ಫೆ.2 ರವರೆಗೆ ಮೈಸೂರು ಮೃಗಾಲಯ ಪ್ರವೇಶ ನಿಷೇಧ

ಈ ಸುದ್ದಿಯನ್ನು ಶೇರ್ ಮಾಡಿ

Mysuru-zoo

ಮೈಸೂರು, ಜ.4-ನಗರದ ಶ್ರೀಚಾಮರಾಜೇಂದ್ರ ಮೃಗಾಲಯದಲ್ಲಿರುವ ಪಕ್ಷಿಗಳಿಗೆ ಹಕ್ಕಿಜ್ವರ ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ಇಂದಿನಿಂದ ಔಷಧಿ ಸಿಂಪಡಣೆ ಕಾರ್ಯ ಆರಂಭಗೊಂಡಿದ್ದು, ಮೃಗಾಲಯ ವೀಕ್ಷಣೆಯನ್ನು ಫೆ.2 ರವರೆಗೆ ನಿಷೇಧಿಸಲಾಗಿದೆ. ಮೃಗಾಲಯದಲ್ಲಿರುವ ಪಕ್ಷಿಗಳಿಗೆ ಅವಿನ್ ಇನ್‍ಫ್ಲೂಜಾ -ಎಚ್5ಎನ್8 ಎಂಬ ಹಕ್ಕಿ ಜ್ವರ ಕಾಣಿಸಿಕೊಂಡಿರುವುದರಿಂದ ಒಂದು ತಿಂಗಳ ಕಾಲ ಪ್ರವಾಸಿಗರ ವೀಕ್ಷಣೆಗೆ ಅವಕಾಶವಿರುವುದಿಲ್ಲ.  2016ರ ಡಿ.28ರಂದು ಸ್ಪಾಟ್ ಬಿಲ್ಡ್ ಮತ್ತು 3 ಗ್ರೈಲಾಗ್ ಘೋಷ್ ಪಕ್ಷಿಗಳು ಮೃತಪಟ್ಟಿದ್ದವು. ಇವುಗಳ ಸಾವಿಗೆ ಕಾರಣ ತಿಳಿಯುವ ಸಲುವಾಗಿ ಅವುಗಳ ಮಾದರಿಯನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು. ಅಲ್ಲದೆ ಡಿ.30 ರಂದು ಅದೇ ಕೊಳದಲ್ಲಿ ಮತ್ತೊಂದು ಸ್ಪಾಟ್ ಬಿಲ್ಡ್ ಮತ್ತು ಗ್ರೈಲಾಗ್ ಘೋಷ್ ಎಂಬ ಪಕ್ಷಿ ಸಾವನ್ನಪ್ಪಿತ್ತು.

ಇವುಗಳ ಮೃತ ದೇಹದ ಮಾದರಿಯನ್ನೂ ಸಹ ಐಎಎಚ್ ಮತ್ತು ವಿಬಿ ಸಂಸ್ಥೆಯ ಪ್ರಯೋಗಾಲಯಕ್ಕೆ ಕಳುಹಿಸಿಕೊಡಲಾಗಿತ್ತು.  ಜ.3ರಂದು ನ್ಯಾಷನಲ್ ಇನ್ಸ್‍ಸ್ಟಿಟ್ಯೂಟ್ ಆಫ್ ಹೈ ಸೆಕ್ಯೂರಿಟಿ ಅಂಡ್ ಅನಿಮನಲ್ ಡಿಸೀಸಸ್ ನೀಡಿರುವ ವರದಿಯನ್ನು ಪಶುಸಂಗೋಪನಾ ಇಲಾಖೆ ಆಯುಕ್ತರು ಮೃಗಾಲಯಕ್ಕೆ ಕಳುಹಿಸಿದ್ದು, ಇಲ್ಲಿನ ಪಕ್ಷಿಗಳ ಸಾವಿಗೆ ಹಕ್ಕಿ ಜ್ವರ ಕಾರಣವೆಂಬ ಅಂಶ ವರದಿಯಲ್ಲಿ ಖಾತ್ರಿಯಾದ ಹಿನ್ನೆಲೆಯಲ್ಲಿ ಈ ಮೃಗಾಲಯವನ್ನು ಇಂದಿನಿಂದ ಫೆ.2ರವರೆಗೆ ಮುಚ್ಚಲಾಗಿದ್ದು, ಔಷಧಿ ಸಿಂಪಡಣಾ ಕಾರ್ಯ ನಡೆದಿದೆ ಎಂದು ಮೃಗಾಲಯದ ಕಾರ್ಯನಿರ್ವಹಣಾ ನಿರ್ದೇಶಕಿ ಕಮಲಾ ಕರಿಕಳನ್ ತಿಳಿಸಿದ್ದಾರೆ.

Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

Sri Raghav

Admin