ಫೆಬ್ರವರಿ 14-18 ವರೆಗೆ ಬೆಂಗಳೂರಿನಲ್ಲಿ ಏರೋ ಇಂಡಿಯಾ ಪ್ರದರ್ಶನ

ಈ ಸುದ್ದಿಯನ್ನು ಶೇರ್ ಮಾಡಿ

Air-Show

ಬೆಂಗಳೂರು, ಆ.31- ಬಹು ನಿರೀಕ್ಷಿತ ಏರೋ ಇಂಡಿಯಾ -2017 ಬೆಂಗಳೂರಿನಲ್ಲಿ ನೆಡೆಯಲಿದೆ ಎಂದು ರಕ್ಷಣಾ ಮೂಲದ ಅಂತರ್ಜಾಲದಲ್ಲಿ ಪ್ರಕಟಿಸಲಾಗಿದೆ. ಯಲಹಂಕದ ವಾಯುನೆಲೆಯಲ್ಲಿ ಮುಂಬರುವ ಮುಂಬರುವ ಫೆಬ್ರವರಿ 14-18 ವರೆಗೆ ಈ ವೈಮಾನಿಕ ಪ್ರದರ್ಶನ ನಡೆಯಲಿದೆ. ಏರೋ ಇಂಡಿಯಾದ ಹನ್ನೊಂದನೆ ಆವೃತ್ತಿ ಬೆಂಗಳೂರಿನಲ್ಲಿ ನೆಡೆಯಲಿದೆ ಎಂದು ಏರೋ ಇಂಡಿಯಾ ವೆಬ್ ಸೈಟ್ ನಲ್ಲಿ ಪ್ರಕಟಿಸಿತ್ತು. ಈಗಾಗಲೇ ಗೋವಾಕ್ಕೆ ವರ್ಗಾವಣೆಯಾಗಲಿದೆ ಎಂದು ಹೇಳಲಾಗುತ್ತಿದ್ದ ಮಾತುಗಳಿಗೆ ತೆರೆ ಬಿದ್ದಿದೆ. 1996 ರಲ್ಲಿ ಆರಂಭವಾದ ಏರೋ ಇಂಡಿಯಾ ಪ್ರದರ್ಶನ ನಿರಂತರವಾಗಿ ಬೆಂಗಳೂರಿನಲ್ಲೇ ನಡೆಯುತ್ತಿರುವುದು ಒಂದು ಹೆಗ್ಗಳಿಕೆಯಾಗಿದೆ.

► Follow us on –  Facebook / Twitter  / Google+

Facebook Comments

Sri Raghav

Admin