ಪ್ರಿ-ಕ್ವಾರ್ಟರ್ ಫೈನಲ್‍ಗೆ ಅರ್ಹತೆ ಪಡೆದ ಬಾಕ್ಸರ್ ವಿಕಾಸ್

ಈ ಸುದ್ದಿಯನ್ನು ಶೇರ್ ಮಾಡಿ

Vikas

ರಿಯೋ ಟಿ ಜನೈರೋ, ಆ.10- ಭಾರತದ ಬಾಕ್ಸರ್ ವಿಕಾಸ್ ಕೃಷ್ಣನ್ ಯಾದವ್ ಅಮೆರಿಕದ ಚಾಲ್ರ್ಸ್ ಕೊನೆವೆಲ್ ಅವರನ್ನು ಮಣಿಸಿ ಪ್ರಿ-ಕ್ವಾರ್ಟರ್ ಫೈನಲ್‍ಗೆ ಅರ್ಹತೆ ಪಡೆದಿದ್ದು, ಬಾಕ್ಸಿಂಗ್‍ನಲ್ಲಿ ಶುಭಾರಂಭಕ್ಕೆ ಚಾಲನೆ ನೀಡಿದ್ದಾರೆ.  ಕಳೆದ ರಾತ್ರಿ ನಡೆದ 75 ಕೆ.ಜಿ. ವಿಭಾಗದ ಬಾಕ್ಸಿಂಗ್‍ನಲ್ಲಿ ಏಷ್ಯನ್ ಗೇಮ್ಸ್‍ನ ಚಿನ್ನದ ಪದಕ ವಿಜೇತ ವಿಕಾಸ್ ಕೃಷ್ಣನ್ ಈ ಸಾಧನೆ ಮಾಡಿದ್ದಾರೆ.  ತಮ್ಮ ಆರಂಭಿಕ ಪಂದ್ಯದಲ್ಲಿ 24 ವರ್ಷದ ವಿಕಾಸ್ ಅಮೆರಿಕದ ಪ್ರಬಲ ಬಾಕ್ಸರ್ ಗ್ರೀನ್‍ಹಾರ್ನ್ ಚಾಲ್ರ್ಸ್ ಕೊನೆವೆಲ್‍ರನ್ನು 3-0ರಿಂದ ಗೆಲವು ದಾಖಲಿಸಿದರು.  ಮೊದಲ ಸುತ್ತಿನಲ್ಲಿ ಭಾರತದ ಬಾಕ್ಸರ್‍ನನ್ನು ಮಣಿಸುವ ಉತ್ಸಾಹದೊಂದಿಗೆ ಅಖಾಡಕ್ಕಿಳಿದ ಕೊನೆವೆಲ್‍ಗೆ ವಿಕಾಸಂ ಅವಕಾಶ ನೀಡಲಿಲ್ಲ. ವಿಕಾಸ್ ತಮ್ಮ ರೈಟ್ ಸ್ಪ್ರೈಟ್ ಮತ್ತು ಆಪರ್‍ಕಟ್ ದಾಳಿಯೊಂದಿಗೆ ಅಮೆರಿಕದ ಬಲಿಷ್ಠ ಬಾಕ್ಸರ್‍ಗೆ ಆಘಾತ ನೀಡಿದರು. ಇದೇ ರೀತಿ ಎರಡು ಮತ್ತು ಮೂರನೆ ಸುತ್ತುಗಳಲ್ಲೂ ಆಕ್ರಮಣಕಾರಿ ಪ್ರದರ್ಶನ ನೀಡಿದ ವಿಕಾಸ್ ವಿಜಯದ ಮುಗುಳ್ನಗೆ ಬೀರಿದರು.

 

Facebook Comments

Sri Raghav

Admin