ಪ್ರಾಣಿಗಳೊಂದಿಗೆ ವಿಭಿನ್ನವಾಗಿ ಹೋಳಿ ಆಚರಿಸಿದ ವಾಟಾಳ್ ನಾಗರಾಜ್

ಈ ಸುದ್ದಿಯನ್ನು ಶೇರ್ ಮಾಡಿ

Vatal-Holi

ಬೆಂಗಳೂರು, ಮಾ.19- ಲೂಟಿಯಾ ಗುತ್ತಿರುವ ನೈಸರ್ಗಿಕ ಸಂಪತ್ತು ರಕ್ಷಣೆ, ವನ್ಯ ಜೀವಿಗಳ ಸಂರಕ್ಷಣೆಗೆ ಆಗ್ರಹಿಸಿ ವಿನೂತನ ಚಳುವಳಿಗೆ ಹೆಸರಾದ ಕನ್ನಡ ಚಳುವಳಿ ವಾಟಾಳ್ ನಾಗರಾಜ್ ಅವರು ಪ್ರಾಣಿಗಳ ಮೇಲೆ ಬಣ್ಣ ಎರಚುವ ಮೂಲಕ ಮೈಸೂರು ಬ್ಯಾಂಕ್ ವೃತ್ತದಲ್ಲಿಂದು ಬಣ್ಣದೋಕುಳಿ ಆಚರಿಸಿದರು.
ಕರ್ನಾಟಕದಲ್ಲಿ ಅಪಾರವಾದ ನೈಸರ್ಗಿಕ ಸಂಪತ್ತಿದ್ದು , ಅದನ್ನು ನಿರಂತರವಾಗಿ ಲೂಟಿ ಮಾಡಲಾಗುತ್ತಿದೆ. ಕಬ್ಬಿಣದ ಅದಿರು, ಗ್ರಾನೈಟ್, ಖನಿಜ ಸಂಪತ್ತನ್ನು ಹಲವರು ಕೊಳ್ಳೆ ಹೊಡೆಯುತ್ತಿದ್ದಾರೆ. ಇದನ್ನು ಹಿಡಿದುಕೊಟ್ಟರೂ ನಾಜೂಕಾಗಿ ಕಾನೂನಿನಿಂದ ತಪ್ಪಿಸಿಕೊಂಡು ಸಂಪತ್ತನ್ನು ಲೂಟಿ ಮಾಡುವುದನ್ನು ಮುಂದುವರೆಸಿ ರುವುದು ಅತ್ಯಂತ ಆತಂಕಕಾರಿ ವಿಷಯ.

ನೈಸರ್ಗಿಕ ಸಂಪತ್ತು ನಾಶವಾಗುತ್ತಿರುವು ದರಿಂದ ವನ್ಯಜೀವಿಗಳು ಸರ್ವನಾಶವಾ ಗುತ್ತಿವೆ. ಇದಕ್ಕಾಗಿ ಜಾಗೃತಿ ಮೂಡಿಸಲು ಇಂದು ಕತ್ತೆ, ಕುರಿ, ಮೇಕೆಗಳೊಂದಿಗೆ ಹೋಳಿ ಹಬ್ಬವನ್ನು ವಾಟಾಳ್ ಚಳುವಳಿ ಪಕ್ಷದ ವತಿಯಿಂದ ಹಮ್ಮಿಕೊಳ್ಳಲಾಗಿತ್ತು ಎಂದು ಹೇಳಿದರು.   ಶಾಸನ ಸಭೆಗಳಲ್ಲಿ ಪ್ರಜಾತಂತ್ರದ ಮೌಲ್ಯಗಳು ಕುಸಿಯುತ್ತಿವೆ. ಜನಸೇ ವೆಯ ಆಸಕ್ತಿ ಇರುವವರು ಶಾಸನಸಭೆಗೆ ಬರುತ್ತಿಲ್ಲ. ತಮ್ಮ ಅಕ್ರಮ ಸಂಪತ್ತನ್ನು ರಕ್ಷಿಸಿಕೊಳ್ಳಲು ವಿಧಾನಸಭೆ, ವಿಧಾನ ಪರಿಷತ್, ಲೋಕಸಭೆಗೆ ಬರುವವರೇ ಹೆಚ್ಚಾಗಿದ್ದಾರೆ.ಇದರಿಂದ ಸಂವಿಧಾನದ ಆಶಯಗಳು ಉಳಿಯುವ ಸಾಧ್ಯತೆ ಕ್ಷೀಣವಾಗುತ್ತಿದೆ. ಸೇವಾ ಮನೋಭಾವದವರು ಶಾಸನ ಸಭೆಗಳಿಗೆ ಬರಬೇಕು, ಜನರ ಆಯ್ಕೆಯು ಕೂಡ ಈ ನಿಟ್ಟಿನಲ್ಲಿರಬೇಕು, ಕಾಳಸಂತೆಕೋರರು, ಗಣಿ ಲೂಟಿಕೋರರು, ರಿಯಲ್ ಎಸ್ಟೇಟ್ ಮಾಫಿಯಾ ದಣಿಗಳು ಇವರೇ ಇಂದಿನ ರಾಜಕೀಯದಲ್ಲಿ ಹೆಚ್ಚಾಗಿದ್ದು , ಜನ ಸಾಮಾನ್ಯರ ಪರಿಸ್ಥಿತಿ ಕೇಳುವವರು ಇಲ್ಲದಂತಾಗಿದೆ ಎಂದರು.

ಇದಕ್ಕೆ ಒಂದ ಅಂತ್ಯ ಹಾಡಲೇಬೇಕು. ಜನಸಾಮಾನ್ಯರು ಈ ಬಗ್ಗೆ ಅರಿವು ಮೂಡಿಸಿಕೊಂಡು ಉತ್ತಮರನ್ನು ಆಯ್ಕೆ ಮಾಡಬೇಕೆಂದು ಅವರು ಹೇಳಿದರು.
ನೈಸರ್ಗಿಕ ಸಂಪತ್ತು ಲೂಟಿ ಮಾಡುವವರ ಬಗ್ಗೆ ಸಮಗ್ರ ತನಿಖೆಯಾಗಬೇಕು, ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು. ಆಗ ಮಾತ್ರ ನಮ್ಮ ನಿಸರ್ಗ ಉಳಿಯುತ್ತದೆ. ಇಲ್ಲದಿದ್ದರೆ ಅಳಿವು ಗ್ಯಾರಂಟಿ ಎಂದು ಅವರು ಹೇಳಿದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin