ಪ್ರಿಯಕರನ ಜತೆ ಸೇರಿ ಪತಿಯನ್ನೇ ಮುಗಿಸಿದ ಪತ್ನಿ
ಮದ್ದೂರು, ಮೇ 2- ಪ್ರಿಯಕರನ ಜತೆ ಸೇರಿ ಪತ್ನಿಯೇ ಪತಿಯನ್ನು ಹತ್ಯೆ ಮಾಡಿರುವ ಘಟನೆ ಪಟ್ಟಣದಲ್ಲಿ ನಡೆದಿದೆ.ಪಟ್ಟಣದ ಕೊಲ್ಲಿ ಸರ್ಕಲ್ ಬಳಿಯ ನಿವಾಸಿ ಶಿವರಾಜ್ ಪತ್ನಿ ಹಾಗೂ ಆಕೆ ಪ್ರಿಯಕರನಿಂದ ಹತ್ಯೆಯಾದ ನತದೃಷ್ಟ.ಮೂಲತಃ ಗುಡೇಮಾರನಹಳ್ಳಿಯ ಶಿವರಾಜ್ ಅಗರ ಲಿಂಗನ ದೊಡ್ಡಿ ಗ್ರಾಮದ ಆಶಾಳನ್ನು ಕೆಲವು ವರ್ಷಗಳ ಹಿಂದೆ ವಿವಾಹವಾಗಿದ್ದು, ದಂಪತಿ ಪಟ್ಟಣದಲ್ಲಿ ವಾಸವಾಗಿದ್ದಾರೆ.ಹಳೆ ಎಂಸಿ ರಸ್ತೆಯಲ್ಲಿರುವ ಗ್ರಾನೈಟ್ ಅಂಗಡಿಯಲ್ಲಿ ಶಿವರಾಜ್ ಕೆಲಸ ಮಾಡುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಆಶಾ ಹಲವು ತಿಂಗಳುಗಳಿಂದ ಸುರೇಶ್ ಎಂಬಾತನೊಂದಿಗೆ ಅನೈತಿಕ ಸಂಬಂಧ ಇರಿಸಿಕೊಂಡಿದ್ದಳು ಎನ್ನಲಾಗಿದ್ದು, ಈ ವಿಚಾರ ಗಂಡ ಶಿವರಾಜ್ಗೆ ತಿಳಿದಿರಲಿಲ್ಲ.ನಿನ್ನೆ ಸಂಜೆ ಶಿವರಾಜ್ ಮನೆಗೆ ಬಂದಾಗ ಪತ್ನಿ ಸುರೇಶ್ನೊಂದಿಗೆ ಇರುವುದು ಕಂಡಿದ್ದು, ಇಬ್ಬರ ಅನೈತಿಕ ಸಂಬಂಧ ಬಯಲಾಗಿದೆ. ಈ ವೇಳೆ ಮೂವರ ನಡುವೆ ಜಗಳವಾಗಿದ್ದು, ಪತ್ನಿ ಹಾಗೂ ಪ್ರಿಯಕರ ಶಿವರಾಜ್ ಮೇಲೆ ಹಲ್ಲೆ ನಡೆಸಿ ಮಚ್ಚಿನಿಂದ ತಲೆಗೆ ಹೊಡೆದು ಕೊಲೆ ಮಾಡಿದ್ದಾರೆ. ಘಟನೆ ನಂತರ ಪ್ರಿಯಕರ ಸುರೇಶ್ ಪರಾರಿಯಾಗಿದ್ದಾನೆ.ಸುದ್ದಿ ತಿಳಿದು ಸ್ಥಳಕ್ಕೆ ಧಾವಿಸಿದ ಸಿಪಿಐ ಪ್ರಭಾಕರ್ ಮದ್ದುರು ಠಾಣೆ ಪೊಲೀಸರು ಪರಿಶೀಲನೆ ನಡೆಸಿದ್ದಾರೆ.ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಪತ್ನಿ ಆಶಾಳನ್ನು ವಶಕ್ಕೆ ಪಡೆದು ತನಿಖೆ ಕೈಗೊಂಡಿದ್ದಾರೆ.
< Eesanje News 24/7 ನ್ಯೂಸ್ ಆ್ಯಪ್ >
Click Here to Download : Android / iOS