ಪ್ರಾಚೀನ ಕಾಲದ ನೆಲಹಾಸುಗಳ ವೈವಿಧ್ಯಲೋಕ ಇಲ್ಲಿದೆ

ಈ ಸುದ್ದಿಯನ್ನು ಶೇರ್ ಮಾಡಿ

carpet-5

ಮಧ್ಯ ಏಷ್ಯಾ ಮತ್ತು ಮಧ್ಯಪ್ರಾಚ್ಯದ ಅತ್ಯಾಕರ್ಷಕ ಪ್ರಾಚೀನ ನೆಲಹಾಸುಗಳು, ಹೊದಿಕೆಗಳು ಮತ್ತು ಚಾಪೆಗಳ ವೈವಿಧ್ಯಲೋಕ ಪಶ್ಚಿಮಬಂಗಾಳದ ರಾಜಧಾನಿ ಕೋಲ್ಕತಾದಲ್ಲಿ ಅನಾವರಣಗೊಳ್ಳಲು ವೇದಿಕೆ ಸಜ್ಜಾಗಿದೆ. 19 ಮತ್ತು 20ನೇ ಶತಮಾನಗಳ ಕಾರ್ಪೆಟ್‍ಗಳು, ರಗ್ಗುಗಳು, ಮ್ಯಾಟ್‍ಗಳು ಮತ್ತು ರನ್ನರ್‍ಗಳ ಪ್ರದರ್ಶನ ಮತ್ತು ಮಾರಾಟ ಜನವರಿ 29ರಿಂದ ಆರಂಭಗೊಳ್ಳಲಿದ್ದು, ಹಳೆ ಕಾಲದ ಮೌಲ್ಯಯುತ ವಸ್ತುಗಳ ಸಂಗ್ರಹಕ ರಲ್ಲಿ ತೀವ್ರ ಆಸಕ್ತಿ ಕೆರಳಿಸಿದೆ. ಹ್ಯಾರಿಗ್ಟನ್ ಆರ್ಟ್ ಗ್ಯಾಲರಿಯಲ್ಲಿ ನಡೆಯುವ 10 ದಿನಗಳ ಈ ಪ್ರದರ್ಶನದಲ್ಲಿ ಇರಾನ್, ಇರಾಕ್, ಸಿರಿಯಾ, ಟರ್ಕಿ, ಅರ್ಮೆನಿಯಾ,ಜಾರ್ಜಿಯಾ, ಡಗೆಸ್ತಾನ್, ಉಜ್ಬೇಕಿಸ್ತಾನ್, ಕರ್ಜ್‍ಗಿಸ್ತಾನ್, ಟರ್ಕ್‍ಮೆನಿಸ್ತಾನ್ ಮೊದಲಾದ ದೇಶಗಳ ನೆಲಹಾಸುಗಳು, ಹೊದಿಕೆಗಳು, ಚಾಪೆಗಳು ಪ್ರದರ್ಶನಗೊಳ್ಳಲಿದೆ.

carpet-1

ಅತ್ಯಂತ ಸೂಕ್ಷ್ಮ ಮತ್ತು ನೈಪುಣ್ಯದ ಕುಸುರಿ ಕಲೆ ಹೊಂದಿರುವ ಇವುಗಳನ್ನು ಹೆಣೆಯಲು ಅನೇಕ ದಿನಗಳು ಬೇಕು. ಖಾಶ್‍ಖಾಯ್, ಲುರಿ, ಭಖ್ತಿಯರ್, ಖಾಮ್‍ಸೆ, ಅಫ್ಸರ್, ಶಾಸಾವನ್, ಟರ್ಕಿಕ್ ಮತ್ತು ಬಲುಷ್ ಸೇರಿದಂತೆ ವಿವಿಧ ಜನಾಂಗಗಳ ಹಾಗೂ ಬುಡಕಟ್ಟು ಕೋಮಿನ ನುರಿತ ಕಸುಬುದಾರರ ಶ್ರೇಷ್ಠ ಕಲಾವಂತಿಕಗೆ ಇವು ಸಾಕ್ಷಿ ಎನ್ನುತ್ತಾರೆ ಸಂಗ್ರಹ ಡ್ಯಾನಿ ಮೆಹ್ರಾ. ರೋಮ್ ಚಕ್ರವರ್ತಿಗಳೂ ಸೇರಿದಂತೆ ಅನೇಕ ಪ್ರಾಂತ್ಯಗಳ ದೊರೆಗಳ ಆಸ್ತಾನದಲ್ಲಿ ಈ ಸುಂದರ ನೆಲಹಾಸುಗಳು ರಾರಾಜಿಸಿ ವೈಭವವನ್ನು ಹೆಚ್ಚಿಸಿದ್ದವು. ಭಾರತದ ಮಟ್ಟಿಗೆ ಇಂಥ ಪ್ರದರ್ಶನಗಳು ವಿರಳವಾಗಿರುವ ಸಂದರ್ಭದಲ್ಲಿ ಕೋಲ್ಕತಾ ಇಂಥ ಅಪರೂಪದ ಕಲಾಕೃತಿಗಳ ಪ್ರದರ್ಶನಕ್ಕೆ ವೇದಿಕೆಯಾಗಿರುವುದು ಕಲಾ ರಸಿಕರಲ್ಲಿ ಸಂತಸ ಮೂಡಿಸಿದೆ.

carpet-2carpet-4

Facebook Comments

Sri Raghav

Admin