ಪ್ರೀತಿಸಿದ ತಪ್ಪಿಗೆ 10 ವರ್ಷದಿಂದ ಪುತ್ರಿಯರಿಗೆ ಕತ್ತಲೆ ಕೋಣೆ ವಾಸ, ಹಿರಿಯ ಪುತ್ರಿ ಸಾವು

ಈ ಸುದ್ದಿಯನ್ನು ಶೇರ್ ಮಾಡಿ

Girl-01

ತಿಪಟೂರು, ಅ. 7– ಹೆಣ್ಣೆ ಸಂಸಾರದ ಕಣ್ಣು ಎಂಬ ಗಾದೆಯಿದೆ. ಆದರೆ ಆಕೆ ತುಸು ಕೆಟ್ಟ ನಿರ್ಧಾರ ತೆಗೆದುಕೊಂಡರೆ ಇಡೀ ಕುಟುಂಬವೇ ಬೀದಿಪಾಲು ಎಂಬ ಮಾತಿಗೆ ಇಲ್ಲಿದೆ ಒಂದು ತಾಜಾ ಉದಾಹರಣೆ. ತಾಲ್ಲೂಕಿನ ಸಾರ್ಥಹಳ್ಳಿಯ ಶಿಕ್ಷಕ ಶಿವಸ್ವಾಮಿ, ಪತ್ನಿ ಗಂಗಮ್ಮ ಮತ್ತು ಇಬ್ಬರು ಹೆಣ್ಣು ಮಕ್ಕಳಿರುವ ಸುಖೀ ಕುಟುಂಬ. ಪ್ರಾರಂಭದಲ್ಲಿ ಎಲ್ಲವೂ ಚೆನ್ನಾಗಿತ್ತು ಆದರೆ ಮನೆಯ ಯಜಮಾನಿಗೆ ಏನು ಕೇಡು ಬುದ್ಧಿ ಬಂತೋ ಗೊತ್ತಿಲ್ಲ ತಾಳಿ ಕಟ್ಟಿದ ಗಂಡ ಹಾಗೂ ಹೆತ್ತ ಮಕ್ಕಳಿಗೆ ಕಿರುಕುಳ ನೀಡುತ್ತಾ ಪತಿಯನ್ನೇ ಬೀದಿ ಪಾಲು ಮಾಡಿದ್ದಾಳೆ. ತನ್ನ ಮಕ್ಕಳು ಪ್ರೀತಿ ಮಾಡಿದ್ದಾರೆಂಬ ಒಂದೇ ಕಾರಣಕ್ಕಾಗಿ ಪುತ್ರಿಯರನ್ನು ಕತ್ತಲ ಕೋಣೆಗೆ ತಳ್ಳಿ ಮಗಳೊಬ್ಬನ ಸಾವಿಗೆ ಕಾರಣವಾಗಿದ್ದಾಳೆ. ತನ್ನ ಇಬ್ಬರು ಹೆಣ್ಣು ಮಕ್ಕಳು ಪ್ರೀತಿ ಮಾಡುತ್ತಿದ್ದ ವಿಷಯ ತಿಳಿದ ಗಂಗಮ್ಮ 10 ವರ್ಷದಿಂದ ಅವರನ್ನು ಕೂಡಿ ಹಾಕಿದ್ದು ಇತ್ತೀಚೆಗಷ್ಟೇ ಹಿರಿಯ ಮಗಳು ಮೃತಪಟ್ಟಿದ್ದು , ದ್ವಿತೀಯ ಪುತ್ರಿ ಚಿಂತಾಜನಕ ಸ್ಥಿತಿ ತಲುಪಿದ್ದಾಳೆ.

ತಂದೆ ಖಾಸಗಿ ಶಾಲೆಯ ಶಿಕ್ಷಕನಾಗಿ ಕೆಲಸ ನಿರ್ವಹಿಸುತ್ತಿದ್ದು ಮಕ್ಕಳ ಪ್ರೇಮಕಥೆ ಗಂಗಮ್ಮನಿಗೆ ಗೊತ್ತಾಗಿ ಮಕ್ಕಳಿಗೆ ಹಾಗೂ ಗಂಡನಿಗೆ ಕಿರುಕುಳ ನೀಡುತ್ತಿದ್ದಳು ಎನ್ನಲಾಗುತ್ತಿದೆ. ಇದರಿಂದ ಮನನೊಂದಿದ್ದ ಶಿವಸ್ವಾಮಿ ವೃತ್ತಿಯನ್ನು ತ್ಯಜಿಸಿ ಸ್ಥಿಮಿತ ಕಳೆದುಕೊಂಡು ಬೀದಿಪಾಲಾಗಿದ್ದಾನೆ. ಇತ್ತ ಹಿರಿಯ ಪುತ್ರಿ ಸಾವನ್ನಪ್ಪಿದರೆ, ದ್ವಿತೀಯ ಪುತ್ರಿ ಸಾವಿನ ಅಂಚಿನಲ್ಲಿದ್ದಾಳೆ.

► Follow us on –  Facebook / Twitter  / Google+

Facebook Comments

Sri Raghav

Admin