ಫೈನಲ್‍ ಫೈಟ್ : ಬದ್ಧ ವೈರಿಗಳ ಕಾದಾಟ ಕಣ್ತುಂಬಿಕೊಳ್ಳಲು ಕೋಟ್ಯಾಂತರ ಜನರ ಕಾತರ

ಈ ಸುದ್ದಿಯನ್ನು ಶೇರ್ ಮಾಡಿ

Cricket--01

ಲಂಡನ್,ಜೂ.17-ಜಾಗತಿಕ ಕ್ರಿಕೆಟ್‍ನ ಬದ್ಧವೈರಿಗಳೆಂದು ಗುರುತಿಸಿಕೊಂಡಿರುವ ಭಾರತ, ಪಾಕಿಸ್ತಾನ ನಡುವೆ ನಾಳೆ ಕೆನ್ನಿಂಗ್ಟನ್ ಓವಲ್‍ನಲ್ಲಿ ನಡೆಯಲಿರುವ ಹೈವೊಲ್ಟೇಜ್ ಫೈನಲï ಪಂದ್ಯ ಕ್ರಿಕೆಟ್ ಅಭಿಮಾನಿಗಳ ಎದೆಬಡಿತ ಹೆಚ್ಚಿಸಿದೆ.   ಶತಕೋಟಿ ಭಾರತೀಯರು ಟೀಂ ಇಂಡಿಯಾದ ಗೆಲುವಿಗೆ ಹೋಮಹವನ ನಡೆಸುತ್ತಿದ್ದರೆ ಮತ್ತೊಂದೆಡೆ ಪಾಕ್‍ನಲ್ಲೂ ಕೂಡ ಗೆಲುವಿಗಾಗಿ ಅಭಿಮಾನಿಗಳು ವಿಶೇಷ ಪ್ರಾರ್ಥನೆ ಸಲ್ಲಿಸುತ್ತಿದ್ದಾರೆ. ಇನ್ನೊಂದೆಡೆ ಉಭಯ ತಂಡಗಳಲ್ಲಿ ಪ್ರಶಸ್ತಿ ಯಾರ ಪಾಲಾಗಲಿದೆ ಎಂಬುದರ ಕುರಿತು ಎಲ್ಲೆಡೆ ಭರ್ಜರಿ ಬೆಟ್ಟಿಂಗ್ ದಂಧೆಯೂ ಆರಂಭವಾಗಿದೆ.

ನವದೆಹಲಿ, ಷಾರ್ಜ, ಅರಬ್ ಎಮಿರೆಟ್ಸ್ ಸೇರಿದಂತೆ ಕ್ರಿಕೆಟ್ ಆಡುವ ರಾಷ್ಟ್ರಗಳು ಕೂಡ ಎರಡು ತಂಡಗಳ ಪರ ವಿರೋಧವಾಗಿ ನೂರಾರು ಕೋಟಿ ಬೆಟ್ಟಿಂಗ್ ಕಟ್ಟಿಕೊಂಡಿವೆ. ಹೆಚ್ಚಿನ ಪಂಟರ್‍ಗಳು ಭಾರತದ ಪರ ಬೆಟ್ಟಿಂಗ್ ಮಾಡಿದರೆ ಕೆಲವರು ಈ ಬಾರಿ ಪಾಕ್ ಗೆದ್ದೇ ಗೆಲ್ಲುತ್ತದೆ ಎಂಬ ಅತಿಯಾದ ಆತ್ಮವಿಶ್ವಾಸದಿಂದ ಹಣ ಹೂಡಿದ್ದಾರೆ.   ಈ ಬಾರಿ ಪಾಕ್ ತಂಡ ಎಲ್ಲರ ಲೆಕ್ಕಾಚಾರಗಳನ್ನು ತಲೆ ಕೆಳಗೆ ಮಾಡಿ ಗೆದ್ದೇ ಗೆಲ್ಲುತ್ತದೆ. ಕೊಹ್ಲಿ ಅವರ ತಂಡ ಏನೇ ಸರ್ಕಸ್ ನಡೆಸಿದರೂ ಗೆಲುವು ಸಾಧ್ಯವಿಲ್ಲ ಎಂಬ ಲೆಕ್ಕಚಾರ ದಲ್ಲಿ ಬೆಟ್ಟಿಂಗ್ ಕಟ್ಟಿಕೊಂಡಿದ್ದಾರೆ.

ಗುರುವಾರ ಬರ್ಮಿಂಗ್ ಹ್ಯಾಮ್‍ನಲ್ಲಿ ನಡೆದ ಎರಡನೇ ಸೆಮಿಫೈನಲï ಪಂದ್ಯದಲ್ಲಿ ಬಾಂಗ್ಲಾ ದೇಶದ ವಿರುದ್ಧ ಭಾರತ 9 ವಿಕೆಟ್‍ಗಳ ಜಯ ಸಾಧಿಸಿ ಫೈನಲ್ ಪ್ರವೇಶ ಪಡೆದುಕೊಂಡಿದ್ದು, ಅತ್ತ ಆತಿಥೇಯ ಇಂಗ್ಲೆಂಡ್ ವಿರುದ್ಧ ಗೆಲುವು ದಾಖಲಿಸಿ ರುವ ಪಾಕ್ ಫೈನಲ್ ಪ್ರವೇಶ ಪಡೆದುಕೊಂಡಿದೆ.  ಪಾಕಿಸ್ತಾನ ಚಾಂಪಿಯನ್ಸ್ ಟ್ರೋಫಿಯಲ್ಲಿ ಫೈನ ಲ್ ಪ್ರವೇಶಿಸಿದ್ದು ಇದೇ ಮೊದಲು. ಆದರೆ ಭಾರತ ನಾಲ್ಕು ಬಾರಿ ಫೈನಲ್ ಪ್ರವೇಶಿಸಿದೆ. ಜತೆಗೆ ಎರಡು ಬಾರಿ ಚಾಂಪಿಯನ್ ಕೂಡ ಆಗಿದೆ. ಈ ಬಾರಿ ಲೀಗ್ ಹಂತದಲ್ಲಿ ಉಭಯ ತಂಡಗಳು ಮೊದಲ ಪಂದ್ಯದಲ್ಲೇ ಮುಖಾಮುಖಿ ಯಾಗಿ ದ್ದವು. ಈ ಪಂದ್ಯದಲ್ಲಿ ಭಾರತದ ವಿರುದ್ಧ ಪಾಕ್ ಸೋತಿತ್ತು.

ಉಭಯ ತಂಡಗಳ ಬಲಾಬಲ:

ಐಸಿಸಿ ಆಯೋಜಿಸಿರುವ ಪ್ರಮುಖ ಟೂರ್ನಿಗಳಲ್ಲಿ ಭಾರತ ತಂಡವನ್ನು ಸೋಲಿಸಿಲ್ಲ ಎಂಬ ಕಳಂಕ ಪಾಕಿಸ್ತಾನ ತಂಡದ ಮೇಲಿದೆ. ಐಸಿಸಿ ರ್ಯಾಂಕಿಂಗ್ ಪಟ್ಟಿಯಲ್ಲಿ 2 ಸ್ಥಾನದಲ್ಲಿರುವ ಭಾರತ ಹಾಗೂ 7ನೇ ಸ್ಥಾನದಲ್ಲಿರುವ ಪಾಕಿಸ್ತಾನ ಇಲ್ಲಿಯವರೆಗೂ ಒಟ್ಟು 128 ಅಂತಾರಾಷ್ಟ್ರೀಯ ಏಕದಿನ ಪಂದ್ಯಗಳಲ್ಲಿ ಮುಖಾಮುಖಿಯಾಗಿವೆ. ಇದರಲ್ಲಿ 52 ಪಂದ್ಯಗಳಲ್ಲಿ ಭಾರತ, 72 ಪಂದ್ಯಗಳಲ್ಲಿ ಪಾಕ್ ಗೆಲುವು ಸಾಧಿಸಿದ್ದು, 4 ಪಂದ್ಯಗಳಿಂದ ಫಲಿತಾಂಶ ಹೊರಬಿದ್ದಿಲ್ಲ.

ಕಳೆದ 10 ಪಂದ್ಯಗಳು :

2010ರಿಂದ 2017ರವರೆಗೆ ಕಳೆದ 10 ಪಂದ್ಯಗಳ ಇತಿಹಾಸ ನೋಡುವುದಾದರೆ ಭಾರತ ಆಡಿರುವ 10ರಲ್ಲಿ 7 ಪಂದ್ಯಗಳಲ್ಲಿ ಗೆಲುವು ಸಾಧಿಸಿ, ಉಳಿದ 3 ಪಂದ್ಯಗಳಲ್ಲಿ ಸೋಲು ಕಂಡಿದೆ.

ಚಾಂಪಿಯನ್‍ಟ್ರೋಫಿಯಲ್ಲಿ ಮುಖಾಮುಖಿ:

ಐಸಿಸಿ ಚಾಂಪಿಯನ್ಸ್ ಟ್ರೋಫಿಯ ಏಕದಿನ ಟೂರ್ನಿಯಲ್ಲಿ ಭಾರತ-ಪಾಕಿಸ್ತಾನ ತಂಡಗಳು ಒಟ್ಟು 28 ಪಂದ್ಯಗಳಲ್ಲಿ ಮುಖಾಮುಖಿಯಾಗಿದ್ದು, ಭಾರತ 18 ಪಂದ್ಯಗಳಲ್ಲಿ ಗೆಲುವು, 7 ಪಂದ್ಯಗಳಲ್ಲಿ ಸೋಲು ಕಂಡಿದೆ. ಇತ್ತ ಪಾಕ್ ತಂಡ ಆಡಿರುವ 22 ಪಂದ್ಯಗಳಲ್ಲಿ 10ರಲ್ಲಿ ಗೆಲುವು ಹಾಗೂ 12 ಪಂದ್ಯಗಳಲ್ಲಿ ಸೋತಿದೆ. ಮೂರು ಪಂದ್ಯಗಳಿಂದ ಫಲಿತಾಂಶ ಬಂದಿಲ್ಲ. ಈ ಹಿಂದೆ ಭಾರತ 2002 ಹಾಗೂ 2013ರಲ್ಲಿ ಚಾಂಪಿಯನ್ ತಂಡವಾಗಿ ಹೊರಹೊಮ್ಮಿದ್ದು, ಪಾಕಿಸ್ತಾನ 2000, 2004 ಹಾಗೂ 2009ರಲ್ಲಿ ಸೆಮಿಫೈನಲ್‍ಗೆ ಮಾತ್ರ ಲಗ್ಗೆ ಇಟ್ಟಿದೆ.

ಇದರ ಜತೆಗೆ ಈ ಹಿಂದಿನ ಇತಿಹಾಸ ನೋಡಿದಾಗ ಐಸಿಸಿ ಆಯೋಜಿಸಿರುವ ಪಂದ್ಯಗಳಲ್ಲಿ ಟೀಂ ಇಂಡಿಯಾ ಜಯಭೇರಿ ಬಾರಿಸಿದೆ. 2015ರ ಏಕದಿನ ವಿಶ್ವಕಪ್, 2014ರ ಏಷ್ಯಾಕಪ್, 2013ರ ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾರತ ಗೆಲುವಿನ ಕೇಕೆ ಹಾಕಿದೆ.   ಒಟ್ಟಿನಲ್ಲಿ ನಾಳೆ ನಡೆಯಲಿರುವ ಫೈನಲ್ ಪಂದ್ಯ ಉಭಯ ರಾಷ್ಟ್ರಗಳ ಕ್ರಿಕೆಟ್ ಅಭಿಮಾನಿಗಳಲ್ಲಿ ಹುಚ್ಚೆಬ್ಬೆಸಿರುವುದು ಸುಳ್ಳಲ್ಲ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin