ಪ್ಲ್ಯಾಸ್ಟಿಕ್ ಬಳಸಿದರೆ ದಂಡ

ಈ ಸುದ್ದಿಯನ್ನು ಶೇರ್ ಮಾಡಿ

plastic cover ban

ಹೊಸಕೋಟೆ, ಆ.30- ನಗರದಲ್ಲಿ ಎಲ್ಲೆಂದರಲ್ಲಿ ಕಸ ಬಿಸಾಡಿದರೆ ಹಾಗೂ ಪ್ಲ್ಯಾಸ್ಟಿಕ್‍ಬಲಸಿದರೆ ಯಾವುದೇ ಮುಲಾಜಿಲ್ಲದೆ ದಂಡ ವಿಧಿಸಲು ನಗರಸಭೆಯಲ್ಲಿ ತೀರ್ಮಾನಿಸಲಾಯಿತು. ಎಲ್ಲಂದರಲ್ಲಿ ಕಸ ಹಾಕಬಾರದು ನಗರದಾದ್ಯಂತ ಸ್ವಚ್ಚತೆಯನ್ನು ಕಾಪಾಡಬೇಕು, ಪ್ಲಾಸ್ಟಿಕ್ ನಿಷೇದಿಸಿದ್ದರು ಹಲವಾರು ವರ್ತಕರು ಇನ್ನು ಮಾರಾಟ ಮಾಡುತ್ತಿದ್ದು. ಇದರಿಂದ ಪರಿಸರ ಮಾಲಿನ್ಯ ಹೆಚ್ಚಾಗಿದೆ ಎಂದು ಅಧ್ಯಕ್ಷರು ಹೇಳಿದರು.

ಇನ್ನು ಮುಂದೆ ಯಾವುದೇ ಗ್ರಾಹಕರ ಅಂಗಡಿಯಲ್ಲಿ ಪ್ಲಾಸ್ಟಿಕ್ ರೈಡ್ ಸಮಯದಲ್ಲಿ ಸಿಕ್ಕರೆ ದಂಡದ ಜೊತೆಗೆ ಅಂತಹವರ ಅಂಗಡಿ ಲೈಸನ್ಸ್ ರದ್ದು ಮಾಡಲು ಸಭೆ ತೀರ್ಮಾನಿಸಲಾಹಿತು.ಕಂದಾಯ ವಸೂಲಿ ಮಾಡಬೇಕು ಎಂದು ಸ್ಥಾಯಿ ಸಮಿತಿ ಅಧ್ಯಕ್ಷ ಶಿವಾನಂದ್ ಅಧಿಕಾರಿಗಳಿಗೆ ಸೂಚಿಸಿದರು.ಸಭೆಯಲ್ಲಿ ಸದಸ್ಯರಾದ ರೇಣುಕಮ್ಮ, ಶ್ರೀಲಕ್ಷ್ಮೀ, ರತ್ನಮ್ಮ, ರಾಜಣ್ಣ, ನಾರಾಯಣಸ್ವಾಮಿ, ಡಿ.ಕೆ.ನಾಗರಾಜ್ ಹಾಗೂ ಅಧಿಕಾರಿಗಳು ಹಾಜರಿದ್ದರು.

 

► Follow us on –  Facebook / Twitter  / Google+

Facebook Comments

Sri Raghav

Admin