ಪ್ಲಾಸ್ಟಿಕ್ ತ್ಯಾಜ್ಯದಿಂದ ಜಲಚರಗಳ ಮರುಸೃಷ್ಟಿ

ಈ ಸುದ್ದಿಯನ್ನು ಶೇರ್ ಮಾಡಿ
 ಪ್ಲಾಸ್ಟಿಕ್ ತ್ಯಾಜ್ಯದಿಂದ ಜಲಚರಗಳ ಮರುಸೃಷ್ಟಿ ಕಸದಿಂದ ರಸ ಎಂಬ ಮಾತನ್ನು ನೆನಪಿಸುವಂತಹ ವಿದ್ಯಮಾನಗಳು ವಿಶ್ವದಲ್ಲಿ ಆಗಾಗ ನಡೆಯುತ್ತಿರುತ್ತವೆ. ಅಮೆರಿಕದ ಸ್ಮಿತ್‍ಸೋನಿಯನ್ ರಾಷ್ಟ್ರೀಯ ಮೃಗಾಲಯದಲ್ಲಿ  ಪ್ರದರ್ಶನಗೊಂಡ ಕಲಾ ಪ್ರದರ್ಶನವೇ ಇದಕ್ಕೆ ಸಾಕ್ಷಿ. ಪೆಸಿಫಿಕ್ ಸಾಗರದಿಂದ ದಂಡೆಗೆ ಕೊಚ್ಚಿಕೊಂಡು ಬಂದ ಪ್ಲಾಸ್ಟಿಕ್ ತ್ಯಾಜ್ಯ ಮತ್ತು ಅವಶೇಷಗಳಿಂದ ನಿರ್ಮಿಸಿರುವ ಸಾಗರ ಜೀವಿಗಳ ಶಿಲ್ಪಗಳನ್ನು ವಾಷಿಂಗ್ಟನ್‍ನ ಸ್ಮಿತ್‍ಸೋನಿಯನ್ ನ್ಯಾಷನಲ್ ಝೂನಲ್ಲಿ ಪ್ರದರ್ಶನಕ್ಕೆ ಇಡಲಾಗಿತ್ತು. ಪ್ಲಾಸ್ಟಿಕ್ ಮಾಲಿನ್ಯ ಮತ್ತು ಅದರಿಂದ ನಮ್ಮ ಪರಿಸರಕ್ಕೆ ಉಂಟಾಗುತ್ತಿರುವ ಅಪಾಯದ ಬಗ್ಗೆ ಜಾಗತಿಕ ವೀಕ್ಷಕರಿಗೆ ಅರಿವು ಮೂಡಿಸುವಲ್ಲಿ ಈ ಪ್ರದರ್ಶನವು ವೇದಿಕೆಯಾಗಿತ್ತು.  ಈ ಕಲಾ ಪ್ರದರ್ಶನದಲ್ಲಿ ಪ್ಲಾಸ್ಟಿಕ್ ತ್ಯಾಜ್ಯದಿಂದಲೇ ತಯಾರಿಸಿದ ಸಾಗರದ 17 ಪ್ರಾಣಿಗಳು ಮತ್ತು ಜಲಚರಗಳ ಸಂಗ್ರಹವು ಪ್ಲಾಸ್ಟಿಕ್ ಬಳಕೆ ತ್ಯಾಜ್ಯವನ್ನು ಕಡಿಮೆ ಮಾಡುವ ಗುರಿಯೊಂದಿಗೆ ಪ್ಲಾಸ್ಟಿಕ್ ಸಮಸ್ಯೆ ಮೇಲೆ ಬೆಳಕು ಚೆಲ್ಲಿತು. ವಾಶ್ಡ್ ಶೋರ್‍ನ ಕಾರ್ಯನಿರ್ವಾಹಕ ನಿರ್ದೇಶಕಿ ಮತ್ತು ಸಂಸ್ಥಾಪಕಿ ಅಂಜೆಲಾ ಹಸೆಲ್‍ಟೈನ್ಪೋರಿ ಪ್ಲಾಸ್ಟಿಕ್ ಶಿಲ್ಪಗಳ ಪರಿಕಲ್ಪನೆಯ ರೂವಾರಿ. ಪ್ಲಾಸ್ಟಿಕ್ ಮಾಲಿನ್ಯವೂ ಪ್ರತಿ ಸಾಗರ ಸಂಪನ್ಮೂಲವನ್ನು ಪ್ರವೇಶಿಸುತ್ತಿದ್ದು, ಇದು ಒಡ್ಡಿರುವ ಗಂಭೀರ ಸವಾಲುಗಳ ಬಗ್ಗೆ ವಿಶ್ವದಾದ್ಯಂತ ಜಾಗೃತಿ ಮೂಡಿಸಲು ಈ ಪ್ರದರ್ಶನವನ್ನು ಆಯೋಜಿಸಲಾಗಿತ್ತು ಎಂದು ವಿವರಿಸಿದರು. ಅಂಜೆಲಾ ಮತ್ತು ಆಕೆ ತಂಡದ ಸ್ವಯಂಸೇವಕರು ಓರೆಗಾನ್ ಕರಾವಳಿ ತೀರದಲ್ಲಿ ಪ್ಲಾಸ್ಟಿಕ್ ಅವಶೇಷಗಳು ಮತ್ತು ತ್ಯಾಜ್ಯಗಳನ್ನು ಸಂಗ್ರಹಿಸಿ ಅವುಗಳಿಂದ ನಿರ್ಮಿಸಿರುವ ಈ ಕಲಾಕೃತಿಗಳು ವೀಕ್ಷಕರ ವಿಶೇಷ ಗಮನ ಸೆಳೆದವು.

ಕಸದಿಂದ ರಸ ಎಂಬ ಮಾತನ್ನು ನೆನಪಿಸುವಂತಹ ವಿದ್ಯಮಾನಗಳು ವಿಶ್ವದಲ್ಲಿ ಆಗಾಗ ನಡೆಯುತ್ತಿರುತ್ತವೆ. ಅಮೆರಿಕದ ಸ್ಮಿತ್‍ಸೋನಿಯನ್ ರಾಷ್ಟ್ರೀಯ ಮೃಗಾಲಯದಲ್ಲಿ ಪ್ರದರ್ಶನಗೊಂಡ ಕಲಾ ಪ್ರದರ್ಶನವೇ ಇದಕ್ಕೆ ಸಾಕ್ಷಿ. ಪೆಸಿಫಿಕ್ ಸಾಗರದಿಂದ ದಂಡೆಗೆ ಕೊಚ್ಚಿಕೊಂಡು ಬಂದ ಪ್ಲಾಸ್ಟಿಕ್ ತ್ಯಾಜ್ಯ ಮತ್ತು ಅವಶೇಷಗಳಿಂದ ನಿರ್ಮಿಸಿರುವ ಸಾಗರ ಜೀವಿಗಳ ಶಿಲ್ಪಗಳನ್ನು ವಾಷಿಂಗ್ಟನ್‍ನ ಸ್ಮಿತ್‍ಸೋನಿಯನ್ ನ್ಯಾಷನಲ್ ಝೂನಲ್ಲಿ ಪ್ರದರ್ಶನಕ್ಕೆ ಇಡಲಾಗಿತ್ತು. ಪ್ಲಾಸ್ಟಿಕ್ ಮಾಲಿನ್ಯ ಮತ್ತು ಅದರಿಂದ ನಮ್ಮ ಪರಿಸರಕ್ಕೆ ಉಂಟಾಗುತ್ತಿರುವ ಅಪಾಯದ ಬಗ್ಗೆ ಜಾಗತಿಕ ವೀಕ್ಷಕರಿಗೆ ಅರಿವು ಮೂಡಿಸುವಲ್ಲಿ ಈ ಪ್ರದರ್ಶನವು ವೇದಿಕೆಯಾಗಿತ್ತು. ಈ ಕಲಾ ಪ್ರದರ್ಶನದಲ್ಲಿ ಪ್ಲಾಸ್ಟಿಕ್ ತ್ಯಾಜ್ಯದಿಂದಲೇ ತಯಾರಿಸಿದ ಸಾಗರದ 17 ಪ್ರಾಣಿಗಳು ಮತ್ತು ಜಲಚರಗಳ ಸಂಗ್ರಹವು ಪ್ಲಾಸ್ಟಿಕ್ ಬಳಕೆ ತ್ಯಾಜ್ಯವನ್ನು ಕಡಿಮೆ ಮಾಡುವ ಗುರಿಯೊಂದಿಗೆ ಪ್ಲಾಸ್ಟಿಕ್ ಸಮಸ್ಯೆ ಮೇಲೆ ಬೆಳಕು ಚೆಲ್ಲಿತು.

ವಾಶ್ಡ್ ಶೋರ್‍ನ ಕಾರ್ಯನಿರ್ವಾಹಕ ನಿರ್ದೇಶಕಿ ಮತ್ತು ಸಂಸ್ಥಾಪಕಿ ಅಂಜೆಲಾ ಹಸೆಲ್‍ಟೈನ್ಪೋರಿ ಪ್ಲಾಸ್ಟಿಕ್ ಶಿಲ್ಪಗಳ ಪರಿಕಲ್ಪನೆಯ ರೂವಾರಿ. ಪ್ಲಾಸ್ಟಿಕ್ ಮಾಲಿನ್ಯವೂ ಪ್ರತಿ ಸಾಗರ ಸಂಪನ್ಮೂಲವನ್ನು ಪ್ರವೇಶಿಸುತ್ತಿದ್ದು, ಇದು ಒಡ್ಡಿರುವ ಗಂಭೀರ ಸವಾಲುಗಳ ಬಗ್ಗೆ ವಿಶ್ವದಾದ್ಯಂತ ಜಾಗೃತಿ ಮೂಡಿಸಲು ಈ ಪ್ರದರ್ಶನವನ್ನು ಆಯೋಜಿಸಲಾಗಿತ್ತು ಎಂದು ವಿವರಿಸಿದರು. ಅಂಜೆಲಾ ಮತ್ತು ಆಕೆ ತಂಡದ ಸ್ವಯಂಸೇವಕರು ಓರೆಗಾನ್ ಕರಾವಳಿ ತೀರದಲ್ಲಿ ಪ್ಲಾಸ್ಟಿಕ್ ಅವಶೇಷಗಳು ಮತ್ತು ತ್ಯಾಜ್ಯಗಳನ್ನು ಸಂಗ್ರಹಿಸಿ ಅವುಗಳಿಂದ ನಿರ್ಮಿಸಿರುವ ಈ ಕಲಾಕೃತಿಗಳು ವೀಕ್ಷಕರ ವಿಶೇಷ ಗಮನ ಸೆಳೆದವು.

Facebook Comments

Sri Raghav

Admin