ಪ್ಲೇ ಆಫ್‍ನ 2 ಸ್ಥಾನಗಳಿಗಾಗಿ 5 ತಂಡಗಳ ನಡುವೆ ಫೈಟ್

ಈ ಸುದ್ದಿಯನ್ನು ಶೇರ್ ಮಾಡಿ

Palyoff--01

ಐಪಿಎಲ್11ರ ಲೀಗ್ ಹಂತ ಈಗ ಭಾರೀ ಕುತೂಹಲ ಕೆರಳಿಸಿದ್ದು , ಪ್ಲೇಆಫ್‍ಗೇರಲು 2 ಸ್ಥಾನಗಳಿಗಾಗಿ ವಿರಾಟ್ ಕೊಹ್ಲಿ ಮುನ್ನಡೆಸುತ್ತಿರುವ ಆರ್‍ಸಿಬಿ, ದಿನೇಶ್‍ಕಾರ್ತಿಕ್ ಮುಂದಾಳತ್ವದ ಕೋಲ್ಕತ್ತಾನೈಟ್‍ರೈಡರ್ಸ್, ರೋಹಿತ್‍ಶರ್ಮಾ ಸಾರಥ್ಯದ ಮುಂಬೈ ಇಂಡಿಯನ್ಸ್ , ಅಜೆಂಕ್ಯಾರಹಾನೆ ನಾಯಕತ್ವದ ರಾಜಸ್ಥಾನ್ ರಾಯಲ್ಸ್ , ರವಿಚಂದ್ರನ್ ಅಶ್ವಿನ್ ನೇತೃತ್ವದ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡಗಳು ಪೈಪೆÇೀಟಿ ನಡೆಸುತ್ತಿದೆಯಾದರೂ ಅದೃಷ್ಟ ಯಾರ ಪಾಲಾಗಲಿದೆ ಎಂಬ ರೋಚಕತೆ ಕ್ರೀಡಾ ಪ್ರೇಮಿಗಳಲ್ಲಿ ಮೂಡಿಸಿದೆ. ಉಳಿದ ತಂಡಗಳಿಗಿಂತ ಐಪಿಎಲ್11ರ ಪ್ಲೇಆಫ್ ಬಾಗಿಲು ಬಹುತೇಕ ಮುಚ್ಚಿತ್ತೆಂದೇ ಬಿಂಬಿಸಿಕೊಂಡಿದ್ದ ತಂಡಗಳಾದ ಆರ್‍ಸಿಬಿ ಹಾಗೂ ಮುಂಬೈ ಇಂಡಿಯನ್ಸ್ ತಂಡಗಳ ಪಂದ್ಯಗಳತ್ತಲೇ ಎಲ್ಲರ ಚಿತ್ತ ಹರಿದಿದೆ.

ರಾಜಸ್ಥಾನ್ ಮಣಿಸಲು ಕೊಹ್ಲಿ ಪಡೆ ಸಜ್ಜು:
ತವರಿನ ಬೆಂಬಲದ ನಡುವೆಯೂ ಸಂಜುಸಮನ್ಸ್‍ರ ಬ್ಯಾಟಿಂಗ್ ಅಬ್ಬರದ ನಡುವೆ ರಾಜಸ್ಥಾನ್ ರಾಯಲ್ಸ್‍ಗೆ ಸೋತು ಶರಣಾಗಿದ್ದ ಆರ್‍ಸಿಬಿ , ನಾಳೆ ಜೈಪುರದಲ್ಲಿ ನಡೆಯುವ ಅಂತಿಮ ಪಂದ್ಯದಲ್ಲಿ ಗೆದ್ದರೆ ಒಟ್ಟು 14 ಅಂಕಗಳೊಂದಿಗೆ ಪ್ಲೇಆಪ್‍ಗೆ ಏರಬಹುದು. ಕೊಹ್ಲಿ ಪಡೆ 6 ಪಂದ್ಯಗಳನ್ನು ಜಯಿಸುವ ಮೂಲಕ 12 ಅಂಕಗಳನ್ನು ಗಳಿಸಿದ್ದು, 0.264 ಉತ್ತಮ ರನ್ ರೇಟ್ ಹೊಂದಿರುವುದು ತಂಡದ ದೊಡ್ಡ ಪ್ಲಸ್ ಪಾಯಿಂಟ್ ಆಗಿದೆ. ಕಳೆದ ರಾತ್ರಿ ಸನ್‍ರೈಸರ್ಸ್ ಹೈದ್ರಾಬಾದ್ ವಿರುದ್ಧ ಅಮೋಘ ಗೆಲುವು ಸಾಧಿಸಿರುವ ಕೊಹ್ಲಿ ಪಡೆಯು ರಾಜಸ್ಥಾನ್ ರಾಯಲ್ಸ್ ತಂಡವನ್ನು ಮಣಿಸಲು ಸಜ್ಜಾಗಿದೆ.

ಕಾರ್ತಿಕ್ ಬಳಗ ಗೆದ್ದರೆ ಆರ್‍ಸಿಬಿ, ಮುಂಬೈ ಹಾದಿ ಕಠಿಣ:
ಪಾಯಿಂಟ್ಸ್ ಪಟ್ಟಿಯಲ್ಲಿ 3 ನೆ ಸ್ಥಾನದಲ್ಲಿರುವ ದಿನೇಶ್‍ಕಾರ್ತಿಕ್ ಸಾರಥ್ಯದ ಕೋಲ್ಕತ್ತಾನೈಟ್‍ರೈಡರ್ಸ್ ಪ್ಲೇಆಫ್‍ಗೇರಬೇಕಾದರೆ ನಾಳೆ ಹೈದ್ರಾಬಾದ್‍ನಲ್ಲಿ ನಡೆಯುವ ಕೇನ್‍ವಿಲಿಯಮ್ಸ್ ನಾಯಕತ್ವದ ಸನ್‍ರೈಸರ್ಸ್ ತಂಡವನ್ನು ಮಣಿಸಲೇಬೇಕು. ಒಂದು ವೇಳೆ ಕೋಲ್ಕತ್ತಾ ಸೋತರೆ ಆರ್‍ಸಿಬಿ ಅಥವಾ ಮುಂಬೈ ತಂಡದ ಫಲಿತಾಂಶವನ್ನು ಎದುರು ನೋಡ ಬೇಕಾಗುತ್ತದೆ. ಎಸ್‍ಆರ್‍ಎಚ್ ವಿರುದ್ಧ ಕೆಕೆಆರ್ ಗೆದ್ದರೆ 16 ಅಂಕಗಳೊಂದಿಗೆ ಪ್ಲೇಆಫ್‍ಗೇರಬಹುದು. ಆಗ ಕೊಹ್ಲಿಯ ಆರ್‍ಬಿಸಿ ಅಥವಾ ರೋಹಿತ್‍ರ ಮುಂಬೈ ಇಂಡಿಯನ್ಸ್‍ರ ಹಾದಿ ಕಠಿಣವಾಗು ತ್ತದೆ.

ಮುಂಬೈ ಅಚ್ಚರಿ ಫಲಿತಾಂಶ:
ಐಪಿಎಲ್ 10ರಂತೆ ಈ ಬಾರಿಯ ಐಪಿಎಲ್‍ನಲ್ಲೂ ಫೀನಿಕ್ಸ್‍ನಂತೆ ಎದ್ದು ಬಂದಿರುವ ರೋಹಿತ್‍ಶರ್ಮಾ ಬಳಗ ಸತತ ಗೆಲುವುಗಳಿಂದ ಪ್ಲೇಆಫ್ ಆಸೆಯನ್ನು ಜೀವಂತವಾಗಿಟ್ಟು ಕೊಂಡಿದ್ದು ಭಾನುವಾರ ಪಾಯಿಂಟ್ಸ್ ಪಟ್ಟಿಯಲ್ಲಿ ಅಂತಿಮ ಸ್ಥಾನದಲ್ಲಿರುವ ಶ್ರೇಯಾಸ್ ಐಯ್ಯರ್ ಸಾರಥ್ಯದ ಡೆಲ್ಲಿ ಡೇರ್ ಡೆವಿಲ್ಸ್ ತಂಡದ ವಿರುದ್ಧ ಗೆಲ್ಲುವ ಮೂಲಕ ಪ್ಲೇಆಫ್‍ಗೇರುವ ಲೆಕ್ಕಾಚಾರದಲ್ಲಿ ತೊಡಗಿದೆ.ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧ 3 ರನ್‍ಗಳ ಅಚ್ಚರಿ ಗೆಲುವು ಸಾಧಿಸಿರುವ ಮುಂಬೈ ಉತ್ತಮ ರನ್‍ರೇಟ್ ಹೊಂದಿರು ವುದರಿಂದ ಡೆಲ್ಲಿ ವಿರುದ್ಧದ ಪಂದ್ಯ ಗೆದ್ದರೆ ಪ್ಲೇಆಫ್‍ಗೆ ಅರ್ಹತೆ ಪಡೆಯುತ್ತದೆ.

ಆರ್‍ಸಿಬಿಯ ಕಠಿಣ ಸವಾಲು:
ಪ್ಲೇಆಫ್‍ಗೇರುವ ಹಾದಿಯಲ್ಲಿ ರುವ ಮತ್ತೊಂದು ತಂಡವಾ ಗಿರುವ ಅಜೆಂಕ್ಯಾ ರಹಾನೆಯ ರಾಜಸ್ಥಾನ್ ರಾಯಲ್ಸ್‍ಗೆ ಈಗ ಕಠಿಣ ಸವಾಲು ಎದುರಾಗಿದೆ. ತಂಡದ ಪ್ರಮುಖ ಬ್ಯಾಟಿಂಗ್ ಅಸ್ತ್ರವಾಗಿದ್ದ ಜೋಶ್‍ಬ್ಲಟರ್ ಹಾಗೂ ಬೆನ್‍ಸ್ಟ್ರೋಕ್ ಅವರು ಆರ್‍ಸಿಬಿ ಪಂದ್ಯಕ್ಕೆ ಬಹುತೇಕ ಅಲಭ್ಯರಾಗಿದ್ದು ರಹಾನೆಗೆ ತಲೆ ಬಿಸಿಯಾಗಿದೆ. ಬ್ಯಾಟಿಂಗ್ ಹಾಗೂ ಬೌಲಿಂಗ್ ಕೂಡ ಕೈಕೊಡುತ್ತಿದ್ದರೂ ಬಲಿಷ್ಠ ಆರ್‍ಸಿಬಿ ವಿರುದ್ಧ ಉತ್ತಮ ರನ್‍ರೇಟ್‍ನೊಂದಿಗೆ ಜಯ ಗಳಿಸಿದ್ದರೆ ಮುಂದಿನ ಹಂತಕ್ಕೆ ಅರ್ಹತೆ ಪಡೆಯಲಿದೆ.

ನಡೆಯುವುದೇ ಅಶ್ವಿನ್ ಜಾದೂ:
ಕೆ.ಎಲ್. ರಾಹುಲ್ ಬಿಟ್ಟರೆ ತಂಡದಲ್ಲಿರುವ ಸ್ಟಾರ್ ಬ್ಯಾಟ್ಸ್‍ಮನ್‍ಗಳ ವೈಫಲ್ಯತೆ, ಬೌಲಿಂಗ್ ಅಸ್ತ್ರವಾಗಿದ್ದ ಮುಜೀಬ್ ರೆಹಮಾನ್‍ರ ಅಲಭ್ಯತೆಯ ನಡುವೆಯೂ ಪ್ಲೇಆಫ್‍ಗೇರುವ ಹಾದಿಯಲ್ಲಿರುವ ಕಿಂಗ್ಸ್ ಪಂಜಾಬ್, ಕ್ಯೂಲ್ ಕ್ಯಾಪ್ಟನ್ ಮಹೇಂದ್ರ ಸಿಂಗ್ ಧೋನಿ ಸಾರಥ್ಯದ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಗೆಲ್ಲಲೇಬೇಕಾದ ಒತ್ತಡಕ್ಕೆ ಸಿಲುಕಿದೆ. ಬಲಿಷ್ಠ ತಂಡವಾಗಿರುವ ಸಿಎಸ್‍ಕೆ ಮಣಿಸಬೇಕಾದರೆ ಅಶ್ವಿನ್ ಹುಡುಗರು ಜಾದೂ ಪ್ರದರ್ಶಿಸಬೇಕು, ಪ್ಲೇಆಫ್‍ಗೇರಲು 5 ತಂಡಗಳ ನಡುವೆ ಪೈಪೋಟಿ ನಡೆಯಲಿದ್ದು ವೀಕೇಂಡ್‍ಗೆ ಕ್ರೀಡಾಪ್ರೇಮಿಗಳಿಗೆ ಮನರಂಜನೆ ಸಿಗುವುದಂತೂ ಖಚಿತ.

Facebook Comments

Sri Raghav

Admin