ಫೆ.12ರಂದು ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಅಂಧರ ಟಿ 20  ವರ್ಲ್ಡ್ ಕಪ್  ಫೈನಲ್ ಪಂದ್ಯ

ಈ ಸುದ್ದಿಯನ್ನು ಶೇರ್ ಮಾಡಿ

blind-world-cup

ಬೆಂಗಳೂರು, ಜ.24- ಕ್ರಿಕೆಟ್ ಅಸೋಸಿ ಯೇಷನ್ ಫಾರ್ ದಿ ಬ್ಲೈಂಡ್(ಸಿಎಬಿಐ) ಜನವರಿ 29ರಿಂದ ಆಯೋಜಿಸಿರುವ ಅಂಧರ ಟಿ 20  ವರ್ಲ್ಡ್ ಕಪ್ ನ ಫೈನಲ್ ಪಂದ್ಯ ಬೆಂಗಳೂರಿನ ಎಂ.ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಫೆ.12ರಂದು ನಡೆಯಲಿದೆ. ಸೆಮಿಫೈನಲ್ಸ್‍ನ ಒಂದು ಪಂದ್ಯ ಮತ್ತು 11 ಲೀಗ್ ಪಂದ್ಯಗಳು ಕರ್ನಾಟಕರಾಜ್ಯಕ್ರಿಕೆಟ್ ಸಂಸ್ಥೆಯ ಬೆಂಗಳೂರಿನ ಆಲೂರು ಮೈದಾನದಲ್ಲಿ ನಡೆಯಲಿವೆ.  ಟೂರ್ನ್‍ಮೆಂಟ್‍ನಲ್ಲಿ ಭಾಗವಹಿಸುವ ತಂಡಗಳು ಆಸ್ಟ್ರೇಲಿಯಾ, ಬಾಂಗ್ಲಾದೇಶ, ಇಂಗ್ಲೆಂಡ್, ಭಾರತ, ನೇಪಾಳ, ನ್ಯೂಜಿಲೆಂಡ್, ಪಾಕಿಸ್ತಾನ, ದಕ್ಷಿಣ ಆಫ್ರಿಕಾ, ಶ್ರೀಲಂಕಾ ಮತ್ತು ವೆಸ್ಟ್ ಇಂಡೀಸ್. ಸಿಎಬಿಐನ ಅಧ್ಯಕ್ಷ ಮಹಾಂತೇಶ್ ಜಿ.ಕೆ. ಸುದ್ದಿಗಾರರ ಜತೆ ಮಾತನಾಡಿ, ಪಂದ್ಯಕ್ಕೆ ಬೆಂಬಲ ನೀಡುತ್ತಿರುವುದಕ್ಕೆ ಹಾಗೂ ಫೈನಲ್ ಪಂದ್ಯಕ್ಕೆ ಕೆಎಸ್‍ಸಿಎ ಎಂ.ಚಿನ್ನಸ್ವಾಮಿ ಸ್ಟೇಡಿಯಂ ನೀಡಿರುವುದಕ್ಕೆ ನಾನು ಕೃತಜ್ಞತೆ ಸಲ್ಲಿಸುತ್ತೇನೆ ಎಂದರು.

ಫೆ.6ರಿಂದ 9ರವರೆಗೆ ನಡೆಯ ಲಿರುವ ಲೀಗ್ ಪಂದ್ಯಗಳು, ಫೆಬ್ರವರಿ 11ರಂದು ನಡೆಯುವ ಸೆಮಿ-ಫೈನಲ್ ಮತ್ತು ಫೆಬ್ರವರಿ 12ರ ಟೂರ್ನಮೆಂಟ್ ಫೈನಲ್ಸ್‍ಗಳಿಗೆ ಬೃಹತ್ ಸಂಖ್ಯೆಯಲ್ಲಿ ಭಾಗವಹಿಸುವ ಮೂಲಕ ವಿಶ್ವಕಪ್‍ಗೆ ಬೆಂಬಲಿಸಬೇಕೆಂದು ಕೋರಿದರು.  ಟೂರ್ನಮೆಂಟ್‍ನಒಟ್ಟು ಬಜೆಟ್‍ಎಂಟು ಕೋಟಿ ರೂಪಾಯಿಗಳಾಗಿದ್ದು ನಮಗೆ ಇನ್ನೂ ಶೇ.40ರಷ್ಟು ಹಣಕಾಸಿನ ಕೊರತೆಯಿದೆ. ಅಂಧರ ಕ್ರಿಕೆಟ್‍ಗೆ ಉತ್ತೇಜನಅಗತ್ಯವಿದೆ. ಇತರೆ ಪ್ರಾಯೋಜಕರು ಮುಂದೆ ಬಂದಿದ್ದಾರೆ ಮತ್ತು ಈ ಟೂರ್ನಮೆಂಟ್‍ಅನ್ನುದೊಡ್ಡ ಪ್ರಮಾಣದಲ್ಲಿ ಮುಂದಕ್ಕೆ ಕೊಂಡೊಯ್ಯುತ್ತೇವೆ ಎಂಬ ಭರವಸೆ ಇದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಕೇಂದ್ರ ಸರ್ಕಾರದ ನೋಟುಗಳ ಅಮಾನ್ಯೀಕರಣದಕ್ರಮದಿಂದ ಕೆಲ ಕಂಪನಿಗಳ ನಗದು ಹರಿವಿನ ಮೇಲೆ      ಪರಿಣಾಮಉಂಟಾಗಿದ್ದುಅದರಲ್ಲೂರೀಟೇಲ್‍ಕಂಪನಿಗಳ ಮಾರಾಟಕ್ಕೆ ಹಿನ್ನಡೆಯಾಗಿದೆ. ಕೆಲ ಕಂಪನಿಗಳು ಅಂಧರಕ್ರಿಕೆಟ್‍ಗೆ ಪೂರ್ಣ ಬೆಂಬಲ ವ್ಯಕ್ತಪಡಿಸಿದ್ದರೂ ಕ್ರಿಕೆಟ್‍ಅವರ ಸಿಎಸ್‍ಆರ್ ಚಟುವಟಿಕೆಗಳ ಅಡಿಯಲ್ಲಿ ಬರದೇ ಇರುವುದರಿಂದಅಸಹಾಯಕತೆ ವ್ಯಕ್ತಪಡಿಸಿದ್ದಾರೆ ಎಂದರು.

ಕೆಎಸ್‍ಸಿಎಯ ಹೊಸ ಕಾರ್ಯದರ್ಶಿ ಮತ್ತು ಭಾರತದ ಮಾಜಿ ಬ್ಯಾಟ್ಸ್‍ಮನ್ ಸುಧಾಕರ್‍ರಾವ್ ಮತ್ತು ಭಾರತದ ಮಹಿಳಾ ಕ್ರಿಕೆಟ್‍ತಂಡದಓಪನರ್ ವಿ.ಆರ್.ವನಿತಾ ಉಪಸ್ಥಿತರಿದ್ದರು. ರಾಹುಲ್‍ದ್ರಾವಿಡ್ ಈ ಟೂರ್ನಮೆಂಟ್‍ನ ಬ್ರಾಂಡ್‍ರಾಯ ಭಾರಿಯಾಗಿ ಸಹಿ ಮಾಡಿದ್ದಾರೆ.  ಖ್ಯಾತ ನಟ ಹೃತಿಕ್‍ರೋಷನ್, ಭಾರತ ತಂಡದ ಕ್ಯಾಪ್ಟನ್ ವಿರಾಟ್‍ಕೊಹ್ಲಿ, ಅಜಿಂಕ್ಯರ ಹಾನೆ ಮತ್ತು ಆಶಿಶ್ ನೆಹ್ರಾ ಅಂಧರ ಕ್ರಿಕೆಟ್‍ಗೆ ಬೆಂಬಲ ಸೂಚಿಸಿದ್ದಾರೆ.  ಬೋರ್ಡ್ ಆಫ್ ಕಂಟ್ರೋಲ್ ಫಾರ್‍ಕ್ರಿಕೆಟ್‍ಇನ್‍ಇಂಡಿಯಾದ ಪೂರ್ವ ಅಧ್ಯಕ್ಷ ಅನುರಾಗ್‍ಠಾಕೂರ್ ಸಿಎಬಿಐಗೆ ಹಣಕಾಸು ನೆರವು ನೀಡುವ ಭರವಸೆ ನೀಡಿದ್ದರೂಅವರ ಬದಲಾವಣೆಯಿಂದಟೂರ್ನಮೆಂಟ್‍ಗೆ ಹೊಸ ಸವಾಲು ಎದುರಾಗಿದೆ.

ಆದರೆ ನಮಗೆ ಮತ್ತಷ್ಟು ಹಣಕಾಸು ನೆರವು ಮತ್ತು ಪ್ರಾಯೋಜಕತ್ವಅಗತ್ಯವಿದ್ದು ಕಾರ್ಪೊರೇಟ್ ಹೌಸ್‍ಗಳು, ಕೈಗಾರಿಕೆಗಳು ಮತ್ತು ಸಂಸ್ಥೆಗಳು ಮುಂದೆ ಬಂದು ನಮ್ಮ ಪ್ರಾಯೋಜಕತ್ವದ ಅಗತ್ಯಗಳನ್ನು ಪೂರೈಸಬೇಕೆಂದು ಕೋರುತ್ತೇನೆ.  ಅಂಧರ ಕ್ರಿಕೆಟ್‍ನಲ್ಲಿ ಬಳಸಲಾದ ವಿಶಿಷ್ಟ ಕ್ರಿಕೆಟ್ ಚೆಂಡನ್ನು ನಮ್ಮ ವೆಬ್‍ಸೈಟ್‍ www.blindcricket.in ನಲ್ಲಿ ಕೊಳ್ಳುವ ಮೂಲಕ ಶ್ರೀಸಾಮಾನ್ಯರೂ ನಮಗೆ ಬೆಂಬಲಿಸಬಹುದು ಎಂದು ಇದೇ ವೇಳೆ ಮಹಂತೇಶ್ ಮನವಿ ಮಾಡಿದರು. ಕೆಎಸ್‍ಸಿಎಯ ಕಾರ್ಯದರ್ಶಿ ಸುಧಾಕರ ರಾವ್ ಅಂಧರ ಕ್ರಿಕೆಟ್ ಆಯೋಜನೆಗೆ ಅಭಿನಂದನೆ ಸಲ್ಲಿಸಿದರು. ಪ್ರಾರಂಭದ ಪಂದ್ಯದಲ್ಲಿ ನವದೆಹಲಿಯ ಐಐಟಿ ಮೈದಾನ ದಲ್ಲಿ ಚಾಂಪಿಯನ್ ಭಾರತೀಯರು ಬಾಂಗ್ಲಾದೇಶದ ತಂಡದ ವಿರುದ್ಧ ಆಡಲಿದ್ದಾರೆ. ಅಜಯ್ ಕುಮಾರ್‍ರೆಡ್ಡಿ ನಾಯಕತ್ವ ವಹಿಸಲಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin