ಫುಟ್ಬಾಲ್ ಆಟದ ಮೈದಾನ ವಶಕ್ಕೆ ಪಡೆದ ರಾಜಮಾತೆ ಪ್ರಮೋದೇವಿ ಒಡೆಯರ್

ಈ ಸುದ್ದಿಯನ್ನು ಶೇರ್ ಮಾಡಿ

Mysur-Palace

ಮೈಸೂರು,ಸೆ.1-ನಗರದ ಅರಮನೆ ಮುಂಭಾಗ ಜಯ ಮಾರ್ತಾಂಡ ದ್ವಾರದ ಬಳಿ ಇರುವ ಫುಟ್ಬಾಲ್ ಆಟದ ಮೈದಾನವನ್ನು ಇಂದು ರಾಜಮಾತೆ ಪ್ರಮೋದಾ ದೇವಿ ಒಡೆಯರ್ ವಸ್ತುಪ್ರದರ್ಶನ ಪ್ರಾಧಿಕಾರದಿಂದ ತಮ್ಮ ವಶಕ್ಕೆ ಪಡೆದುಕೊಂಡರು. ಕಳೆದ ವರ್ಷ ಈ ಮೈದಾನದ ಜಾಗವನ್ನು ಬಿಟ್ಟುಕೊಡುವಂತೆ ದಸರಾ ವಸ್ತುಪ್ರದರ್ಶನ ಪ್ರಾಧಿಕಾರಕ್ಕೆ ನ್ಯಾಯಾಲಯ ಸೂಚಿಸಿತ್ತು. ಆದರೆ ನ್ಯಾಯಾಲಯದ ಆದೇಶವಿದ್ದರೂ ಪ್ರಾಧಿಕಾರ ಮೈದಾನವನ್ನು ರಾಜಮನೆತನದವರೆಗೆ ಬಿಟ್ಟುಕೊಟ್ಟರಲಿಲ್ಲ.  ಈ ಹಿನ್ನೆಲೆಯಲ್ಲಿ ಪ್ರಮೋದಾದೇವಿ ಒಡೆಯರ್ ನ್ಯಾಯಾಲಯದಲ್ಲಿ ಮತ್ತೆ ಅರ್ಜಿ ಸಲ್ಲಿಸಿದ್ದರು. 3-5-16ರಂದು ನ್ಯಾಯಾಲಯವು ಆದೇಶ ಹೊರಡಿಸಿ ಜಾಗವನ್ನು ರಾಜಮನೆತನಕ್ಕೆ ಬಿಟ್ಟುಕೊಟ್ಟು ಎಂಟು ವಾರದೊಳಗೆ ಖಾತೆ ಮಾಡಿಕೊಡುವಂತೆ ಸೂಚಿಸಿತ್ತು.

ಎಂಟು ವಾರದಲ್ಲಿ ಖಾತೆಯಾಗದಿದ್ದರೆ ಜಾಗವನ್ನು ತಮ್ಮ ವಶಕ್ಕೆ ಪಡೆಯಬಹುದೆಂದು ರಾಜಮನೆತನಕ್ಕೆ ಸೂಚಿಸಿತ್ತು. ಹಾಗಾಗಿ ಇಂದು ಪ್ರಮೋದಾದೇವಿ ಒಡೆಯರ್ ಅವರು 10 ಎಕರೆ 38 ಗುಂಟೆಯ ಫುಟ್ಬಾಲ್ ಆಟದ ಮೈದಾನವನ್ನು ತಮ್ಮ ವಶಕ್ಕೆ ಪಡೆದುಕೊಂಡರು.  ಈ ಆಟದ ಮೈದಾನದ ಒಂದು ಭಾಗವನ್ನು ದಸರಾ ಸಂದರ್ಭದಲ್ಲಿ ವಸ್ತುಪ್ರದರ್ಶನ ಪ್ರಾಧಿಕಾರವು ಖಾಸಗಿ ವಾಹನ ಪಾರ್ಕಿಂಗ್ನವರಿಗೆ ಟೆಂಡರ್ ನೀಡಿ ಹಣ ಪಡೆದುಕೊಳ್ಳುತ್ತಿದ್ದರು.  ಇದೀಗ ಈ ಜಾಗವನ್ನು ಪ್ರಮೋದಾದೇವಿ ಒಡೆಯರ್ ಅವರು ವಶಕ್ಕೆ ಪಡೆದಿರುವುದರಿಂದ ಈ ಬಾರಿಯ ದಸರಾ ಸಂದರ್ಭದಲ್ಲಿ ವಾಹನ ನಿಲುಗಡೆಗೆ ವಸ್ತುಪ್ರದರ್ಶನ ಪ್ರಾಧಿಕಾರದವರು ಎಲ್ಲಿ ವ್ಯವಸ್ಥೆ ಮಾಡುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.

ತೆರವು ಕಾರ್ಯ ಸ್ಥಗಿತ:

ವಸ್ತುಪ್ರದರ್ಶನ ಪ್ರಮೋದಾದೇವಿ ಒಡೆಯರ್ ಅವರು ಆಟದ ಮೈದಾನ ವಶಕ್ಕೆ ಪಡೆಯುತ್ತಿರುವ ವಿಷಯ ತಿಳಿಯುತ್ತಿದ್ದಂತೆ ವಸ್ತುಪ್ರದರ್ಶನ ಪ್ರಾಧಿಕಾರದ ಅಧಿಕಾರಿಗಳು ಧಾವಿಸಿ ನಮಗೆ ಯಾವುದೇ ಆದೇಶ ಬಂದಿಲ್ಲ. ಆದ್ದರಿಂದ ತೆರವು ಕಾರ್ಯ ಸ್ಥಗಿತಗೊಳಿಸುವಂತೆ ಪಟ್ಟು ಹಿಡಿದಿದ್ದು, ಸದ್ಯಕ್ಕೆ ತೆರವು ಕಾರ್ಯ ಸ್ಥಗಿತಗೊಂಡಿದೆ.

► Follow us on –  Facebook / Twitter  / Google+

Facebook Comments

Sri Raghav

Admin