ಫುಟ್ಬಾಲ್ ಕ್ರೀಡಾಂಗಣದಲ್ಲಿ ಸಂಭವಿಸಿದ ಕಾಲ್ತುಳಿತದಲ್ಲಿ 19 ಮಂದಿ ಸಾವು

ಈ ಸುದ್ದಿಯನ್ನು ಶೇರ್ ಮಾಡಿ

Stumpade--01

ಲೌಂಡಾ (ಅಂಗೋನ್ ), ಫೆ.11– ನೂಕು-ನುಗ್ಗಲು ಮತ್ತು ಕಾಲ್ತುಳಿತದಿಂದಾಗಿ 19ಕ್ಕೂ ಹೆಚ್ಚು ಮಂದಿ ಮೃತಪಟ್ಟು, ಅನೇಕರು ಗಾಯಗೊಂಡಿರುವ ಘಟನೆ ಉತ್ತರ ಆಂಗೋಲಾದ ಫುಟ್ಬಾಲ್ ಕ್ರೀಡಾಂಗಣದಲ್ಲಿ ಸಂಭವಿಸಿದೆ. ಗಾಯಾಳುಗಳಲ್ಲಿ ಹಲವರ ಸ್ಥಿತಿ ಗಂಭೀರವಾಗಿದ್ದು, ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಆತಂಕವಿದೆ. ಯೂಗೆ ಪಟ್ಣಣದಲ್ಲಿ ನಿನ್ನೆ ಅಂಗೋಲಾದ ಸ್ಥಳೀಯ ಲೀಗ್ ಪಂದ್ಯಾವಳಿಗಾಗಿ ಜನವರಿ-4 ಸ್ಟೇಡಿಯಂನಲ್ಲಿ ಸಾಂತಾ ರೀಟಾ ಡಿ ಕಾಸಿಯಾ ಹಾಗೂ ರಿಕ್ರಿಯೇಟಿವೋ ಡಿ ಲಿಬೊಲೊ ನಡುವೆ ತೀವ್ರ ಪೈಪೋಟಿ ನಡೆಯುತ್ತಿತ್ತು. ವೀಕ್ಷಿಸಲು ಫುಟ್ಬಾಲ್ ಅಭಿಮಾನಿಗಳು ಭಾರೀ ಸಂಖ್ಯೆಯಲ್ಲಿ ಜಮಾಯಿಸಿದ್ದರು. ಆದರೆ ಕಿಕ್ಕಿರಿದಿದ್ದ ಕ್ರೀಡಾಂಗಣದ ಒಳಗೆ ಟಿಕೆಟ್ ಇಲ್ಲದ ಜನರು ನುಗ್ಗಲು ಯತ್ನಿಸಿದಾಗ ಭಾರೀ ನೂಕುನುಗ್ಗಲು ಉಂಟಾಯಿತು.

ಈ ಬೆಳವಣಿಗೆಯಿಂದ ಆತಂಕಕ್ಕೆ ಒಳಗಾದ ಜನರು ಹೊರ ಹೋಗಲು ಪ್ರವೇಶದ್ವಾರದತ್ತ ನುಗ್ಗಿದಾಗ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಿತು. ಕಾಲ್ತುಳಿತದಿಂದ ಈವರೆಗೆ 19 ಮಂದಿ ಮೃತಪಟ್ಟು, 56 ಮಂದಿ ಗಾಯಗೊಂಡಿದ್ದಾರೆ ಎಂದು ಪೊಲೀಸ್ ವಕ್ತಾರ ಓರ್ಲಾಂಡೋ ಬರ್ನಾಡೋ ತಿಳಿಸಿದ್ದಾರೆ. ಈ ದುರ್ಘಟನೆಯಲ್ಲಿ ಉಸಿರುಗಟ್ಟಿ ಬಹುತೇಕ ಮಂದಿ ಸಾವಿಗೀಡಾಗಿದ್ದಾರೆ. ಮೃತಪಟ್ಟವರಲ್ಲಿ ಮಕ್ಕಳೂ ಇದ್ದಾರೆ. ಗಾಯಾಳುಗಳಿಗೆ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಕೆಲವರ ಸ್ಥಿತಿ ಶೋಚನೀಯವಾಗಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin