ಪ್ರಾಚೀನ ಯೋಗಾಸನಕ್ಕೆ ಆಧುನಿಕ ಟಚ್

ಈ ಸುದ್ದಿಯನ್ನು ಶೇರ್ ಮಾಡಿ

Hot-Yoga

ನಿಮಗೆಲ್ಲಾ ತಿಳಿದಿರುವಂತೆ ಪ್ರತಿ ವರ್ಷ ಜೂನ್ 21ರಂದು ಅಂತಾರಾಷ್ಟ್ರೀಯ ಯೋಗ ದಿನವನ್ನಾಗಿ ಆಚರಿಸಲಾಗುತ್ತದೆ. 2014ರ ಡಿಸೆಂಬರ್ 11ರಂದು ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಈ ದಿನವನ್ನು ಇಂಟರ್‍ನ್ಯಾಷನಲ್ ಯೋಗ ಡೇ ಆಗಿ ಆಚರಿಸಲು 177 ಸದಸ್ಯ ರಾಷ್ಟ್ರಗಳು ಒಮ್ಮತದ ನಿರ್ಣಯ ಅಂಗೀಕರಿಸಿದವು. ಇದು ಭಾರತದ 5000ಕ್ಕೂ ಹೆಚ್ಚು ವರ್ಷಗಳ ಇತಿಹಾಸ ಹೊಂದಿರುವ ಯೋಗಕ್ಕೆ ಸಂದ ಅಂತಾರಾಷ್ಟ್ರೀಯ ಮನ್ನಣೆಯಾಗಿದೆ.
“I firmly believed in Naturopathy And YOGA, because it is a model life style and excellent treatment system” ಎಂದು ರಾಷ್ಟ್ರಪಿತ ಮಹಾತ್ಮಗಾಂಧೀಜಿ ಅವರು ಯೋಗ ಮತ್ತು ಪ್ರಕೃತಿ ಚಿಕಿತ್ಸೆ ಹಾಗೂ ಅದರ ಮಹತ್ವವನ್ನು ಬಣ್ಣಿಸಿದ್ದಾರೆ.   ಆಧುನಿಕ ಜಗತ್ತು ತೀವ್ರ ಚಟುವಟಿಕೆಯುಳ್ಳ ಅವಿಶ್ರಾಂತ ತಾಣ. ಈ ಯುಗದಲ್ಲಿ ಜನರು ನಿರಂತರವಾಗಿ ಎಡಬಿಡದೇ ಕಾರ್ಯ ನಿರ್ವಹಿಸಬೇಕಾಗುತ್ತದೆ. ತಾಳ್ಮೆ, ಸಹನೆ-ಸಂಯಮ, ವ್ಯವಧಾನಕ್ಕೆ ಇಲ್ಲಿ ಜಾಗವಿಲ್ಲ.

aaaaaaaaaaaaaaaaaaaa

ನಮ್ಮ ಪ್ರತಿದಿನದ ವರ್ತನೆಯು ನಮ್ಮ ಪೂರ್ವಿಕರ ಕಾಲಕ್ಕಿಂತ ಸಾಕಷ್ಟು ಪರಿವರ್ತನೆಯಾಗಿ ಬೇರೆ ದಾರಿಯಲ್ಲಿ ಸಾಗಿದೆ. ಇದರ ಪರಿಣಾಮವಾಗಿ ಹೊಸ ರೋಗರುಜಿನಗಳು, ಹೊಸ ಸಮಸ್ಯೆ, ತೊಂದರೆಗಳ ಸರಮಾಲೆ ಹಾಗೂ ಕೆಲವು ದಶಕಗಳ ಹಿಂದೆ ನಾವು ಕಂಡು ಕೆಳರಿಯದಿದ್ದ ಕಾಯಿಲೆಗಳು ವ್ಯಕ್ತಿಯ ದೈಹಿಕ ಮತ್ತು ಮಾನಸಿಕ ಸ್ವಾಸ್ಥ್ಯಕ್ಕೆ ನಿರಂತರ ಕೆಡುಕಾಗಿ ಪರಿಣಮಿಸಿದೆ. ಬದಲಾಗುತ್ತಿರುವ ವಿಶ್ವ ಖಂಡಿತವಾಗಿಯೂ ನಿಲ್ಲುವುದಿಲ್ಲ.. ಆದರೂ, ನಾವು ಇದಕ್ಕೆ ಒಗ್ಗಿಕೊಂಡು ಜೀವನ ನಡೆಸಬೇಕೇ ?

ಪ್ರಕೃತಿ ವಿಸ್ಮಯವಾದುದು. ಪ್ರತಿಯೊಂದು ವೈಪರೀತ್ಯಕ್ಕೂ ನಿಸರ್ಗದಲ್ಲಿ ಪರಿಹಾರವಿದೆ, ಅದಕ್ಕೊಂದು ಉಪಶಮನವಿದೆ. ನಮ್ಮ ಇಂದಿನ ದುಃಖ, ನೋವು, ಸಂಕಟ, ಸಮಸ್ಯೆಗಳಿಗೆ ಯೋಗ ಎಂಬ ಪ್ರಾಚೀನ ವಿಜ್ಞಾನದ ಮೂಲಕ ಚಿಕಿತ್ಸೆ ಕಂಡುಕೊಳ್ಳಬಹುದು.  ದೇಹ, ಮನಸ್ಸು ಮತ್ತು ಆತ್ಮ ಇವುಗಳ ನಡುವೆ ಸಮನ್ವಯತೆ ಮತ್ತು ಸಮಾನತೆ ಸಾಧಿಸುವ ಸಮಗ್ರತಾ ಸಿದ್ದಾಂತದ ಚಿಕಿತ್ಸಾ ವಿಧಾನವಾಗಿದೆ. ಯೋಗ ಪ್ರಾಚೀನ ರೂಪದ ಒಂದು ವ್ಯಾಯಾಮವಾಗಿದ್ದು, ಸಾವಿರಾರು ವರ್ಷಗಳಿಂದ ತೀರಾ ನೈಸರ್ಗಿಕ ಹಾಗೂ ನಂಬಿಕೆ ಮಾರ್ಗದಲ್ಲಿ ಮನುಕುಲಕ್ಕೆ ಆರೋಗ್ಯದಿಂದ ಬದುಕುವ ಕೊಡುಗೆ ನೀಡಿದೆ.
ಯೋಗ ಒಂದು ರೀತಿ ಪ್ರಶಾಂತ ಮನಸ್ಸು ಮತ್ತು ಆರೋಗ್ಯಕರ ದೇಹಕ್ಕೆ ಆಧ್ಯಾತ್ಮಿಕ ಮಾರ್ಗವಾಗಿದೆ. ಇದೇ ಕಾರಣಕ್ಕಾಗಿ ಯೋಗಾಸನವು ಅಂತಾರಾಷ್ಟ್ರೀಯ ಮಟ್ಟದಲ್ಲಿ ಬಹುಳಷ್ಟು ಪ್ರಾಮುಖ್ಯತೆ ಪಡೆದುಕೊಂಡಿದೆ.

young woman training in yoga pose on rubber mat isolated

ಯೋಗ ಯಾರೊಬ್ಬರಿಗೂ ಸೀಮಿತವಲ್ಲ ಅಥವಾ ಇದು ಪ್ರತಿದಿನದ ಕ್ರಮಬದ್ದತೆ, ಪಥ್ಯ, ಅನುಪಾನ, ಜೀವನಶೈಲಿಯಲ್ಲಿನ ಬದಲಾವಣೆ ಅಥವಾ ಸಾಹಸ, ಚುರುಕು ಪರಿಶ್ರಮ ಸ್ಥಿತಿಯ ದೀರ್ಘಾವಧಿ ಪ್ರಕ್ರಿಯೆಗಳ ಬೇಡಿಕೆಯಲ್ಲ. ಈ ಪ್ರಾಚೀನ ಕಲೆಯು ನಿಮಗೆ ಇಚ್ಚಾಶಕ್ತಿ ಇದ್ದರೆ ಸುಲಭವಾಗಿ ಅಭ್ಯಾಸ ಮಾಡಲು ನಿಮ್ಮದಾಗುತ್ತದೆ ಮತ್ತು ನೀವು ಯಶಸ್ವಿಯಾಗುವ ನಿಟ್ಟಿನಲ್ಲಿ ಬೆಳಕು ಚೆಲ್ಲುತ್ತದೆ.   ಭಾರತೀಯ ಮೂಲದ ಯೋಗ ಇಂದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಾರ್ಪೊರೇಟ್ ಯೋಗದ ಸ್ವರೂಪ ಪಡೆದುಕೊಂಡಿದ್ದು ಪ್ರಾಚೀನ ವಿದ್ಯೆಗೆ ಆಧುನಿಕ ಸ್ಪರ್ಶ ನೀಡಲಾಗಿದೆ. ನೀವು ಕೆಲಸ ಮಾಡುವ ಸ್ಥಳದಲ್ಲಿನ ಒತ್ತಡ ಮತ್ತು ಖಿನ್ನತೆಯನ್ನು ಜಾಗ್ರತೆ, ಸಾಮಥ್ರ್ಯ ಮತ್ತು ಅಧಿಕ ಉತ್ಪಾದಕತೆಯನ್ನಾಗಿ ಪರಿವರ್ತಿಸುವುದು ಇದರ ಉದ್ದೇಶವಾಗಿದೆ. ಕಾರ್ಪೊರೇಟ್ ಯೋಗದಲ್ಲಿ ನೀವು ವ್ಯಯಿಸುವ ಪ್ರತಿ ಸಮಯವು ಉದ್ಯೋಗ ನೀಡುವವರಿಗೆ ಮೂರರಷ್ಟು ಲಾಭ ನೀಡುತ್ತದೆ ಎಂಬುದು ವಾಸ್ತವ ಸಂಗತಿ. ಇದು ಉದ್ಯೋಗಿಗಳ ಸಂತೋಷ ಮತ್ತು ಸೌಖ್ಯದ ಒಂದು ಭಾಗವಾಗಿದ್ದು, ಕಾರ್ಪೊರೇಟ್ ನಲ್ಲಿ ಯೋಗ ಜೀವನಶೈಲಿಯನ್ನು ಅಳವಡಿಸಿಕೊಳ್ಳಲು ಇದೊಂದೇ ಪೂರಕವಾಗಿದೆ.

aaaaaa

ಏಕ ಬಿಂದು ಮನಸ್ಸಿನ ಕಲೆಯಲ್ಲಿ ನಿಮ್ಮನ್ನು ತರಬೇತು ಗೊಳಿಸುವ ಮೂಲಕ ಯೋಗವು ತಕ್ಷಣ ನಿಮ್ಮ ಮಾನಸಿಕ ಏಕಾಗ್ರತೆ ಮತ್ತು ಗಮನವನ್ನು ಸುಧಾರಿಸುತ್ತದೆ. ಯೋಗವು ಮೆದುಳಿನ ಎಡ ಮತ್ತು ಬಲ ಭಾಗಗಳನ್ನು ಸಮನ್ವಯಗೊಳಿಸುತ್ತದೆ. ಇದರಿಂದ ನ್ಯಾಯಸಮ್ಮತ ಮತ್ತು ಸೃಜನಾತ್ಮಕ ಆಲೋಚನೆ ಒಟ್ಟಿಗೆ ಬರುತ್ತದೆ. ಸ್ಫೂರ್ತಿಯ ಸ್ಫುರಣೆಗಳು ಸಾಮಾನ್ಯವಾಗಿ ಹೆಚ್ಚಾಗುತ್ತದೆ.   ಯೋಗವು ನಿಮ್ಮ ನರಗಳು, ಎಂಡೋಕ್ರೈನ್ ಮತ್ತು ಕಾರ್ಡಿಯೋವ್ಯಾಸ್ಕುಲರ್ ವ್ಯವಸ್ಥೆ ಒಳಗಿರುವ ಸುಪ್ತ ಶಕ್ತಿಯನ್ನು ಜಾಗೃತಗೊಳಿಸುತ್ತದೆ. ಇದರಿಂದ ಮಂಪರು ಮತ್ತು ಕ್ಷೋಭೆಗಳು ಜಾಗೃತ ಮತ್ತು ಚೈತನ್ಯವಾಗಿ ಪರಿವರ್ತನೆಗೊಳ್ಳುತ್ತವೆ.
ಯೋಗವು ಮೆದುಳಿಗೆ ಆಮ್ಲಜನಕ ಪೂರೈಕೆ ಮತ್ತು ರಕ್ತದಲ್ಲಿ ಎಂಡೋರ್‍ಫೈನ್ ಹೆಚ್ಚಳದ ಮೂಲಕ ಜಡತ್ವ, ಮನೋವಿಕಾರತೆ ಮತ್ತು ಖಿನ್ನತೆಯನ್ನು ಮಾನಸಿಕವಾಗಿ ಪರಿವರ್ತಿಸುತ್ತದೆ.

ಯೋಗವು ಹಲವಾರು ಶಾಖೆಗಳನ್ನು ಒಳಗೊಂಡಿದೆ. ಹಠ ಯೋಗ ಒಂದು ದೈಹಿಕ ವ್ಯಾಯಾಮವಾಗಿದ್ದು, ಮನಸ್ಸು-ದೇಹ-ಉಸಿರಾಟ ಸಂಪರ್ಕದ ಯೋಗ ಏಕಾಗ್ರತೆಯ ಭಾಗವಾಗಿರುತ್ತದೆ. ಪ್ರಾಣ ಜೀವನ ಶಕ್ತಿಯೊಂದಿಗೆ ಪುನಃಶ್ಚೇತನಗೊಳಿಸಿ ಇಡೀ ದೇಹವನ್ನು ವಿಷಮುಕ್ತಗೊಳಿಸುತ್ತದೆ. ಎಲ್ಲ ನರಗಳು ಮತ್ತು ದೇಹದ ವಿವಿಧ ವ್ಯವಸ್ಥೆಗಳನ್ನು ಉಪಶಮನಗೊಳಿಸುತ್ತದೆ. ಧ್ಯಾನವು ಮನಸ್ಸನ್ನು ಪ್ರಶಾಂತಗೊಳಿಸುತ್ತದೆ. ಆತ್ಮ ವಿಶ್ವಾಸ ವೃದ್ಧಿಸುತ್ತದೆ ಹಾಗೂ ಏಕಾಗ್ರತೆ ಮತ್ತು ಗಮನವನ್ನು ಸುಧಾರಿಸುತ್ತದೆ.

ಸಿಸ್ಟಮ್ಯಾಟಿಕ್ ರಿಲ್ಯಾಕ್ಯೆಷನ್:

ಅಪ್ರಜ್ಞಾಪೂರ್ವಕವಾಗಿ ನೀವು ಹಿಡಿದಿಟ್ಟುಕೊಂಡಿರುವ ಒತ್ತಡವನ್ನು ಆಳ ಮಟ್ಟದಿಂದ ಬಿಡುಗಡೆಗೊಳಿಸುವುದ ರೊಂದಿಗೆ ನಿಮ್ಮ ದೇಹದ ಇಡೀ ವ್ಯವಸ್ಥೆಗೆ ವಿಶ್ರಾಂತಿ ನೀಡುತ್ತದೆ.   ಯೋಗದ ಪ್ರಯೋಜನಗಳನ್ನು ನಾವು ಸಂಕ್ಷಿಪ್ತವಾಗಿ ಎರಡು ವರ್ಗಗಳಾಗಿ ವಿಂಗಡಿಸಬಹುದು.  ದೈಹಿಕ: ನಿದ್ರೆ ಸುಧಾರಣೆ, ರೋಗ ಪ್ರತಿರೋಧ ವೃದ್ಧಿ, ನೋವು ಕಡಿಮೆಯಾಗುವಿಕೆ, ಭಂಗಿ ಸುಧಾರಣೆ, ತೂಕ ಸಹಜತೆ, ಪ್ರತಿಕ್ರಿಯೆ ಸಮಯ ಸುಧಾರಣೆ, ಶಕ್ತಿ ಮಟ್ಟ ಹೆಚ್ಚಳ, ಮಾಂಸಖಂಡಗಳ ಸಾಮಥ್ರ್ಯ ಹೆಚ್ಚಳ, ಬಾಳಿಕೆ ಹೆಚ್ಚಳ, ಸ್ರವಿಸುವಿಕೆ ಕಾರ್ಯ ಸುಧಾರಣೆ, ನಾಡಿ ಬಡಿತ ಪ್ರಮಾಣ ನಿಯಂತ್ರಣ, ಎಂಡೋಕ್ರೈನ್ ಕಾರ್ಯ ನಿಯಂತ್ರಣ, ಉಸಿರಾಟ ಸಮರ್ಪಕತೆ, ದೊಡ್ಡ ಕರುಳು ಕಾರ್ಯ ಸಮರ್ಪಕತೆ, ರಕ್ತದೊತ್ತಡ ಇಳಿಮುಖ, ಆಟೋನೊಮಿಕ್ ನರ್ವ್ ಸಿಸ್ಟಮ್ ಸ್ಥಿರತೆ, ಮಾನಸಿಕ, ಏಕಾಗ್ರತೆ ಹೆಚ್ಚಳ, ಸ್ಮರಣ ಶಕ್ತಿ ಸುಧಾರಣೆ, ಕಲಿಕಾ ಸಾಮಥ್ರ್ಯ ಸುಧಾರಣೆ, ಭಾವನೆ ಸುಧಾರಣೆ, ಸೌಖ್ಯತೆ ವೃದ್ಧಿ, ಮನಸ್ಸು/ದೇಹ ನರ ಸಂಪರ್ಕ ಸುಧಾರಣೆ, ಸ್ವಯಂ-ಸ್ವೀಕಾರ ವರ್ಧನೆ, ಗಮನ ಸುಧಾರಣೆ.

ಸ್ವಯಂ-ವಾಸ್ತವ ವೃದ್ಧಿ, ಸಾಮಾಜಿಕ ಕೌಶಲ್ಯ ವೃದ್ಧಿ, ಹತಾಶೆ ಕಡಿಮೆಯಾಗುವಿಕೆ/ನಿರ್ಮೂಲನೆ, ಭಾವೋದ್ವೇಗ ಇಳಿಕೆ/ನಿರ್ಮೂಲನೆ,ದ್ವೇಷ ಇಳಿಕೆ/ನಿರ್ಮೂಲನೆ, ಸಮತೋಲನ ಸುಧಾರಣೆ, ಗಾಢ ಅರಿವು ಸುಧಾರಣೆ, ಸ್ಥಿರತೆ ಸುಧಾರಣೆ.  ಆಸನಗಳು ದೇಹಕ್ಕೆ ಸ್ಥಿರತೆ, ಆರೋಗ್ಯ ಮತ್ತು ಹಗುರತೆ ನೀಡುತ್ತದೆ. ಸ್ಥಿರ ಮತ್ತು ಉತ್ತಮ ಭಂಗಿ ಮಾನಸಿಕ ಸಾಮ್ಯಾವಸ್ಥೆ ಕಲ್ಪಿಸುತ್ತದೆ ಮತ್ತು ಮನಸ್ಸಿನ ಚಂಚಲತೆಯನ್ನು ತಡೆಗಟ್ಟುತ್ತದೆ. ಇದು ಮಾನಸಿಕ ಮತ್ತು ದೈಹಿಕ ಗಂಟುಗಳನ್ನು ಬಿಡುಗಡೆ ಮಾಡುತ್ತದೆ. ಯೋಗಾಸನವನ್ನು ನಿಯತವಾಗಿ ಅಭ್ಯಾಸ ಮಾಡುವುದರಿಂದ ಭೌತಿಕ ದೇಹವನ್ನು ಗರಿಷ್ಠ ಸ್ಥಿತಿಯಲ್ಲಿ ನಿರ್ವಹಿಸುತ್ತದೆ ಮತ್ತು ಅನಾರೋಗ್ಯ ದೇಹದಲ್ಲೂ ಆರೋಗ್ಯವನ್ನು ವರ್ಧಿಸುತ್ತದೆ.

ಪ್ರಾಣಾಯಾಮ:

aaaaaaaaaaaaaaaaaaa

ಪ್ರಾಣಾಯಾಮವು ಉಸಿರಾಟದ ಒಂದು ವಿಜ್ಞಾನವಾಗಿದ್ದು, ಇದರಲ್ಲಿ ಉಸಿರಾಟದ ವ್ಯವಸ್ಥೆಯನ್ನು ಬಲಗೊಳಿಸಲು, ನರ ವ್ಯವಸ್ಥೆಯನ್ನು ಸಮರ್ಪಕಗೊಳಿಸಲು ಮತ್ತು ಪ್ರಶಾಂತತೆ ತರಲು ನಿಧಾನ ಮತ್ತು ಆಳ ಉಸಿರಾಟದ ಲಯಬದ್ದ ವಿಧಾನಗಳನ್ನು ಅಭ್ಯಾಸಿಸಲಾಗುತ್ತದೆ. ಪ್ರಾಣಾಯಾಮದ ಕೌಶಲ್ಯಗಳು ವಿಧಾನವನ್ನು ಒದಗಿಸಿ ಆ ಮೂಲಕ ಜೀವನ ಶಕ್ತಿಯನ್ನು ಸಕ್ರಿಯಗೊಳಿಸಿ ಒಬ್ಬ ವ್ಯಕ್ತಿಯ ಸಾಮಾನ್ಯ ಗಡಿಗಳು ಅಥವಾ ಇತಿಮಿತಿಗಳ ಆಚೆಗೆ ತೆರಳಲು ಹಾಗೂ ಅಧಿಕ ಮಟ್ಟದ ಕಂಪನ ಶಕ್ತಿ ಮತ್ತು ಜಾಗೃತಿಯನ್ನು ಹೊಂದಲು ಅನುಕೂಲ ಕಲ್ಪಿಸುತ್ತದೆ.

ಧ್ಯಾನ:

ಧ್ಯಾನವು ಸರ್ವೋತ್ತಮ ಆನಂದ ಇರುವ ವ್ಯಕ್ತಿಯ ಪ್ರಜ್ಞೆಯನ್ನು ಅನ್ವೇಷಿಸಲು ಮನಸ್ಸನ್ನು ಸ್ಪಷ್ಟ ಸ್ಥಿತಿಗೆ ತರುವ ವೈಜ್ಞಾನಿಕ ಕೌಶಲ್ಯವಾಗಿದೆ. ಧ್ಯಾನವು ನಿಮ್ಮ ಜೀವನದಲ್ಲಿ ಶಾಂತಿ, ನೆಮ್ಮದಿ ಮತ್ತು ಸೌರ್ಹಾದತೆಯನ್ನು ತರುತ್ತದೆ. ಧ್ಯಾನದ ಮೂಲಕ ಪ್ರಸ್ತುತ ಸ್ಥಿತಿಯ ಬಗ್ಗೆ ಜಾಗ್ರತೆಯಿಂದ ಇರಲು ಮನಸ್ಸಿಗೆ ತರಬೇತಿ ನೀಡಬಹುದಾಗಿದೆ. ಧ್ಯಾನವು ಪರಮ ಸುಖ ಸಂತೋಷ ಮತ್ತು ಜ್ಞಾನದ ವಿಷಯಗಳ ಸನಾತನತ್ವದ ದ್ವಾರವಾಗಿದೆ.

ಕ್ರಮಬದ್ದ ವಿಶ್ರಾಂತಿ:

ವಿಶ್ರಾಂತಿಯ ಕೌಶಲ್ಯವು ವ್ಯಕ್ತಿ ವಿಶ್ರಮಿಸಲು ಸಹಕಾರಿಯಾಗುವ ಯಾವುದೇ ವಿಧಾನ, ಪ್ರಕ್ರಿಯೆ, ಅಥವಾ ಚಟುವಟಿಕೆಯಾಗಿದೆ. ಉನ್ನತ ಮಟ್ಟ ಪ್ರಶಾಂತತೆಯನ್ನು ಹೊಂದಲು ಇಲ್ಲವೇ ಉದ್ವೇಗ, ಒತ್ತಡ ಅಥವಾ ಕೋಪದ ಮಟ್ಟವನ್ನು ಕಡಿಮೆ ಮಾಡಲು ನೆರವಾಗುವ ಕ್ರಿಯೆಯಾಗಿದೆ. ವಿಶ್ರಮಿಸುವ ಕೌಶಲ್ಯಗಳನ್ನು ವ್ಯಾಪಕ ಒತ್ತಡ ನಿರ್ವಹಣಾ ಕಾರ್ಯಕ್ರಮದ ಒಂದು ಘಟಕವಾಗಿ ಪರಿಗಣಿಸಲಾಗುತ್ತದೆ. ಇದು ಮಾಂಸಖಂಡಗಳ ಒತ್ತಡವನ್ನು ನಿವಾರಿಸಿ, ಅಧಿಕ ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ ಹಾಗೂ ಹೃದಯ ಮತ್ತು ಉಸಿರಾಟದ ಪ್ರಮಾಣವನ್ನು ಇಳಿಸುತ್ತದೆ. ಹೀಗೆ ಇದು ಅನೇಕ ಆರೋಗ್ಯಕರ ಪ್ರಯೋಜನಗಳನ್ನು ಒಳಗೊಂಡಿದೆ.

ಷಟ್‍ಕರ್ಮ:

ಷಟ್‍ಕರ್ಮ ಅಥವಾ ಷಟ್‍ಕ್ರಿಯಾ ಆರು ಶುದ್ದೀಕರಣ ಕೌಶಲ್ಯಗಳನ್ನು ಒಳಗೊಂಡಿರುತ್ತದೆ. ನೇತಿ, ದೌತಿ, ನೌಲಿ, ಬಸ್ತಿ, ಕಪಾಲಬಸ್ತಿ ಮತ್ತು ತ್ರಾಟಕ ಇವೇ ಈ ಆರು ಷಟ್‍ಕರ್ಮಗಳಾಗಿವೆ. ಇಂದಿನ ಅನಾರೋಗ್ಯಕರ ಪರಿಸರ, ಜೀವನ ಶೈಲಿಗಳು, ದೇಹ ಮತ್ತು ಮನಸ್ಸುಗಳೊಂದಿಗೆ, ಸಂಪ್ರದಾಯಿಕ ಔಷಧಿಗಳು ಮತ್ತು ರೂಢಿಗತ ವಿಧಾನಗಳ ಜಾಗದಲ್ಲಿ ಸಾಮಾನ್ಯ ರೋಗಗಳ ವ್ಯಾಪಕ ಶ್ರೇಣಿಯ ಚಿಕಿತ್ಸೆಗಾಗಿ ಫಿಸಿಕಲ್ ಥೆರಪಿಯಾಗಿ ಆಧುನಿಕ ಮಂದಿಯಿಂದ ಈ ಕೌಶಲ್ಯಗಳನ್ನು ಪರಿಣಾಮಕಾರಿಯಾಗಿ ಬಳಸಬಹುದು. ಯೋಗ ಶುದ್ದೀಕರಣ ಕೌಶಲ್ಯಗಳನ್ನು ಸಹಸ್ರಾರು ವರ್ಷಗಳಿಂದಲೂ ನಿಯಂತ್ರಣ ಮತ್ತು ಗುಣಪಡಿಸುವ ಔಷಧಗಳಾಗಿ ಎರಡಕ್ಕೂ ಉಪಯೋಗಿಸಲಾಗುತ್ತಿದೆ.

ಯೋಗ ಥೆರಪಿ:

ಯೋಗ ಥೆರಪಿಯು ಮಾನವನ ನಿರ್ದಿಷ್ಟ ದೋಷಗಳ ನಿವಾರಣೆಗಾಗಿ ಯೋಗ ತತ್ತ್ವಗಳು, ವಿಧಾನಗಳು ಮತ್ತು ಕೌಶಲ್ಯಗಳ ಅನ್ವಯಿಸುವಿಕೆಯನ್ನು ಒಳಗೊಂಡಿರುತ್ತದೆ. ಹಲವಾರು ಸಾಮಾನ್ಯ ರೋಗ ದೋಷಗಳಿಗೆ ಯೋಗ ಥೆರಪಿಯು ತೀರಾ ಪರಿಣಾಮಕಾರಿ ಕೊಡುಗೆಯ ಚಿಕಿತ್ಸೆಗಳಲ್ಲಿ ಒಂದಾಗಿದೆ ಎಂಬುದನ್ನು ವೈದ್ಯಕೀಯ ಸಂಶೋಧನೆಗಳು ತೋರಿಸಿವೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Facebook Comments

Sri Raghav

Admin