ಫುಲ್ ಬಾಟಲ್ ಟಕಿಲಾ ಮದ್ಯ ಕುಡಿದು ಪಂದ್ಯ ಗೆದ್ದ ಕೆಲವೇ ಕ್ಷಣಗಳಲ್ಲಿ ಪ್ರಾಣ ಬಿಟ್ಟ..! ( Video)

ಈ ಸುದ್ದಿಯನ್ನು ಶೇರ್ ಮಾಡಿ

Taquola---01

ಲಾ ರೋಮಾನಾ, ಮಾ.6-ಪಾನಪ್ರಿಯರಿಗೆ ಬಲು ಪ್ರಿಯವಾದ ದುಬಾರಿ ಟಕಿಲಾ ಮದ್ಯ ಡೊಮಿನಿಕ್ ಗಣರಾಜ್ಯದ ಯುವಕನೊಬ್ಬನನ್ನು ಬಲಿ ತೆಗೆದುಕೊಂಡಿದೆ. ಡೊಮಿನಿಕ್ ರಿಪಬ್ಲಿಕನ್‍ನ ಲಾ ರೋಮಾನಾದ ನೈಟ್‍ಕ್ಲಬ್‍ನಲ್ಲಿ ಪಂದ್ಯವೊಂದು ನಡೆಯುತ್ತಿತ್ತು. ಒಂದು ದೊಡ್ಡ ಶಿಷೆಯಲ್ಲಿರುವ ಟಕಿಲಾ ಕುಡಿದರೆ 500 ಪೌಂಡ್ (38,000 ರೂ.ಗಳು) ಬಹುಮಾನ ನೀಡುವುದಾಗಿ ಘೋಷಿಸಲಾಗಿತ್ತು. ಕೆಲ್ವಿನ್ ರಫಾಯಿಲ್ ಮೇಜ್ಲಾ ಎಂಬ 23 ವರ್ಷದ ಯುವಕ ಫುಲ್ ಬಾಟಲ್ ಟಕಿಲಾವನ್ನು ಗಟಗಟನೆ ಕುಡಿದು ಪಂದ್ಯ ಗೆದ್ದು ಹಣ ಜೇಬಿಗಿಳಿಸಿದ. ಆದರೆ, ಕೆಲವೇ ಕ್ಷಣಗಳಲ್ಲಿ ಆತನ ಪ್ರಾಣ ಪಕ್ಷಿ ಹಾರಿ ಹೋಗಿತ್ತು.

ಆತನನ್ನು ಪರೀಕ್ಷೆಗೆ ಒಳಪಡಿಸಿದ ವೈದ್ಯರು ವಿಪರೀತ ಆಲ್ಕೋಹಾಲ್ ಸೇವನೆಯಿಂದ ಯುವಕ ಸಾವಿಗೀಡಾಗಿದ್ದಾನೆ ಎಂದು ದೃಢಪಡಿಸಿದರು.   ಟಕಿಲಾ-ಒಂದು ವಿಶಿಷ್ಟ ಮದ್ಯ. ಇದನ್ನು ಕುಡಿದ ನಂತರ ಗಂಟಲಿನ ಮೂಲಕ ಸುರೆ ಉದರದೊಳಗೆ ಇಳಿಯುವ ಸ್ಪಷ್ಟ ಅನುಭವವಾಗುತ್ತದೆ. ಅತ್ಯಂತ ಒಗರು ಸ್ವಾದದ ಟಕಿಲಾವನ್ನು ಇತರ ಮದ್ಯಗಳಂತೆ ಸ್ವಲ್ವ ಸ್ವಲ್ಪವೇ ಕುಡಿಯುವುದು ಕಷ್ಟ. ಒಮ್ಮೆ ಬಾಯಿಗೆ ಏರಿಸಿದರೆ ಒಂದೇ ಗುಕ್ಕಿನಲ್ಲಿ ಇದನ್ನು ಕುಡಿಯಬೇಕಾಗುತ್ತದೆ. ವಿದೇಶಗಳ ಬಾರ್‍ಗಳಲ್ಲಿ ಇದನ್ನು ಒಂದೇ ಬಾರಿಗೆ ಕುಡಿಯುವ ಪಂದ್ಯಗಳು ಸಾಮಾನ್ಯವಾಗಿ ನಡೆಯುತ್ತವೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin