ಸಮಾರಂಭದಲ್ಲಿ ಅವರು ಮಾತನಾಡಿ ಸಂಘದ ಕಾರ್ಯಾಧ್ಯಕ್ಷ ವೀರಣ್ಣಾ ಚರಂತಿಮಠರ ಸಾಧನೆ ಕೊಂಡಾಡಿದರು. ಸಂಪನ್ಮೂಲ ವ್ಯಕ್ತಿಗಳಾದ ವ್ಹಿ.ಎಂ. ಪೂಜಾರಿ ವಿದ್ಯಾರ್ಥಿನಿಯರ ಶಿಸ್ತು, ಸಮಯ ಪ್ರಜ್ಞೆ  ಕಾಲೇಜಿನಲ್ಲಿರುವ ದಕ್ಷತೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ವಿದ್ಯಾರ್ಥಿನಿಯರು ಮುಂದೆ ಗ್ರಹಿಣಿಯಾಗಿ ಅತ್ತೆಗೆ ಸೊಸೆಯಾಗಿ ಗಂಡನಿಗೆ ಹೆಂಡತಿಯಾಗಿ, ಮಗುವಿಗೆ ತಾಯಿಯಾಗಿ ಕಾರ್ಯನಿರ್ವಹಿಸುವ ಜವಾಬ್ದಾರಿ ನಿಮ್ಮ ಮೇಲೆ ಇದೆ ಎಂದು ಸೂಕ್ತವಾಗಿ ತಿಳಿಸಿದರು.

ಪ್ರಾಚಾರ್ಯ ಎಸ್.ಬಿ. ಹೆಬ್ಲಿ ಮಾತನಾಡಿ ಕಾರ್ಯಗಾರದ ಎಲ್ಲ ವಿಷಯಗಳು ಶಿಸ್ತಿನಿಂದ ಸಮಯಕ್ಕನುಸಾರವಾಗಿ ವಿದ್ಯಾರ್ಥಿನಿಯರಿಗೆ ಮನಮುಟ್ಟುವಂತೆ ಸಂಪನ್ಮೂಲ ವ್ಯಕ್ತಿಗಳು ತಿಳಿಸಿದರು. ಇದರ ಸದುಪಯೋಗ ಪಡೆದುಕೊಂಡು ಎಲ್ಲರು ಕನಿಷ್ಠ 5ರಿಂದ 10 ವಿದ್ಯಾರ್ಥಿನಿಯರು ಜಿಲ್ಲೆಗೆ ಪ್ರಥಮ ಸ್ಥಾನ ಗಳಿಸುವಂತೆ ಜೊತೆಗೆ 100ಕ್ಕೆ 100 ಫಲಿತಾಂಶ ಪಡೆಯಬೇಕೆಂದು ಆಸೆ ವ್ಯಕ್ತಪಡಿಸಿದರು. ನಿಮ್ಮೆಲ್ಲರ ಮುಂದಿನ ಜೀವನ ಸುಖಮಯ ವಾಗಿ ಸಮಾಜಕ್ಕೆ ದಾರಿದೀಪವಾಗಿ ಕಾಲೇಜಿಗೆ ಕೀರ್ತಿ ತರಬೇಕೆಂದು ಹಾರೈಸಿ ಬಿಳ್ಕೋಟ್ಟರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin