ಪ್ಲೀಸ್, ಇನ್ನೂ ಕಾಲ ಮಿಂಚಿಲ್ಲ, ಬೇಗ ಹೋಗಿ ಮತದಾನ ಮಾಡಿ

ಈ ಸುದ್ದಿಯನ್ನು ಶೇರ್ ಮಾಡಿ

vote
ಬೆಂಗಳೂರು. ಮೇ. 12. ಐದು ವರ್ಷಕ್ಕೊಮ್ಮೆ ಬರುವ ಚುನಾವಣಾ ಹಬ್ಬವನ್ನು ಉತ್ಸಾಹದಿಂದ ಆಚರಿಸಲು ಮರೆಯದಿರಿ. ಈಗ ನೀವು ಮತ ಹಾಕದಿದ್ದರೆ ಮತ್ತೆ 5 ವರ್ಷಗಳು ಕಾಯಬೇಕಾಗುವುದು. ನಿರ್ಲಕ್ಷ್ಯದಿಂದ ಮನೆಯಲ್ಲೇ ಕೂತಿದ್ದರೆ, ಮಳೆಗೆ ಅಂಜಿ ಮನೆಯಿಂದ ಆಚೆ ಬರಲು ಹಿಂದೇಟು ಹಾಕುತ್ತಿದ್ದರೆ, ದಯವಿಟ್ಟು ಇನ್ನು ಕಾಲ ಮಿಚಿಲ್ಲ ಈಗಲೇ ಹೊರಡಿ ಮತದಾನ ಮಾಡಿ, ನಿಮ್ಮ ಕರ್ತವ್ಯ ಮತ್ತು ಹಕ್ಕನ್ನು ಚಲಾಯಿಸಿ ಉತ್ತಮ ಪ್ರಜೆಯಾಗುವ ಪ್ರಯತ್ನ ಮಾಡಿ, ನೀವೇ ನಿಮ್ಮ ಕರ್ತವ್ಯವನ್ನು ಸರಿಯಾಗಿ ನಿರ್ವಹಿಸದಿದ್ದರೆ, ಇನ್ನು ನಿಮ್ಮನ್ನಾಳಲು ಅದೆಂತಹ ನಾಯಕರು ಬರುತ್ತಾರೆ ಒಮ್ಮೆ ಯೋಚನೆ ಮಾಡಿ. ಮತದಾನಕ್ಕೆ ಇನ್ನೂ 1 ಗಂಟೆ ಬಾಕಿ ಇದೆ. ಹೋಗಿ ಮತದಾನ ಮಾಡಿ. ಕೊನೆ ಕ್ಷಣದ ವರೆಗೂ ಕಾದು ನೋಡುವ ಪ್ರಯತ್ನ ಬೇಡ, ಯಾವುದೇ ಆಮೀಷಕ್ಕೆ ಎದುರು ನೋಡದೆ, ನಿಮ್ಮ ಹಕ್ಕನ್ನು ನೀವು ಚಲಾಯಿಸಿ. ಇದು ನಮ್ಮ ಕೊನೆಯ, ಕಳಕಳಿಯ ಮನವಿ. ಪ್ಲೀಸ್ …

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin