ಪ್ರಾಣ ಉಳಿಸಿಕೊಳ್ಳಲು ಶಾರ್ಪ್ ಶೂಟರ್’ಗಳ ಮೊರೆ ಹೋಗುತ್ತಿರುವ ರಾಜ್ಯದ ರಾಜಕಾರಣಿಗಳು

ಈ ಸುದ್ದಿಯನ್ನು ಶೇರ್ ಮಾಡಿ

Security-01

ವೈ.ಎಸ್.ರವೀಂದ್ರ

ಬೆಂಗಳೂರು, ನ.5-ಉತ್ತರ ಭಾರತಕ್ಕೆ ಸೀಮಿತವಾಗಿದ್ದ ಶಾರ್ಪ್ ಶೂಟರ್ಗಳನ್ನು ಪ್ರಾಣ ರಕ್ಷಣೆಗೆ ನಿಯೋಜಿಸಿಕೊಳ್ಳುವ ಸಂಸ್ಕøತಿ ಇದೀಗ ಕರ್ನಾಟಕದ ರಾಜಕಾರಣಿಗಳಿಗೂ ಆವರಿಸಿದೆ.
ಕಾರಣ ಕೆಲವು ಮತೀಯ ಸಂಘಟನೆಗಳಿಂದ ನಡೆಯುತ್ತಿರುವ ಹಾಡಹಗಲೇ ಕಗ್ಗೊಲೆ, ಹಲ್ಲೆ, ಜೀವ ಬೆದರಿಕೆಯಿಂದ ಕೆಲವು ರಾಜಕಾರಣಿಗಳು ಶಾರ್ಪ್ ಶೂಟರ್ಗಳನ್ನು ನೇಮಿಸಿಕೊಳ್ಳಲು ಮುಂದಾಗಿದ್ದಾರೆ. ಕೆಲ ದಿನಗಳ ಹಿಂದೆ ಶಿವಾಜಿನಗರದಲ್ಲಿ ಆರ್ಎಸ್ಎಸ್ ಕಾರ್ಯಕರ್ತ ರುದ್ರೇಶ್ ಎಂಬಾತನನ್ನು ಕೇರಳ ಮೂಲದ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್ಐ)ದ ಮುಖಂಡರು ಹಾಡಹಗಲೇ ಕೊಚ್ಚಿ ಕೊಲೆ ಮಾಡಿದ್ದರು.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಬೆಂಗಳೂರು ನಗರ ಪೊಲೀಸರು ಪಿಎಫ್ಐ ಸಂಘಟನೆಯ ನಗರ ಘಟಕದ ಅಧ್ಯಕ್ಷ ಹಾಗೂ ಪ್ರಮುಖ ರೂವಾರಿ ಎನ್ನಲಾದ ಅಜೀಮ್ ಶರೀಫ್, ಮಹಮ್ಮದ್ ಸಾದಿಕ್ ಅಲಿಯಾಸ್ ಮಹಮ್ಮದ್ ಮಜರ್, ಮಹಮ್ಮದ್ ಮುಜಾಬಿಲ್ಲಾ ಅಲಿಯಾಸ್ ಮೌಲಾ ಹಾಗೂ ವಾಸೀಮ್ ಅಹಮ್ಮದ್ ಮತ್ತು ಇರ್ಫಾನ್ ಪಾಷ ಎಂಬುವರನ್ನು ಬಂಧಿಸಲಾಗಿದೆ. ಈ ಆರೋಪಿಗಳು ಪೊಲೀಸರ ವಿಚಾರಣೆ ವೇಳೆ ದಿನಕ್ಕೊಂದು ಸ್ಫೋಟಕ ಮಾಹಿತಿಗಳನ್ನು ಹೊರಹಾಕುತ್ತಿದ್ದಾರೆ. ಆರ್ಎಸ್ಎಸ್ ಕಾರ್ಯಕರ್ತ ರುದ್ರೇಶ್ ಜೊತೆಗೆ ಇನ್ನೂ ಕೆಲವು ರಾಜಕಾರಣಿಗಳು, ಧಾರ್ಮಿಕ ಮುಖಂಡರು ಮತ್ತು ಕೆಲವು ಪೊಲೀಸ್ ಅಧಿಕಾರಿಗಳನ್ನೂ ಸಹ ಹತ್ಯೆಗೈಯ್ಯಲು ಸಂಚು ರೂಪಿಸಿರುವುದಾಗಿ ಬಾಯ್ಬಿಟ್ಟಿದ್ದಾರೆ.

ವಿಶೇಷವಾಗಿ ಪಿಎಫ್ಐ ಆರ್ಎಸ್ಎಸ್, ಬಿಜೆಪಿ ಮತ್ತು ಧಾರ್ಮಿಕ ಮುಖಂಡರನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಲು ಸಂಚು ರೂಪಿಸಿತ್ತು. ರುದ್ರೇಶ್ ಕೊಲೆಯಾದ ಬಳಿಕ ಇನ್ನೂ ಕೆಲವರನ್ನು ಇದೇ ಮಾದರಿಯಲ್ಲಿ ಹತ್ಯೆ ಮಾಡಿ ಸಾರ್ವಜನಿಕ ವಲಯದಲ್ಲಿ ಭಯದ ವಾತಾವರಣ ಸೃಷ್ಟಿಸುವುದು ಇವರ ಒಂದಂಶದ ಕುತಂತ್ರವಾಗಿತ್ತು. ಇದೀಗ ಆರೋಪಿಗಳೇ ಬಾಯ್ಬಿಟ್ಟಿರುವಂತೆ ಕೆಲವರು ತಮ್ಮ ಹಿಟ್ಲಿಸ್ಟ್ನಲ್ಲಿ ಇದ್ದರೆಂಬುದನ್ನು ಒಪ್ಪಿಕೊಂಡಿದ್ದಾರೆ. ಹೀಗಾಗಿ ರಾಜಕಾರಣಿಗಳು, ಧಾರ್ಮಿಕ ಮುಖಂಡರು ಶಾರ್ಪ್ಶೂಟರ್ಗಳ ಮೊರೆ ಹೋಗಿದ್ದಾರೆ.

ಯಾರು ಈ ಶಾರ್ಪ್ಶೂಟರ್’ಗಳು..?

ಯಾವುದೇ ಒಬ್ಬ ವ್ಯಕ್ತಿಗೆ ಸಮಾಜಘಾತುಕ ಶಕ್ತಿಗಳಿಂದ ಜೀವ ಬೆದರಿಕೆ ಇದೆ ಎಂಬುದು ದಿಟವಾದ ನಂತರ ತಮ್ಮ ಆತ್ಮರಕ್ಷಣೆಗಾಗಿ ಖಾಸಗಿ ಭದ್ರತಾಪಡೆಗಳನ್ನು ನಿಯೋಜಿಸಿಕೊಳ್ಳುವುದೇ ಶಾರ್ಟ್ ಶೂಟರ್. ಈ ಹಿಂದೆ ಆಂಧ್ರಪ್ರದೇಶ, ಅಸ್ಸೋಂ, ಬಿಹಾರ, ಉತ್ತರ ಪ್ರದೇಶ, ಛತ್ತೀಸ್ಗಡ, ಜಾರ್ಖಂಡ್, ಪಶ್ಚಿಮ ಬಂಗಾಳ ಮತ್ತಿತರ ಕಡೆ ನಕ್ಸಲೀಯರ ಉಪಟಳ ಹೆಚ್ಚಾಗಿದ್ದ ವೇಳೆ ಜನಪ್ರತಿನಿಧಿಗಳು ತಮ್ಮ ರಕ್ಷಣೆಗಾಗಿ ಶಾರ್ಪ್ ಶೂಟರ್ಸ್ಗಳನ್ನು ನೇಮಿಸಿಕೊಳ್ಳುತ್ತಿದ್ದರು.  ಈ ಶಾರ್ಪ್ ಶೂಟರ್ಸ್ಗಳು ತರಬೇತಿ ಪಡೆದು ನಿಖರವಾಗಿ ಗುಂಡು ಹಾರಿಸುವುದರಲ್ಲಿ ಸಾಕಷ್ಟು ಅನುಭವ ಹೊಂದಿರುತ್ತಾರೆ. ಎದುರಾಳಿಗಳ ದಾಳಿ ವೇಳೆ ಅವರನ್ನು ಕ್ಷಣಾರ್ಧದಲ್ಲೇ ಹೊಡೆದುರುಳಿಸುತ್ತಾರೆ.

ಬಳ್ಳಾರಿಗೂ ಕಾಲಿಟ್ಟಿತ್ತು:

ಈ ಹಿಂದೆ ಬಳ್ಳಾರಿ ಜಿಲ್ಲೆಯಲ್ಲಿ ವ್ಯಾಪಕ ಗಣಿಗಾರಿಕೆ ನಡೆಯುತ್ತಿದ್ದ ವೇಳೆ ಅಂದಿನ ಬಹುತೇಕ ಗಣಿ ಮಾಲೀಕರು ಶಾರ್ಪ್ ಶೂಟರ್ಸ್ಗಳನ್ನು ನೇಮಕ ಮಾಡಿಕೊಳ್ಳುತ್ತಿದ್ದರು. ಜನಾರ್ದನರೆಡ್ಡಿ, ಶ್ರೀರಾಮುಲು, ಅನಿಲ್ ಲಾಡ್, ಸಂತೋಷ್ ಲಾಡ್, ಸಜ್ಜನ್ ಜಿಂದಾಲ್ ಸೇರಿದಂತೆ ಅನೇಕರು ಲಕ್ಷಾಂತರ ರೂ. ವ್ಯಯಿಸಿ ತಮ್ಮ ಪ್ರಾಣರಕ್ಷಣೆಗಾಗಿ ಶಾರ್ಪ್ಶೂಟರ್ಸ್ಗಳನ್ನು ನೇಮಿಸಿಕೊಳ್ಳುತ್ತಿದ್ದರು. ಇನ್ನು ಭೂಗತ ಪಾತಕಿಗಳು ಕೂಡ ಇದೇ ಮಾದರಿ ಭದ್ರತೆಯನ್ನು ಅಳವಡಿಸಿಕೊಳ್ಳುತ್ತಿದ್ದರು. ಇದರಲ್ಲಿ ಪ್ರಮುಖವಾಗಿ ಭೂಗತ ಜಗತ್ತಿನಿಂದ ಹೊರಬಂದು ನ್ಯಾಯಾಲಯದಿಂದ ಕ್ಲೀನ್ಚಿಟ್ ಪಡೆದ ಮುತ್ತಪ್ಪರೈಗೆ ಈಗಲೂ ಭೂಗತ ಪಾತಕಿಗಳಿಂದ ಪ್ರಾಣ ಬೆದರಿಕೆ ಇದೆ. ಹೀಗಾಗಿ ಅವರು ಶಾರ್ಪ್ ಶೂಟರ್ಸ್ಗಳನ್ನು ನೇಮಕ ಮಾಡಿಕೊಂಡಿದ್ದಾರೆ.
ಪಿಎಫ್ಐ ಸಂಘಟನೆಯಿಂದ ಜೀವ ಬೆದರಿಕೆ ಇರುವುದರಿಂದ ಆರ್ಎಸ್ಎಸ್, ಬಿಜೆಪಿ ಮತ್ತು ಧಾರ್ಮಿಕ ಮುಖಂಡರು ಶಾರ್ಪ್ಶೂಟರ್ಸ್ಗಳ ಮೊರೆ ಹೋಗಿದ್ದಾರೆ. ಯಾವುದೇ ಒಬ್ಬ ವ್ಯಕ್ತಿಗೆ ಪ್ರಾಣ ಬೆದರಿಕೆ ಇರುವುದು ಖಚಿತವಾದರೆ ಸಾಮಾನ್ಯವಾಗಿ ಗೃಹ ಇಲಾಖೆಯಿಂದ ಭದ್ರತೆ ಒದಗಿಸಲಾಗುತ್ತದೆ. ಆದರೆ ಕೇವಲ ಬೆರಳೆಣಿಕೆಯ ಭದ್ರತಾಪಡೆಗಳು ಸಾಲುವುದಿಲ್ಲ ಎಂಬುದು ಕೆಲವರ ವಾದ. ಇದಕ್ಕಾಗಿ ಲಕ್ಷಾಂತರ ರೂ.ಗಳನ್ನು ಖರ್ಚು ಮಾಡಿ ಶಾರ್ಪ್ ಶೂಟರ್ಸ್ ನೇಮಕ ಮಾಡಿಕೊಳ್ಳುವತ್ತ ಚಿತ್ತ ಹರಿಸಿದ್ದಾರೆ.

ಯಾರ್ಯಾರಿಗೆ ಶಾರ್ಪ್ ಶೂಟರ್ಸ್ ಸೆಕ್ಯೂರಿಟಿ ?

ಬಿಎಸ್.ಯಡಿಯೂರಪ್ಪ (ಬಿಜೆಪಿ ರಾಜ್ಯಾಧ್ಯಕ್ಷ),
ಶೋಭಾಕರಂದ್ಲಾಜೆ (ಸಂಸದೆ),
ಪ್ರತಾಪ್ಸಿಂಹ (ಸಂಸದ)
ನಳೀನ್ಕುಮಾರ್ ಕಟೀಲು (ಸಂಸದ)
ಶಾಸಕರಾದ ಸಿ.ಟಿ.ರವಿ, ಸುನೀಲ್ಕುಮಾರ್, ಕೆ.ಜೆ.ಬೋಪಯ್ಯ, ಅಪ್ಪಚ್ಚುರಂಜನ್, ಶ್ರೀರಾಮಸೇನೆ ರಾಜ್ಯಾಧ್ಯಕ್ಷ ಪ್ರಮೋದ್ ಮುತಾಲಿಕ್ ಸೇರಿದಂತೆ ಇನ್ನೂ ಕೆಲವು ಧಾರ್ಮಿಕ ಮುಖಂಡರು ಶಾರ್ಪ್ ಶೂಟರ್ಸ್ಗಳನ್ನು ನೇಮಿಸಿಕೊಳ್ಳಲು ಮುಂದಾಗಿದ್ದಾರೆ.

► Follow us on –  Facebook / Twitter  / Google+

Facebook Comments

Sri Raghav

Admin