ಫೈನಾನ್ಸ್ ಹಣ ಲಪಟಾಯಿಸಿದ್ದ ಆರೋಪಿ ಬಂಧನ

ಈ ಸುದ್ದಿಯನ್ನು ಶೇರ್ ಮಾಡಿ

arrest

ಕನಕಪುರ,ಸೆ.23- ಫೈನಾನ್ಸ್ ಕಂಪನಿಯ ಹಣವನ್ನು ಲಪಟಾಯಿಸಿ ಜಾಣತನದಿಂದ ಜಾರಿಕೊಳ್ಳಲು ಯತ್ನಿಸಿದ ಆರೋಪಿಯೊಬ್ಬನನ್ನು ಕಗ್ಗಲಿಪುರ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕೆಂಗೇರಿಯ ಜಯಲಕ್ಷ್ಮಿ ಫೈನಾನ್ಸ್‍ನಲ್ಲಿ ಹಣವಸೂಲಿಗಾರನಾಗಿ ಕೆಲಸ ನಿರ್ವಹಿಸುತ್ತಿದ್ದ ಕೆಂಗೇರಿ ಹೋಬಳಿ ಬೆಟ್ಟದಹಳ್ಳಿ ಗ್ರಾಮದ ವಾಸಿ ಗಿರೀಶ್ ಬಂಧಿತ ಆರೋಪಿ. ಈತ ಲಪಟಾಯಿಸಿದ್ದ 2.83 ಲಕ್ಷ ರೂ.ವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಘಟನೆಯ ವಿವರ:
ಕೆಂಗೇರಿ ಜಯಲಕ್ಷ್ಮಿ ಫೈನಾನ್ಸ್‍ನಲ್ಲಿ ಹಣವಸೂಲಿಗಾರನಾಗಿ ಕೆಲಸ ನಿರ್ವಹಿಸುತ್ತಿದ್ದ ಗಿರೀಶ್ ಕಗ್ಗಲಿಪುರ ಪೊಲೀಸ್ ಠಾಣಾ ವ್ಯಾಪ್ತಿಯ ವಿವಿಧ ಊರುಗಳಲ್ಲಿ ಫೈನಾನ್ಸ್‍ನ ಹಣ ವಸೂಲಿಮಾಡಿಕೊಂಡು ಕಗ್ಗಲಿಪುರದಿಂದ ಕಂಬಿಪುರಕ್ಕೆ ಹೋಗುವಾಗ ರಸ್ತೆಯ ನಿರ್ಜನ ಪ್ರದೇಶದಲ್ಲಿ ಮೂತ್ರ ವಿಸರ್ಜನೆ ಮಾಡುವ ವೇಳೆಯಲ್ಲಿ ಪಲ್ಸರ್ ಮೋಟಾರ್‍ಬೈಕ್‍ನಲ್ಲಿ ಬಂದ ಇಬ್ಬರು ಅಪರಿಚಿತ ಮುಸುಕುಧಾರಿಗಳು ನನ್ನಮೇಲೆ ಹಲ್ಲೆನಡೆಸಿ ಹಣ ದೋಚಿಕೊಂಡು ಹೋಗಿದ್ದಾರೆಂದು ಫೈನಾನ್ಸ್ ಮಾಲೀಕರಿಗೆ ವಿಷಯ ತಿಳಿಸಿದ್ದನು.ಫೈನಾನ್ಸ್‍ನ ಮಾಲೀಕರು ಕಗ್ಗಲಿಪುರ ಪೊಲೀಸ್ ಠಾಣೆಯಲ್ಲಿ ದರೋಡೆ ಪ್ರಕರಣ ದಾಖಲಿಸಿದ್ದರು. ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ ಸರ್ಕಲ್ ಇನ್ಸ್‍ಪೆಕ್ಟರ್ ಶ್ರೀನಿವಾಸ್ ಮತ್ತು ಸಬ್‍ಇನ್ಸ್‍ಪೆಕ್ಟರ್ ಕೃಷ್ಣಕುಮಾರ್ ಪ್ರಾರಂಭದಲ್ಲಿ ಫೈನಾನ್ಸ್ ಹಣ ದೋಚಿದ್ದಾರೆಂದು ಹೇಳಿದ ವಸೂಲಿಗಾರ ಗಿರೀಶ್‍ನನ್ನು ವಿಚಾರಣೆಗಾಗಿ ಒಳ ಪಡಿಸಿದಾಗ ಸತ್ಯಾಂಶ ಹೊರ ಬಂದಿದೆ.

 

► Follow us on –  Facebook / Twitter  / Google+

Facebook Comments

Sri Raghav

Admin