ಪ್ರಾಣಿ ರಕ್ಷಣೆಗೆ ಕೈ ಜೋಡಿಸಿದ ಕೊಹ್ಲಿ

ಈ ಸುದ್ದಿಯನ್ನು ಶೇರ್ ಮಾಡಿ

agDGAAG

ನಾಸಿಕ್/ಮುಂಬೈ, ಆ.6– ಪ್ರಾಣಿ ರಕ್ಷಣೆ ಕಾನೂನುಗಳನ್ನು  ಬಲಗೊಳಿಸುವಂತೆ ಸರ್ಕಾರವನ್ನು ಒತ್ತಾಯಿಸಲು ಪ್ರಾಣಿದಯಾ ಸಂಘಟನೆ ಪೆಟಾ ಇಂಡಿಯಾ ಸಂಸ್ಥೆ ಸಲ್ಲಿಸಿರುವ ಅರ್ಜಿಗೆ ಕ್ರಿಕೆಟ್ ತಾರೆ ವಿರಾಟ್ ಕೊಹ್ಲಿ ಮತ್ತು ಬಾಲಿವುಡ್ ನಟ ಜಾನ್ ಅಬ್ರಹಾಂ ಸೇರಿದಂತೆ ಅನೇಕ ಖ್ಯಾತನಾಮರು ಸಹಿ ಹಾಕಿದ್ದಾರೆ. ದೇಶದ ವಿವಿಧೆಡೆ ಇತ್ತೀಚೆಗೆ ಪ್ರಾಣಿಗಳ ಮೇಲೆ ನಡೆದ ಹಿಂಸಾತ್ಮಕ ಪ್ರಕರಣಗಳನ್ನು ಉಲ್ಲೇಖಿಸಲಾಗಿದೆ. ಇಬ್ಬರು ಯುವಕರು ಮಹಡಿ ಮೇಲಿಂದ ನಾಯಿಯೊಂದನ್ನು ಕೆಳಗೆ ತಳ್ಳಿದ ಪ್ರಕರಣ ಹಾಗೂ ಓರ್ವ ಬಿಜೆಪಿ ಶಾಸಕನ ಆಕ್ರಮಣದಿಂದ ಪೊಲೀಸ್ ಕುದುರೆ ಶಕ್ತಿಮಾನ್ ಕಾಲು ಕಳೆದುಕೊಂಡ ಘಟನೆಯನ್ನು ಅರ್ಜಿಯಲ್ಲಿ ಪ್ರಸ್ತಾಪಿಸಿರುವ ಪೆಟಾ, ಪ್ರಾಣಿಗಳ ಮೇಲಿನ ಕ್ರೂರತ್ವ ತಡೆಯಲು ದೊಡ್ಡಮೊತ್ತದ ದಂಡಗಳೊಂದಿಗೆ ಕಠಿಣ ಕ್ರಮ ಜರುಗಿಸುವಂತೆ ಆಗ್ರಹಪಡಿಸಿದೆ.

Facebook Comments

Sri Raghav

Admin