ಫಿಟ್ನೆಸ್ ಮತ್ತು ಗ್ಲ್ಯಾಮರ್‍ಗೆ ಗ್ರೀನ್ ಟೀ

ಈ ಸುದ್ದಿಯನ್ನು ಶೇರ್ ಮಾಡಿ

green-tea

ಆಧುನಿಕ ಯುಗದಲ್ಲಿ ಇಂದು ಪ್ರತಿಯೊಬ್ಬರೂ ಸಿನಿಮಾ ನಟಿಯರಂತೆ ಸ್ಲಿಮ್ ಆಗಿ ದೇಹವನ್ನು ತಳಕು ಬಳಕಿನ ಬಳ್ಳಿಯಂತೆ ಕಾಣಲು ಏನೆಲ್ಲಾ ಹರಸಾಹಸ ಮಾಡುತ್ತಾರೆ ಅಂದರೆ ನಿತ್ಯ ಜಿಮ್ , ಯೋಗ ವ್ಯಾಯಾಮ ಎಲ್ಲ ಮಾಡಿದರೂ ಪ್ರಯೋಜನವಾಗುವುದಿಲ್ಲ ಫೀಟ್ ನೆಸ್ ಗಾಗಿ ವಿವಿಧ ರೀತಿಯ ತಪಸ್ಸು ಮಾಡುತ್ತಾರೆ. ನಾನಾ ನಟಿಮಣಿಯರ ಸೌದರ್ಯದ ರಹಸ್ಯ ಗ್ರೀನ್ ಟೀ ಯಲ್ಲಿದೆಯಂತೆ ಹಾಗಂತ ನಟಿಯರೇ ಆಗಾಗ ತಮ್ಮ ದೇಹ ಸಿರಿಯ ಗುಟ್ಟನ್ನು ಹೇಳುತ್ತಿರುತ್ತಾರೆ ಅವರು ಹೇಳಿದ್ರೂ ಅಂತಲ್ಲ ನಿಜವಾಗಿಯೂ ಈ ಗ್ರೀನ್ ಟೀ ಆರೋಗ್ಯಕ್ಕೆ ಉತ್ತಮ. ಮಾತ್ರವಲ್ಲ ದೈಹಿಕ ಹಾಗು ಮಾನಸಿಕ ಸ್ಥಿತಿಯನ್ನು ಸುಧಾರಿಸುತ್ತದೆಂದು ಇತ್ತೀಚಿನ ಸಂಶೋಧನೆಯಿಂದ ತಿಳಿದು ಬಂದಿದೆ. ದಿನನಿತ್ಯ 2 ಕಪ್ ಗ್ರೀನ್ ಟೀ ಕುಡಿಯುವುದರಿಂದ ಮುಖದ ಸೌಂದರ್ಯ ಹೆಚ್ಚುವದಲ್ಲದೆ ದೇಹ ಕಾಂತಿಯುತವಾಗಿ ಕಂಗೊಳಿಸುವುದು. ಮನಸ್ಸು ಉಲ್ಲಾಸದಿಂದ ಇರುವುದು. ಇದರಿಂದ ದೇಹದ ತೂಕ ಕಡಿಮೆಯಾಗಿ ಸುಂದರ ಆಕರ್ಷಕವಾಗಿ ಕಾಣುವುದು ಹಾಗಂತ ಅತಿಯಾದರೆ ದೇಹಕ್ಕೆ ಒಳ್ಳೆಯದಲ್ಲ ಇತಿಮಿತಿಯಲ್ಲಿದ್ದರೆ ಸೂಕ್ತ.

ಹೆಚ್ಚಿರುವ ದೇಹದೊಳಗಿನ ಕೊಬ್ಬು ಕರಗಿಸಿ ತೂಕ ಇಳಿಸಲು ಉಪಯುಕ್ತ. ಸದಾ ಕೊದಲು ಉದುರುತ್ತಿದ್ದರೆ ರಾಮಬಾಣ .  ಮಧುಮೇಹ ಇದ್ದರೆ ನಿಯಂತ್ರಣಕ್ಕೆ ಸಹಕಾರಿ .ದೇಹಕ್ಕೆ ಚೈತನ್ಯ ತುಂಬಿ ಸದಾ ಲವಲವಿಕೆ ಯಿಂದ ಇರಲು ಸಹಾಯಕವಾಗಿದೆ  ಗ್ರೀನ್ ಟೀ ಕುಡಿಯುವುದರಿಂದ ಮೊಡವೆ ಮತ್ತು ತ್ವಚೆಯಸುಕ್ಕು ನಿಯಂತ್ರಣವಾಗುತ್ತದೆ .  ರೋಗನಿರೋಧಕ ಶಕ್ತಿ ಇರುವುದರಿಂದ ಅಲರ್ಜಿ ಸಮಸ್ಯೆಯಿಂದ ಕಾಪಾಡುತ್ತದೆ.

► Follow us on –  Facebook / Twitter  / Google+

Facebook Comments

Sri Raghav

Admin