ಫೇಸ್ ಬುಕ್ ನಲ್ಲಿ ಲೈವ್ ನಲ್ಲಿ ಸಾಹಸ ಮಾಡಲು ಹೋಗಿ ಸತ್ತ..! (ವಿಡಿಯೋ )

ಈ ಸುದ್ದಿಯನ್ನು ಶೇರ್ ಮಾಡಿ

ಸ್ವಿಜರ್ ಲೆಂಡ್ ಆ.29 : ತನ್ನ ಸಾಹಸವನ್ನು ಫೇಸ್ ಬುಕ್ ನಲ್ಲಿ ಲೈವ್ ಆಗಿ ತೋರಿಸಿ, ಗೆಳೆಯರನ್ನು ಖುಷಿಪಡಿಸಲು ಮುಂದಾಗಿದ್ದ. ವನೊಬ್ಬ ತನ್ನ ಪ್ರಾಣಕಳೆದುಕೊಂಡ ಘಟನೆ ಸ್ವಿಜರ್ ಲೆಂಡ್ ನಲ್ಲಿ ನಡೆದಿದೆ.   ಫೇಸ್ ಬುಕ್ ನಲ್ಲಿ ಲೈವ್ ನಲ್ಲಿ ಆರ್ಮಿನ್ ಶೇಮಿಡೇರ್ ಎಂಬಾತ ಸ್ಕೈ ಡೈವಿಂಗ್ ಮಾಡುವ ಸಂದರ್ಭದಲ್ಲಿ ಆಯತಪ್ಪಿ ಬಂಡೆಗೆ ಅಪ್ಪಳಿಸಿ ಪ್ರಾಣ ಕಳೆದುಕೊಂಡಿದ್ದಾನೆ. ಸ್ವಿಜರ್ ಲೆಂಡ್ ನ ಕಂಡೇರ್ ಸೈಗ್ ಎಂಬ ಬೆಟ್ಟದಿಂದ ಸ್ಕೈ ಡೈವಿಂಗ್ ಮಾಡಲು ಯೋಚಿಸಿದ ಆರ್ಮಿನ್, ತನ್ನ ಸಾಹಸವನ್ನು ಫೇಸ್ ಬುಕ್ ನಲ್ಲಿ ಲೈವ್ ಆಗಿ ತೋರಿಸಿ, ಗೆಳೆಯರನ್ನು ಖುಷಿಪಡಿಸಲು ಮುಂದಾಗಿದ್ದ. ಈತನ ಸಾಹಸವನ್ನು ಗೆಳೆಯರೆಲ್ಲಾ ಫೇಸ್ ಬುಕ್ ನಲ್ಲಿ ನೋಡುತ್ತಿದ್ದರು. ಹೀಗೆ ಗೆಳೆಯರು ನೋಡುವಾಗಲೇ ಬೆಟ್ಟದಿಂದ ಹಾರಿದ ಆರ್ಮಿನ್ ಆಯತಪ್ಪಿ ಬಂಡೆಗೆ ಅಪ್ಪಳಿಸಿ ಮೃತಪಟ್ಟಿದ್ದಾನೆ.

► Follow us on –  Facebook / Twitter  / Google+

Facebook Comments

Sri Raghav

Admin