ಫಿಲಿಫೈನ್ಸ್’ನಲ್ಲಿ ಹೈಮಾ ಚಂಡಮಾರುತಕ್ಕೆ 16 ಮಂದಿ ಬಲಿ, ತತ್ತರಿಸಿದ ದಕ್ಷಿಣ ಚೀನಾ

ಈ ಸುದ್ದಿಯನ್ನು ಶೇರ್ ಮಾಡಿ

Hime-01

ಬೀಜಿಂಗ್, ಅ.23-ದ್ವೀಪರಾಷ್ಟ್ರ ಫಿಲಿಫೈನ್ಸ್ ನಲ್ಲಿ 16ಕ್ಕೂ ಹೆಚ್ಚು ಜನರ ಸಾವಿಗೆ ಕಾರಣವಾದ ಹೈಮಾ ಚಂಡಮಾರುತದಿಂದ ದಕ್ಷಿಣ ಚೀನಾ ಕೂಡ ಹೈರಾಣಾಗಿದ್ದು, ಪೂರ್ವ ಗೌಂಗ್‍ಡಾಂಗ್ ಪ್ರಾಂತ್ಯದಿಂದ ಏಳು ಲಕ್ಷಕ್ಕೂ ಹೆಚ್ಚು ಜನರನ್ನು ಸ್ಥಳಾಂತರಿಸಲಾಗಿದೆ.  ಹೈಮಾ ಚಂಡಮಾರುತದ ಆರ್ಭಟಕ್ಕೆ ಶಾನ್‍ವೀ ನಗರ ತತ್ತರಿಸಿದ್ದು, 7,20,000 ಜನರನ್ನು ಸುರಕ್ಷಿತ ಸ್ಥಳಗಳಿಗೆ ರವಾನಿಸಲಾಗಿದೆ. ಭಾರೀ ಬಿರುಗಾಳಿಯೊಂದಿಗೆ ಬಿರುಮಳೆ ಸುರಿಯುತ್ತಿದೆ. ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.  ಹಾಂಕಾಂಗ್‍ನ ಕೆಲವು ಭಾಗಗಳ ಮೇಲೂ ಹೈಮಾ ಅಪ್ಪಳಿಸಿದೆ. ಸಾಗರದಲ್ಲಿ ದೈತ್ಯಾಕಾರದ ಅಲೆಗಳು ಕಾಣಿಸಿಕೊಂಡಿದ್ದು, ತೀರವಾಸಿಗಳು ಭಯಭೀತರಾಗಿದ್ದಾರೆ.

ಮನಿಲಾ ವರದಿ :

ಫಿಲಿಪ್ಪೈನ್‍ನ ಕಾರ್ಡಿಲ್ಲೆರಾ ಪ್ರಾಂತ್ಯಕ್ಕೆ ಅಪ್ಪಳಿದ ಚಂಡಮಾರುತದಿಂದ 16 ಮಂದಿ ಮೃತಪಟ್ಟಿದ್ದು, ಕೆಲವು ಕಣ್ಮರೆಯಾಗಿದ್ದಾರೆ. ಈ ಪ್ರಾಂತ್ಯಲ್ಲಿ ಸುಮಾರು 1.50 ಲಕ್ಷ ಮಂದಿ ನಿರಾಶ್ರಿತರಾಗಿದ್ದಾರೆ ಎಂದು ರಾಷ್ಟ್ರೀಯ ವಿಪತ್ತು ಗಂಡಾಂತರ ನಿರ್ವಹಣಾ ಮಂಡಳಿ ತಿಳಿಸಿದೆ.

► Follow us on –  Facebook / Twitter  / Google+

 

Facebook Comments

Sri Raghav

Admin