ಪ್ರಿಯಾಂಕಾ.. ಇದೇನು ಗೌನಾ ಆಥವಾ ಶಾಮಿಯಾನನಾ..?

ಈ ಸುದ್ದಿಯನ್ನು ಶೇರ್ ಮಾಡಿ

Priyanka-Gown--01

ನ್ಯೂಯಾರ್ಕ್, ಮೇ 1-ಅಂತಾರಾಷ್ಟ್ರೀಯ ಮಟ್ಟದಲ್ಲಿ ಸುದ್ದಿ ಮಾಡುತ್ತಿರುವ ಭಾರತೀಯ ದೇಸಿ ಗರ್ಲ್ ಖ್ಯಾತಿಯ ನಟಿ ಪ್ರಿಯಾಂಕಾ ಚೋಪ್ರಾಳ ಹೊಸ ಅವತಾರವಿದು. ಅಮೆರಿಕದ ಗಗನಚುಂಬಿ ನಗರಿ ನ್ಯೂಯಾರ್ಕ್‍ನಲ್ಲಿ ನಡೆದ ಸಮಾರಂಭವೊಂದರಲ್ಲಿ ಅತ್ಯಂತ ಉದ್ದನೆಯ ಈವನಿಂಗ್ ಗೌನ್ (ಇದನ್ನು ಶಾಮಿಯಾನ ಅನ್ನಬಹುದೇನೋ) ಧರಿಸಿ ಎಲ್ಲರ ಕಣ್ಣು ಕುಕ್ಕಿದಳು.   ಮೆಟ್ ಗಾಲಾ-2017 ಸಮಾರಂಭದಲ್ಲಿ ಭಾಗವಹಿಸಲು ಪಿಗ್ಗಿಗೆ ರೆಡ್ ಕಾರ್ಪೆಟ್ ಆಹ್ವಾನ ನೀಡಲಾಗಿತ್ತು. ಅದಕ್ಕಾಗಿ ಈಕೆ ರಾಲ್ರ್ಫ ಲೌರೆನ್ ಗೌನ್ ಧರಿಸಿ ಅಲ್ಲಿಗೆ ಬಂದಳು. ಪಿ.ಸಿ. ಹೊಸ ಅವಕಾಶ ಕಂಡು ಅಲ್ಲಿದ್ದವರು ಮನದಣಿಯೇ ತಮ್ಮ ಕ್ಯಾಮೆರಾಗಳು ಮತ್ತು ಮೊಬೈಲ್‍ಗಳಲ್ಲಿ ಈ ದೃಶ್ಯವನ್ನು ಸೆರೆ ಹಿಡಿದರು. 

ಈ ಉದ್ದನೆಯ ಗೌನ್ ವಿಶಾಲವಾಗಿ ಹರಡಿ ನೆಲವನ್ನು ಗುಡಿಸುವಂತಿತ್ತು. ಈ ಗೌನ್ ಧರಿಸಿ ಮೆಟ್ಟಿಲುಗಳನ್ನು ಹತ್ತಲು ಪ್ರಿಯಾಂಕಗೆ ಕಷ್ಟವಾಗುತ್ತಿತ್ತು. ಒಬ್ಬ ಸಹಾಯಕ ಪಿಂಕಿಗೆ ಸಹಾಯ ಮಾಡಬೇಕಾದ ಪರಿಸ್ಥಿತಿ ನಿರ್ಮಾಣವಾಯಿತು. ಈ ಬಗ್ಗೆ ಟ್ವೀಟರ್‍ನಲ್ಲಿ ಹಾಸ್ಯಮಿಶ್ರಿತ ಕಮೆಂಟ್‍ಗಳು ಬಂದಿವೆ. ಕೆಲವರು ಇದನ್ನು ಶಾಮಿಯಾನಗೆ ಹೋಲಿಸಿದ್ದಾರೆ. ಇನ್ನೂ ಹಲವರು ಇದು ಟ್ರೈನ್ ಕ್ಲಾತ್ ಎಂದು ಮುಸಿಮುಸಿ ನಕ್ಕಿದ್ದಾರೆ.   ಅಂತಾರಾಷ್ಟ್ರೀಯ ಸಭೆ-ಸಮಾರಂಭಗಳಲ್ಲಿ ಅತ್ಯಾಷರ್ಕಕ ಉಡುಗೆ ಧರಿಸಿ ಫೋಸ್ ನೀಡುವ ಪಿಗ್ಗಿ ಈ ಗೌನ್ ಧರಿಸಿ ಹಿರಿಹಿರಿ ಹಿಗ್ಗಿದ್ದು ಸುಳ್ಳಲ್ಲ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin