ಫೇಸ್‍ಬುಕ್ ಗೆಳೆತನದಿಂದ ಪ್ರೀತಿಗೆದ್ದ ದಿವ್ಯಾಂಗ ಯುವಕ..!

ಈ ಸುದ್ದಿಯನ್ನು ಶೇರ್ ಮಾಡಿ

Facebook

ಹುಳಿಯಾರು, ಜೂ.17-ಫೇಸ್‍ಬುಕ್ ಮೂಲಕ ಪರಿಚಿತರಾಗಿ ಪ್ರೇಮ ಪಾಶಕ್ಕೆ ಸಿಲುಕಿದ್ದ ಯುವತಿಗೆ ಕಡೆಗಳಿಗೆಯಲ್ಲಿ ಹುಡುಗ ದಿವ್ಯಾಂಗನೆಂಬುದನ್ನು ತಿಳಿದರೂ ಲೆಕ್ಕಿಸದೆ ಸಪ್ತಪದಿ ತುಳಿದು ಪ್ರೀತಿಯನ್ನು ಅಮರವಾಗಿಸಿದ್ದಾರೆ.  ಸಾಮಾಜಿಕ ಜಾಲತಾಣವಾದ ಫೇಸ್‍ಬುಕ್ ಮೂಲಕ ಪರಿಚಯದಿಂದ ಸ್ನೇಹ ಬೆಳೆದು ಪ್ರೇಮಕ್ಕೆ ತಿರುಗಿ ಮದುವೆ ಮಾತುಕತೆ ಹಂತಕ್ಕೆ ಬಂದು ನಿಂತಾಗ ಹುಡುಗ ಎರಡೂ ಕಾಲಿಲ್ಲದ ದಿವ್ಯಾಂಗನೆಂದು ತಿಳಿದಾಗ ಹಿಂಜರಿಯದ ಹುಡುಗಿ ಮದುವೆಯಾದ ಘಟನೆ ಹುಳಿಯಾರು ಹೋಬಳಿಯ ಬೆಳ್ಳಾರ ಗ್ರಾಮದ ಅಂಬರಾಪುರದಲ್ಲಿ ನಡೆದಿದೆ.

ಬೆಳ್ಳಾರ ಗ್ರಾಮದ ಅಂಬರಾಪುರದ ವಾಸಿ ನಾಗರಾಜು ಹಾಗೂ ಕಡೂರಿನ ಜ್ಯೋತಿ ಫೇಸ್ ಬುಕ್ಕಿನಲ್ಲಿ ಬಂದ ಫ್ರೆಂಡ್ ರಿಕ್ವೆಸ್ಟ್ ಮೂಲಕ ಪರಿಚಿತರಾಗಿದ್ದರು. ಇವರ ಸ್ನೇಹ ಪ್ರೇಮಕ್ಕೆ ತಿರುಗಿತ್ತು. ಇಬ್ಬರೂ ಒಂದೇ ಜಾತಿಯಾಗಿದ್ದರಿಂದ ಪೋಷಕರಿಗೆ ತಿಳಿಸಿದ ತಕ್ಷಣ ಸಮ್ಮತಿ ಸಿಕ್ಕಿದೆ. ಆದರೆ ಹುಡುಗ ವಿಕಲಚೇತನ ಎಂಬುದು ಮಾತುಕತೆಗೆ ಬಂದಾಗ ಹುಡುಗಿಗೆ ತಿಳಿದಿದೆ. ಆದರೂ ಚಕಾರ ಎತ್ತದೆ ಮುದುವೆಗೆ ಒಪ್ಪಿ ಪ್ರೀತಿಗೆ ಜಿಂದಾಬಾದ್ ಹೇಳಿದ್ದಾರೆ.

ಇಬ್ಬರ ವಿವಾಹವನ್ನು ಅಂಬಾರಪುರ ಬಳಿಯ ತಾಂಡ್ಯದ (ಕಲಗೇರಿ) ಈಶ್ವರನ ದೇವಾಲಯದಲ್ಲಿ ಆತ್ಮೀಯರ ಹಾಗೂ ಬಂಧು ಬಾಂಧವರ ಸಮ್ಮುಖದಲ್ಲಿ ಸರಳವಾಗಿ ನಡೆದಿದೆ. ತಾಪಂ ಸ್ಥಾಯಿ ಸಮಿತಿ ಅಧ್ಯಕ್ಷ ಏಜೆಂಟ್‍ಕುಮಾರ್, ಸಾಮಾಜಿಕ ಹೋರಾಟಗಾಗಿ ದಬ್ಬಗುಂಟೆ ರವಿಕುಮಾರ್ ಸೇರಿದಂತೆ ಅಪಾರ ಮಂದಿ ಈ ಅಪರೂಪದ ಮದುವೆಗೆ ಸಾಕ್ಷಿಕರಿಸಿದರು. ಸಾಮಾಜಿಕ ಜಾಲತಾಣ ಫೇಸ್‍ಬುಕ್, ವಾಟ್ಸಪ್ ಗೆ ಜನ ಮಾರುಹೋಗಿ ದಿನದ ಸಮಯವೆಲ್ಲಾ ವ್ಯರ್ಥವಾಗುತ್ತಿದೆ ಎಂಬ ಆರೋಪ ಕೇಳಿಬರುತ್ತಿರುವ ಬೆನ್ನಲ್ಲೇ ಈ ಮದುವೆ ಸಾಮಾಜಿಕ ತಾಣವೂ ಕೂಡ ಹೇಗೆ ಸಂಬಂಧ ಬೆಸಯಬಲ್ಲದು ಎಂಬುದಕ್ಕೆ ನಿದರ್ಶನವಾಗಿದೆ.

ವರ ನಾಗರಾಜು ಮಂಡಿಯ ಕೆಳಭಾಗದಿಂದ ಕಾಲೇಇಲ್ಲದಿದ್ದರೂ ಜೀವನದಲ್ಲಿ ಏನನ್ನಾದರೂ ಸಾಧಿಸಲೇಬೇಕೆಂಬ ಛಲಹೊತ್ತು ಪದವಿ ಕಲಿಯುವ ಸಮಯದಲ್ಲೆ ಕಂಪ್ಯೂಟರ್ ತರಬೇತಿ ಪಡೆದು ಗ್ರಾಪಂನಲ್ಲಿ ಕಂಪ್ಯೂಟರ್ ಆಪರೇಟರ್ ಉದ್ಯೋಗ ಮಾಡುತ್ತಿದ್ದ. ಈಗ ಜಿಲ್ಲಾ ಪಂಚಾಯ್ತಿಯಲ್ಲಿ ಗುತ್ತಿಗೆ ಆಧಾರದ ಮೇಲೆ ಕೆಲಸ ನಿರ್ವಹಿಸುತ್ತಿದ್ದಾನೆ.   ವಧು ಜ್ಯೋತಿ ಚಿಕ್ಕಮಗಳೂರು ಜಿಲ್ಲೆಯ ಕಡೂರು ನಿವಾಸಿಯಾಗಿದ್ದು ಬಡ ಕುಟುಂಬದಿಂದ ಬಂದಿದ್ದು ತಂದೆ ತಾಯಿಯಿಲ್ಲದ ಅನಾಥೆ. ಈಕೆ ಪ್ರಸ್ತುತ ತುಮಕೂರು ನಗರದ ಗಾರ್ಮೆಂಟ್‍ನಲ್ಲಿ ಕೆಲಸ ಮಾಡುತ್ತಿದ್ದಾಳೆ. ಸದ್ಯ ಈಗ ಇಬ್ಬರೂ ತುಮಕೂರು ನಗರದಲ್ಲಿ ವಾಸಿಸುತ್ತಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Facebook Comments

Sri Raghav

Admin