ಪ್ರೇಯಸಿಯಿಂದ ಮದುವೆಗೆ ನಿರಾಕರಣೆ : ಪ್ರಿಯಕರ ಆತ್ಮಹತ್ಯೆ

ಈ ಸುದ್ದಿಯನ್ನು ಶೇರ್ ಮಾಡಿ

poison
ಚನ್ನಪಟ್ಟಣ, ಆ.18- ನಿರಂತರ ಎಂಟು ವರ್ಷದ ಪ್ರೀತಿಯನ್ನು ಮನೆಯವರಿಗೆ ಹೆದರಿ ಒಂದೇ ಕ್ಷಣದಲ್ಲಿ ನಿರಾಕರಿಸಿದ ಪ್ರೇಯಸಿಯ ವರ್ತನೆಯಿಂದ ನೊಂದ ಪ್ರಿಯತಮ ಆಕೆ ಮನೆ ಎದುರೇ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ದುರಂತ ಘಟನೆ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.ಸುಣ್ಣಘಟ್ಟ ಗ್ರಾಮದ ರಾಜು (25) ಆತ್ಮಹತ್ಯೆಗೆ ಶರಣಾದ ಯುವಕ. ಕಳೆದ ಎಂಟು ವರ್ಷಗಳಿಂದ ತನ್ನ ಗ್ರಾಮದ ಯುವತಿಯನ್ನು ಪ್ರೀತಿಸುತ್ತಿದ್ದ ರಾಜು ಸ್ವಂತ ಕಾರನ್ನು ಇಟ್ಟುಕೊಂಡು ಬಾಡಿಗೆಗೆ ಹೋಗುತ್ತಿದ್ದನಲ್ಲದೆ ಬೇರೆ ಕೆಲಸವನ್ನೂಮಾಡುತ್ತಿದ್ದನೆನ್ನಲಾಗಿದೆ.
ಒಂದೇ ಗ್ರಾಮದವರಾದ ಇವರು ನಿರಂತರ ಎಂಟು ವರ್ಷಗಳಿಂದ ಪ್ರೀತಿ ಮಾಡುತ್ತಿದ್ದು, ಮದುವೆ ಮಾಡಿಕೊಳ್ಳಲು ನಿಶ್ಚಯಿಸಿದ್ದರು. ಈ ವಿಷಯವಾಗಿ ಯುವಕನು ತನ್ನ ಮದುವೆಗೆ ಗ್ರೀನ್ ಸಿಗ್ನಲ್ ಪಡೆದಿದ್ದನು ಎನ್ನಲಾಗಿದೆ.ಯುವತಿಯ ಮನೆಯವರು ಈ ಮದುವೆಗೆ ನಿರಾಕರಿಸಿದ್ದರಿಂದ ಹೆದರಿ ಪ್ರೀತಿಗೆ ಕೈಕೊಟ್ಟು ಮದುವೆ ಇಷ್ಟವಿಲ್ಲ, ನೀನ್ಯಾರೋ ನಾನ್ಯಾರೋ ಎಂದಿದ್ದರಿಂದ ಬುದ್ಧಿಭ್ರಮಣೆಯಂತಾಗಿದ್ದನು.ಪ್ರೀತಿಯನ್ನು ಮರೆಯಲಾಗದೆ ನಾನು ನಂಬಿದ ಯುವತಿ ನಡು ನೀರಿನಲ್ಲಿ ಕೈಬಿಟ್ಟಿದ್ದರಿಂದ ಮಾನಸಿಕವಾಗಿ ನೊಂದಿದ್ದ ಈತ ಪ್ರೇಯಸಿ ಮನೆ ಬಳಿಗೆ ತನ್ನ ಕಾರಿನಲ್ಲಿ ಹೋಗಿ ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದಾನೆ. ತಕ್ಷಣ ಸ್ಥಳೀಯರ ಸಹಕಾರದಲ್ಲಿ ಆತನನ್ನು ಮಂಡ್ಯ ಜಿಲ್ಲಾಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾನೆ. ಈ ಬಗ್ಗೆ ಗ್ರಾಮಾಂತರ ಠಾಣೆ ಪೊಲೀಸರು ದೂರು ದಾಖಲಿಸಿಕೊಂಡಿದ್ದು, ಮಂಡ್ಯ ಜಿಲ್ಲಾಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ವಾರಸುದಾರರಿಗೆ ಒಪ್ಪಿಸಲಾಗಿದೆ.

 

► Follow us on –  Facebook / Twitter  / Google+

Facebook Comments

Sri Raghav

Admin