ಪ್ರಿಯತಮೆ ಕಿಡ್ನಾಪ್’ಗೆ ಯತ್ನ : ಪ್ರಿಯತಮ ಸೇರಿ ನಾಲ್ವರನ್ನು ಕಂಬಕ್ಕೆ ಕಟ್ಟಿ ಥಳಿಸಿದರು

ಈ ಸುದ್ದಿಯನ್ನು ಶೇರ್ ಮಾಡಿ

Belagavi--01

ಬೆಳಗಾವಿ,ಆ.3- ತಾನು ಪ್ರೀತಿಸುತ್ತಿದ್ದ ಯುವತಿಯನ್ನು ಅಪಹರಿಸಲು ಯತ್ನಿಸಿ ಪ್ರಿಯತಮ ಸೇರಿದಂತೆ ನಾಲ್ವರನ್ನು ಕಂಬಕ್ಕೆ ಕಟ್ಟಿ ಥಳಿಸಿರುವ ಘಟನೆ ಗೋಕಾಕ್ ತಾಲೂಕಿನ ಅರಳಿಮಟ್ಟಿ ಗ್ರಾಮದಲ್ಲಿ ನಡೆದಿದೆ.

ಘಟನೆ ಹಿನ್ನಲೆ:

ರಾಯಚೂರಿನ ಮಹೇಶ್ ಮತ್ತು ಬಾಗಲಕೋಟೆ ಜಿಲ್ಲೆ ಮುಧೋಳ ತಾಲೂಕಿನ ಯುವತಿ ಹಲವು ವರ್ಷಗಳಿಂದ ಪ್ರೀತಿಸುತ್ತಿದ್ದರು. ಇಬ್ಬರು ಮದುವೆ ಮಾಡಿಕೊಳ್ಳಬೇಕೆಂದು ಮನೆಯವರ ಮುಂದೆ ತಮ್ಮ ಪ್ರೇಮ ನಿವೇದನೆ ತೋಡಿಕೊಂಡಿದ್ದಾರೆ. ಆದರೆ, ಅವರಿಬ್ಬರ ಪ್ರೀತಿಗೆ ಯುವತಿ ಮನೆಯವರು ವಿರೋಧ ವ್ಯಕ್ತಪಡಿಸಿ ಆಕೆಯನ್ನು ತಾಯಿ ತವರು ಮನೆಯಾದ ಗೋಕಾಕ್ ತಾಲೂಕಿನ ಗುಲಗಂಜಿಕೊಪ್ಪದಲ್ಲಿ ಕರೆದುಕೊಂಡು ಹೋಗಿದ್ದರು.

ತನ್ನ ಪ್ರಿಯತಮೆಯನ್ನು ಬೇರೆ ಕಡೆ ಕರೆದುಕೊಂಡು ಹೋಗಿರುವ ವಿಷಯ ತಿಳಿದ ಪ್ರಿಯತಮ ಮಹೇಶ್ ತನ್ನ ಸ್ನೇಹಿತರಾದ ಅರುಣ, ರಮೇಶ್ ಮತ್ತು ವಿಜಯ ಎನ್ನುವವರ ಸಹಾಯ ಪಡೆದು ಗುಲಗಂಜಿಕೊಪ್ಪಕ್ಕೆ ಆಗಮಿಸಿ ಯುವತಿಯ ಅಪಹರಣಕ್ಕೆ ಯತ್ನಿಸಿದ್ದರು ಎನ್ನಲಾಗಿದೆ. ಇದಕ್ಕೆ ಯುವತಿಯ ಮನೆಯರು ವಿರೋಧ ವ್ಯಕ್ತಪಡಿಸಿದ್ದರು. ಪಟ್ಟು ಬಿಡದ ಯುವಕರು ವಾಗ್ವಾದಕ್ಕಿಳಿದಿದ್ದರು. ಇದರಿಂದ ರೋಸಿ ಹೋದ ಗ್ರಾಮಸ್ಥರು ಯುವಕರನ್ನು ಕಂಬಕ್ಕೆ ಕಟ್ಟಿ ಹಾಕಿ ಥಳಿಸಿದ್ದಾರೆ ಎನ್ನಲಾಗಿದೆ.

ಯುವಕರು ಥಳಿತದಿಂದ ತಪ್ಪಿಸಿಕೊಂಡು ಕಾರು ಏರಿ ಪರಾರಿಯಾಗಲು ಯತ್ನಿಸಿದ್ದರು. ಸಿನಿಮಿಯ ರೀತಿಯಲ್ಲಿ ಕಾರು ಬೆನ್ನಟ್ಟಿದ್ದ ಗ್ರಾಮಸ್ಥರನ್ನು ಕಂಡ ಯುವಕರು ಪರಾರಿಯಾಗುವ ತವಕದಲ್ಲಿ ವೇಗವಾಗಿ ಚಲಿಸುತ್ತಿದ್ದರಿಂದ ಅರಳಿಮಟ್ಟಿ ಗ್ರಾಮದ ಬಳಿ ಕಾರು ಪಲ್ಟಿಯಾಗಿದೆ. ಇವರನ್ನು ಹಿಂಬಾಲಿಸಿ ಬಂದ ಗ್ರಾಮಸ್ಥರು ಮೂವರನ್ನು ಕಂಬಕ್ಕೆ ಕಟ್ಟಿಹಾಕಿ  ಥಳಿಸಿದ್ದಾರೆ.  ಗಾಯಾಳುಗಳನ್ನು ಗೋಕಾಕ್ ಮತ್ತು ಬೆಳಗಾವಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಗೋಕಾಕï ತಾಲೂಕಿನ ಕುಲಗೋಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

Sri Raghav

Admin