ಪ್ರಾಥಮಿಕ ಆರೋಗ್ಯ ಕೇಂದ್ರ ಅಭಿವೃದ್ಧಿಗೆ ನಿರ್ಧಾರ

ಈ ಸುದ್ದಿಯನ್ನು ಶೇರ್ ಮಾಡಿ

12

ಗದಗ,ಫೆ.3- ಬೆಟಗೇರಿಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ 10 ಹಾಸಿಗೆಗಳ ಘಟಕ, ಶುದ್ಧ ಕುಡಿಯುವ ನೀರಿನ ಘಟಕ, ಕಂಪೌಂಡ ನಿರ್ಮಿಸುವುದು ಸಲಹೆ ಪೆಟ್ಟಿಗೆ ಇಡುವುದು, ಆವರಣದಲ್ಲಿ ಉದ್ಯಾನವನ ನಿರ್ಮಿಸುವುದು ಮತ್ತು ಬಂದ ರೋಗಿಗಳಿಗೆ ಕುಳಿತುಕೊಳ್ಳಲು ಆಸನ ವ್ಯವಸ್ಥೆ ಹೆಚ್ಚಿನ ಸಿಬ್ಬಂದಿ ನಿಯೋಜನೆ ಕುರಿತಂತೆ ಹಲವಾರು ವಿಷಯಗಳ ಕುರಿತು ಬೆಟಗೇರಿ ಪ್ರಾಥಮಿಕ ಆರೋಗ್ಯ ಕೇಂದ್ರದ ಸಂದರ್ಶಕರ ಸಭೆಯು ಸಮಿತಿ ಅಧ್ಯಕ್ಷ ಗಣೇಶಸಿಂಗ್ ಬ್ಯಾಳಿ ಅಧ್ಯಕ್ಷತೆಯಲ್ಲಿ ಚರ್ಚಿಸಲಾಯಿತು. ಒಂದೆರಡು ದಿನಗಳಲ್ಲಿ ಆಸ್ಪತ್ರೆಯಲ್ಲಿ ಸಲಹಾ ಪೆಟ್ಟಿಗೆ ಇಡಲಾಗುವುದು, ಸಂಬಂಧಪಟ್ಟ ರೋಗಿಗಳು ತಮ್ಮ ಸಲಹೆಗಳನ್ನು ಬರೆದು ತಮ್ಮ ವಿಳಾಸದೊಂದಿಗೆ ಆ ಪೆಟ್ಟಿಗೆಯಲ್ಲಿ ಹಾಕಬೇಕು ಪ್ರತಿ ತಿಂಗಳು 2ನೇ ದಿನಾಂಕ ಸೇರಲಿರುವ ಈ ಸಮಿತಿ ಸಭೆಯಲ್ಲಿ ಅವುಗಳ ಕುರಿತು ಪರಿಶೀಲನೆ ನಡೆಸಲು ಸಭೆ ತೀರ್ಮಾನಿಸಿತು.

ಜಿಲ್ಲಾ ಆರೋಗ್ಯಾಧಿಕಾರಿ ಡಾ. ಕಬಾಡಿ ಸೂಕ್ತ ಸಲಹೆ ಸೂಚನೆಗಳನ್ನು ಸಮಿತಿಗೆ ನೀಡಿದರು. ಪ್ರತಿ ದಿನ 150ರಿಂದ 200 ರೋಗಿಗಳು ಔಷದೋಪಚಾರಕ್ಕಾಗಿ ಬರುತ್ತಿದ್ದು, ಅವರಿಗೆ ಸಹಕರಿಸಿ ಒಳ್ಳೆಯ ಔಷಧೋಪಚಾರವನ್ನು ನೀಡುವಂತೆ ಆರೋಗ್ಯಾಧಿಕಾರಿಗಳಿಗೆ ಸಲಹೆ ನೀಡಲಾಯಿತು. ಹೆಚ್ಚಿನ ಮೂಲಭೂತ ಸೌಕರ್ಯಗಳು ಪಡೆದುಕೊಳ್ಳಲು ಮಾನ್ಯ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲರಿಗೆ ಮನವಿ ಸಲ್ಲಿಸಲು ತೀರ್ಮಾನಿಸಲಾಯಿತು. ಸಭೆಯಲ್ಲಿ ಜಿಲ್ಲಾ ಆರೋಗ್ಯಾಧಿಕಾರಿ ಡಾ. ಕಬಾಡಿ, ಕೇಂದ್ರ ಆರೋಗ್ಯಾಧಿಕಾರಿ ಡಾ. ಎಸ್.ಎಂ. ಓಣಿ, ಡಾ. ಬಸರಿಗಿಡದ, ಸಮಿತಿ ಉಪಾಧ್ಯಕ್ಷ ಚನ್ನಮ್ಮ ಚುಂಚಾ, ಸದಸ್ಯರುಗಳಾದ ಆರ್. ಎಚ್. ಏಕಬೋಟೆ, ಗೂಡುಸಾಬ ಕರಡಿ, ಶಿವಾಜಿ ರಜಪೂತ, ರಾಮಣ್ಣ ಜೇರಬಂಡಿ, ಜಂಬಣ್ಣ ಗದಗಿನ, ಲಕ್ಷ್ಮಣ ವಾಲ್ಮೀಕಿ ಹಾಗೂ ಆಸ್ಪತ್ರ ಸಿಬ್ಬಂದಿ ಉಪಸ್ಥಿತರಿದ್ದ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin