ಪ್ರೀತಿ ನಾಟಕವಾಡಿ ಅಪ್ರಾಪ್ತೆಯನ್ನು ಕರೆದೊಯ್ದು ಫ್ರೆಂಡ್ಸ್ ಜೊತೆ ಸಾಮೂಹಿಕ ಅತ್ಯಾಚಾರ ಮಾಡಿದ ಪ್ರಿಯಕರ

ಈ ಸುದ್ದಿಯನ್ನು ಶೇರ್ ಮಾಡಿ

Gang-Rape

ದಾವಣಗೆರೆ, ಜೂ.6- ಪ್ರೀತಿಸುವ ನಾಟಕವಾಡಿದ ಪ್ರಿಯಕರನೇ ಇನ್ನಿಬ್ಬರು ದುಷ್ಕರ್ಮಿಗಳ ಜತೆ ಸೇರಿ ಅಪ್ರಾಪ್ತ ಬಾಲಕಿಯೊಬ್ಬಳ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿರುವ ಘಟನೆ ಜಿಲ್ಲೆಯ ಚನ್ನಗಿರಿ ತಾಲೂಕು ಕೇಂದ್ರ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು, ಪೊಲೀಸರು ಮೂವರು ದುಷ್ಕರ್ಮಿಗಳನ್ನು ಬಂಧಿಸಿದ್ದಾರೆ. ಚನ್ನಗಿರಿ ತಾಲೂಕಿನ ರಂಗಾಪುರ ಗ್ರಾಮದ ನಿವಾಸಿಗಳಾಗಿರುವ ರಮೇಶ್, ಅರುಣ್ ಮತ್ತು ವಿಜಯ್ ಈ ಮೂವರು ಅದೇ ಗ್ರಾಮದ ಬಾಲಕಿಯನ್ನು ತಾಲೂಕಿನ ಜೋಳದಾಳು ಅರಣ್ಯ ಪ್ರದೇಶಕ್ಕೆ ಕರೆದೊಯ್ದು ಅತ್ಯಾಚಾರ ಎಸಗಿರುವುದಾಗಿ ಪೊಲೀಸರು ತಿಳಿಸಿದ್ದಾರೆ.ಬಾಲಕಿ ಮತ್ತು ಅವಳ ಪ್ರಿಯಕರ ಎಂದು ಹೇಳಲಾದ ರಮೇಶ್ ಇಬ್ಬರೇ ಇದ್ದಾಗ ಅಲ್ಲಿಗೆ ಬಂದ ಇನ್ನಿಬ್ಬರು ದುಷ್ಕರ್ಮಿಗಳು ನಿನ್ನ ಲವರ್ ಜತೆ ನೀನಿರುವುದನ್ನು ವಿಡಿಯೋ ಚಿತ್ರೀಕರಣ ಮಾಡಿಕೊಂಡಿದ್ದೇವೆ ಎಂದು ಬ್ಲಾಕ್‍ಮೇಲ್ ಮಾಡಿದ್ದಾರೆ. ಇದರಿಂದ ಬಾಲಕಿ ಹೆದರಿ ಕಂಗಾಲಾಗಿದ್ದಾಳೆ.  ನಂತರ ಇಬ್ಬರು ದುಷ್ಕರ್ಮಿಗಳು ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದ್ದಾರೆ. ಇದರಲ್ಲಿ ಪ್ರಿಯಕರ ಎಂದು ಹೇಳಿಕೊಂಡ ರಮೇಶ್ ಕೂಡ ಭಾಗಿಯಾಗಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ. ಈ ಬಗ್ಗೆ ಚನ್ನಗಿರಿ ಠಾಣೆಯಲ್ಲಿ ಮೂವರ ವಿರುದ್ಧ ಎಫ್‍ಐಆರ್ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Facebook Comments

Sri Raghav

Admin