ಫೇಸ್‍ಬುಕ್‍ನಲ್ಲಿ ಹಿಂಸೆ ದೃಶ್ಯಗಳನ್ನು ಅಳಿಸಲು 3,000 ಸಿಬ್ಬಂದಿ ನಿಯೋಜನೆ

ಈ ಸುದ್ದಿಯನ್ನು ಶೇರ್ ಮಾಡಿ

Facebook--01

ಸ್ಯಾನ್‍ಫ್ರಾನ್ಸಿಸ್ಕೋ, ಮೇ 5-ವಿಶ್ವವಿಖ್ಯಾತ ಸಾಮಾಜಿಕ ಜಾಲ ತಾಣ ಫೇಸ್‍ಬುಕ್ ತನ್ನಲ್ಲಿರುವ ಹಿಂಸಾಚಾರದ ದೃಶ್ಯಗಳನ್ನು ತೆಗೆದು ಹಾಕಲು ಮುಂದಾಗಿದೆ. ಹತ್ಯೆ, ಆತ್ಮಹತ್ಯೆ, ಭೀಕರ ಅಪಘಾತಗಳು ಮತ್ತು ಇನ್ನಿತರ ಹಿಂಸಾತ್ಮಕ ದೃಶ್ಯಗಳನ್ನು ಪ್ರದರ್ಶಿಸುವ ವೀಡಿಯೋಗಳನ್ನು ಅಳಿಸಿ ಹಾಕುವ ಕೆಲಸವನ್ನು ತ್ವರಿತಗೊಳಿಸುವುದಕ್ಕಾಗಿ ಫೇಸ್‍ಬುಕ್ ಒಂದು ವರ್ಷದ ಅವಧಿಯಲ್ಲಿ 3,000 ಉದ್ಯೋಗಿಗಳನ್ನು ನೇಮಕ ಮಾಡಿಕೊಳ್ಳಲಿದೆ.ಫೇಸ್‍ಬುಕ್‍ನಲ್ಲಿ ಬಿತ್ತರವಾಗುವ ಇಂಥ ಹಿಂಸಾರೂಪದ ದೃಶ್ಯಗಳ ಬಗ್ಗೆ ಸಮಾಜದ ವಿವಿಧ ವಲಯಗಳಿಂದ ತೀವ್ರ ವಿರೋಧ ವ್ಯಕ್ತವಾಗಿತ್ತು. ತನ್ನ ಲೋಕಪ್ರಿಯ ಸಾಮಾಜಿಕ ಜಾಲತಾಣಕ್ಕೆ ಎದುರಾಗಿರುವ ದೊಡ್ಡ ಸವಾಲನ್ನು ನಿಭಾಯಿಸಲು ಫೇಸ್‍ಬುಕ್ ಈ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin