ಫೇಸ್‍ಬುಕ್‍ನಲ್ಲಿ ಗೆಳತಿಯ ಅಶ್ಲೀಲ ಫೋಟೋ ಪೋಸ್ಟ್ ಮಾಡಿದ್ದ ಕ್ರಿಕೆಟಿಗನ ಬಂಧನ

ಈ ಸುದ್ದಿಯನ್ನು ಶೇರ್ ಮಾಡಿ

Cricketor-Arrest

ಢಾಕಾ, ಜ.23- ಫೇಸ್‍ಬುಕ್‍ನಲ್ಲಿ ನಕಲಿ ಖಾತೆ ಸೃಷ್ಟಿಸಿ ತನ್ನ ಗೆಳತಿಯ ಅಶ್ಲೀಲ ಚಿತ್ರಗಳನ್ನು ಪೋಸ್ಟ್ ಮಾಡಿದ ಆರೋಪದ ಮೇಲೆ ಬಾಂಗ್ಲಾದೇಶದ ಖ್ಯಾತ ಕ್ರಿಕೆಟ್ ತಾರೆ ಅರಾಫತ್ ಸನ್ನಿಯನ್ನು ಪೊಲೀಸರು ಬಂಧಿಸಿದ್ದಾರೆ. ರಾಜಧಾನಿ ಢಾಕಾದ ಉಪನಗರ ಅಮೀನ್‍ಬಜಾರ್ ಪ್ರದೇಶದ ಸ್ವಗೃಹದಲ್ಲಿ 30 ವರ್ಷದ ಎಡಗೈ ಬೌಲರ್ ಸನ್ನಿಯನ್ನು ಪೊಲೀಸರು ವಶಕ್ಕೆ ತೆಗೆದುಕೊಂಡರು. ಸನ್ನಿಗೆ ದೀರ್ಘಕಾಲದ ಗೆಳತಿ ಎರಡು ವಾರಗಳ ಹಿಂದೆ ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದಳು. ಸನ್ನಿ ತನ್ನ ಹೆಸರಿನಲ್ಲಿ ನಕಲಿ ಫೇಸ್‍ಬುಕ್ ಅಕೌಂಟ್ ಸೃಷ್ಟಿಸಿ, ಅದರಲ್ಲಿ ತಮ್ಮಿಬ್ಬರ ತೀರಾ ವೈಯಕ್ತಿಕ ಚಿತ್ರಗಳನ್ನು ಪೋಸ್ಟ್ ಮಾಡಿರುವುದಾಗಿ ಪ್ರೇಯಸಿ ದೂರಿನಲ್ಲಿ ತಿಳಿಸಿದ್ದಳು.

ಬಂಧಿತ ಕ್ರಿಕೆಟಿಗನ ವಿರುದ್ಧ ಅಂತರ್ಜಾಲ ಕಾನೂನುಗಳನ್ನು ಉಲ್ಲಂಘಿಸಿದ ಆರೋಪಗಳನ್ನು ಹೊರೆಸಲಾಗಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಜಮಾಲುದ್ದೀನ್ ಮೀರ್ ತಿಳಿಸಿದ್ದಾರೆ.
ಸನ್ನಿ ವಿರುದ್ಧದ ಆರೋಪ ಸಾಬೀತಾದಲ್ಲಿ 14 ವರ್ಷಗಳ ಶಿಕ್ಷೆ ಮತ್ತು 1.26 ಲಕ್ಷ ಡಾಲರ್ ದಂಡ ತೆರಬೇಕಾಗುತ್ತದೆ ಎಂದು ಮೀರ್ ಹೇಳಿದ್ದಾರೆ.

Facebook Comments

Sri Raghav

Admin