ಪ್ರಿಯಾಂಕಾ ಗಾಂಧಿ ಅಷ್ಟೇನೂ ಸುಂದರಿಯಲ್ಲ : ಬಿಜೆಪಿ ಸಂಸದನ ಅಸಹ್ಯ ಹೇಳಿಕೆ

ಈ ಸುದ್ದಿಯನ್ನು ಶೇರ್ ಮಾಡಿ

Priyanaka-Gandhi

ನವದೆಹಲಿ, ಜ.25– ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರ ಪುತ್ರಿ ಪ್ರಿಯಾಂಕಾ ಗಾಂಧಿ ಅಷ್ಟೇನೂ ಸುಂದರಿಯಲ್ಲ. ಅವರಿಗಿಂತಲೂ ಸುಂದರಿಯರಾದ ಸ್ಟಾರ್ ಪ್ರಚಾರಕರು ಉತ್ತರಪ್ರದೇಶದಲ್ಲಿ ನಮ್ಮ ಪರವಾಗಿದ್ದಾರೆ-ಇದು ಬಿಜೆಪಿ ಸಂಸದ ವಿನಯ್ ಕಟಿಯಾರ್ ನೀಡಿರುವ ವಿವಾದಾತ್ಮಕ ಹೇಳಿಕೆ.  ಸಮಾರಂಭವೊಂದರಲ್ಲಿ ಮಾತನಾಡಿದ ಅವರು, ಪ್ರಿಯಾಂಕಾ ಗಾಂಧಿ ಚುನಾವಣಾ ಪ್ರಚಾರಕ್ಕೆ ಬಂದ ಮಾತ್ರಕ್ಕೆ ಕಾಂಗ್ರೆಸ್‍ನಲ್ಲಿ ಪವಾಡ ನಡೆಯುವುದಿಲ್ಲ. ಮೇಲಾಗಿ ಕಾಂಗ್ರೆಸ್ ತಿಳಿದುಕೊಂಡಂತೆ ಅವರು ಸ್ಟಾರ್ ಪ್ರಚಾರಕರಲ್ಲ. ಅವರಿಗಿಂತಲೂ ಚೆನ್ನಾಗಿರುವ ಸಿನಿಮಾ ತಾರೆಗಳು ಮತ್ತು ವರ್ಚಸ್ಸು ಇರುವವರು ನಮ್ಮ ಪರವಾಗಿ ಚುನಾವಣಾ ಪ್ರಚಾರ ಮಾಡುತ್ತಿದ್ದಾರೆ ಎಂದು ಕಟಿಯಾರ್ ಹೇಳಿದ್ದಾರೆ. ಈ ವಿವಾದಾತ್ಮಕ ಟೀಕೆ ಹೊರ ಬೀಳುತ್ತಿದ್ದಂತೆ ಕಾಂಗ್ರೆಸ್ ಬಿಜೆಪಿ ಸಂಸದನ ಹೇಳಿಕೆಯನ್ನು ತೀವ್ರವಾಗಿ ಖಂಡಿಸಿದೆ.

ಶರದ್ ಯಾದವ್‍ಗೆ ನೋಟಿಸ್ :

ಮಗಳ ಮಾನಕ್ಕಿಂತ ಮದ ಮಾನ ತುಂಬಾ ದೊಡ್ಡದು ಎಂದು ಸಂಯುಕ್ತ ಜನತಾದಳ ಮುಖಂಡ ಶರದ್ ಯಾದವ್ ನೀಡಿರುವ ವಿವಾದಾತ್ಮಕ ಹೇಳಿಕೆಗೆ ಕೇಂದ್ರ ಮಹಿಳಾ ಆರೋಗ ನೋಟಿಸ್ ಜಾರಿ ಮಾಡಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin