ಪ್ರೋಟೋಕಾಲ್ ವಿಷಯಕ್ಕೆ ಬಿಜೆಪಿ-ಕಾಂಗ್ರೆಸ್ ಕಾರ್ಯಕರ್ತರ ನಡುವೆ ಮಾತಿನ ಚಕಮುಕಿ

ಈ ಸುದ್ದಿಯನ್ನು ಶೇರ್ ಮಾಡಿ

protocal
ಕೆ.ಆರ್.ಪುರ.ಮೇ12- ಬಸ್ ಶೆಲ್ಟಾರ್‍ಗೆ ಬೋರ್ಡ್ ಹಾಕುವಲ್ಲಿ ಪ್ರೋಟೋಕಾಲ್ ಅನುಸರಿಸಿಲ್ಲ ಎಂಬ ವಿಷಯಕ್ಕೆ ಇಂದು ಬಿಜೆಪಿ ಮತ್ತು ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಪಾಲಿಕೆ ಸದಸ್ಯರ ನಡುವೆ ಮಾತಿನ ಚಕಮುಕಿ ನಡೆದಿದ್ದು, ಕೈಕೈ ಮಿಲಾಯಿಸಿದ ಘಟನೆ ನಡೆಯಿತು.  ಅಗರ ಗ್ರಾಮದ ಹೊರಮಾವು-ಅಗರ ಮಧ್ಯದಲ್ಲಿ ಈಗಾಗಲೇ ಎರಡು ಬಸ್ ತಂಗುದಾಣಗಳಿದ್ದು, ಇತ್ತೀಚಿಗೆ ಕೇಂದ್ರಸಚಿವ ಡಿ.ವಿ.ಸಂದನಾಂದಗೌಡ ಅವರ ಸಂಸದರ ನಿದಿಯಿಂದ 5 ಲಕ್ಷ ರೂ ವೆಚ್ಚದಲ್ಲಿ ಮತ್ತೊಂದು ತಂಗುದಾಣ ನಿರ್ಮಾಣ ಮಾಡಲಾಯಿತು. ಈ ತಂಗುದಾಣ ನಿಲ್ದಾಣಕ್ಕೆ ಬಿಜೆಪಿಯವರು ಪ್ರಧಾನಿ ನರೇಂದ್ರ ಮೋದಿ ಹಾಗೂ ಡಿ.ವಿ.ಸದನಾಂದ ಗೌಡರ ಭಾವಚಿತ್ರ ಇರುವ ಬೋರ್ಡ್ ಹಾಕಲು ಮುಂದಾಗಿದ್ದರು. ಆದರೆ ಕಾಂಗ್ರೆಸ್‍ನವರು ಪ್ರೋಟೋಕಾಲ್ ಪ್ರಕಾರ ಸ್ಥಳೀಯ ಜನಪ್ರತಿನಿಧಿಗಳ ಭಾವಚಿತ್ರಗಳನನ್ನು ಹಾಕಬೇಕು. ಇಲ್ಲವೇ ಯಾರಾದರ ಸಾಹಿತಿಗಳ ಹೆಸರಿಡಬೇಕೆಂದು ಪಟ್ಟು ಹಿಡಿದಿದ್ದಾರೆ.


ಈ ವಿಚಾರಕ್ಕಾಗಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ನಡೆಯಿತು. ಬಿಬಿಎಂಪಿ ಕಾಂಗ್ರೆಸ್ ಸದಸ್ಯರಾದ ರಾಧಮ್ಮ ವೆಂಕಟೇಶ್, ಶ್ರೀಕಾಂತ್, ಅಂಥೋಣಿ ಸ್ವಾಮಿ ಒಂದುಕಡೆಯಾದರೆ, ಇನ್ನೊಂದು ಕಡೆ ಬಿಜೆಪಿ ಸದಸ್ಯರಾದ ಪೂರ್ಣಿಮಾ ಶ್ರೀನಿವಾಸ್, ಬಂಡೇರಾಜು ಮತ್ತು ಮಾಜಿ ಶಾಸಕ ನಂದೀಶ್ ರೆಡ್ಡಿ ಸೇರಿದ್ದರು.  ಈ ವೇಳೆ ಮಾತಿನ ಚಕಮಕಿ ಜೋರಾಗಿ ಕೈಕೈಮಿಲಾಯಿಸುವ ಮಟ್ಟಕ್ಕೆ ಹೋಗಿದ್ದು, ತಕ್ಷಣ ಪೊಲೀಸರು ಧಾವಿಸಿ ಪರಿಸ್ಥಿತಿಯನ್ನು ತಹಬದಿಗೆ ತಂದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin