ಫಿಲಿಫೈನ್ಸ್’ನಲ್ಲಿ ಭಾರೀ ಭೂಕಂಪ : ಕಟ್ಟಡಗಳು ಕುಸಿತ, ಹಲವರ ಸಾವು

ಈ ಸುದ್ದಿಯನ್ನು ಶೇರ್ ಮಾಡಿ

Earthquake

ಮನಿಲಾ, ಏ.29-ದ್ವೀಪರಾಷ್ಟ್ರ ಫಿಲಿಫೈನ್ಸ್ ನಲ್ಲಿ ಇಂದು ಮುಂಜಾನೆ ಸಂಭವಿಸಿದ ಪ್ರಬಲ ಭೂಕಂಪದಿಂದ ಅನೇಕ ಕಟ್ಟಡಗಳು ಉರುಳಿ ಬಿದ್ದಿದ್ದು, ಹೆಚ್ಚಿನ ಸಾವು-ನೋವು ಉಂಟಾಗಿದೆ. ರಿಕ್ಟರ್ ಮಾಪಕದಲ್ಲಿ 6.8 ತೀವ್ರತೆಯ ಭೂಕಂಪ ಮತ್ತು ನಂತರದ ಸುನಾಮಿ ಎಚ್ಚರಿಕೆಯಿಂದಾಗಿ ನೂರಾರು ನಾಗರಿಕರು ಸುರಕ್ಷಿತ ಸ್ಥಳಗಳತ್ತ ಪಲಾಯನ ಮಾಡಿದ್ದಾರೆ. ಮಿಂಡಾನೋವಾ ಮತ್ತು ಇಂಡೋನೆಷ್ಯಾದ ಪ್ರಾಂತ್ರಗಳಲ್ಲಿ ಇಂದು ಮುಂಜಾನೆ 4.23ರ ಸಮಯದಲ್ಲಿ ಭೂಕಂಪ ಸಂಭವಿಸಿದ ಬಳಿಕ ಸಮುದ್ರದಲ್ಲಿ ದೈತ್ಯಾಕಾರದ ಅಲೆಗಳು ಎದ್ದಿರುವ ಹಿನ್ನೆಲೆಯಲ್ಲಿ ಅಧಿಕಾರಿಗಳು ಸುನಾಮಿ ಎಚ್ಚರಿಕೆ ನೀಡಿದ್ದರಾದರೂ, ಅದಾದ ಎರಡು ಗಂಟೆಗಳ ಬಳಿಕ ಜಾಗ್ರತೆ ಸಂದೇಶವನ್ನು ಹಿಂದಕ್ಕೆ ಪಡೆಯಲಾಯಿತು.ಭೂಕಂಪವಾಗುತ್ತಿದ್ದಂತೆ ಬೆಳಗಿನ ನಿದ್ರೆಯಲ್ಲಿದ್ದ ಜನರು ದುಸ್ವಪ್ನ ಕಂಡವರಂತೆ ಎದ್ದು ಆತಂಕದಿಂದ ಮನೆಗಳಿಂದ ಬೀದಿಗಳಿಗೆ ಓಡಿ ಬಂದರು.  ಭೂಕಂಪದ ನಂತರ ಅನೇಕ ಕಟ್ಟಡಗಳು ಉರುಳಿ ಬಿದ್ದಿವೆ. ಆಸ್ಪತ್ರೆಗಳು, ಸರ್ಕಾರಿ ಕಚೇರಿಗಳ ಕಟ್ಟಡಗಳಲ್ಲಿ ದೊಡ್ಡ ಬಿರುಕುಗಳು ಕಾಣಿಸಿಕೊಂಡಿವೆ. ಈ ಪ್ರದೇಶದಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಂಡಿವೆ. ರಕ್ಷಣಾ ಕಾರ್ಯಕರ್ತರು ಸಮರೋಪಾದಿಯಲ್ಲಿ ಪರಿಹಾರ ಕಾರ್ಯಾಚರಣೆಗಳನ್ನು ಕೈಗೊಂಡಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin