ಫೈರ್ ಬ್ರಾಂಡ್ ಖ್ಯಾತಿಯ ಕಂಗನಾಳ ಸಂಭಾವನೆ ಎಷ್ಟು ಗೊತ್ತೇ..?

ಈ ಸುದ್ದಿಯನ್ನು ಶೇರ್ ಮಾಡಿ

Kangana

ಬಾಲಿವುಡ್‍ನ ಪ್ರಸಿದ್ಧ ತಾರೆಯರಾದ ಪ್ರಿಯಾಂಕ ಚೋಪ್ರಾ ಮತ್ತು ದೀಪಿಕಾ ಪಡುಕೋಣೆ ನಂತರ ಅತಿ ಹೆಚ್ಚು ಸುದ್ದಿಯಲ್ಲಿರುವ ನಟಿ ಎಂದರೆ ಫೈರ್ ಬ್ರಾಂಡ್ ಖ್ಯಾತಿಯ ಕಂಗನಾ ರನಾವತ್. ದಟ್ಟ ಗುಂಗುರು ಕೂದಲಿನ ಈ ಚೆಲುವೆ ಒಂದು ಸಿನಿಮಾಗೆ ಪಡೆಯುವ ಸಂಭಾವನೆ ಎಷ್ಟು? ಕಂಗನಾ 15 ಕೋಟಿ ರೂ. ರೆಮ್ಯುನರೇಷನ್ ಪಡೆಯುತ್ತಾರೆ ಎಂಬ ರೂಮರ್‍ಗಳಿವೆ. ಅಂದರೆ ಈಕೆ ಪಡೆಯುವ ಸಂಭಾವನೆ ದೀಪಿಕಾ ಯಾನೆ ಡಿಪ್ಪಿಗಿಂತಲೂ ಹೆಚ್ಚು. ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದ ಪದ್ಮಾವತಿ ಚಿತ್ರಕ್ಕೆ ದೀಪಿಕಾ ಪಡೆದಿರುವ ಸಂಭಾವನೆ 12 ಕೋಟಿ ರೂ.ಗಳು. ಅಲ್ಲಿಗೆ ಈಕೆ ದೀಪಿಕಾಳನ್ನು ಹಿಂದೆ ಸರಿಸಿದ್ದಾಳೆ ಎಂದಾಯಿತು.

ಮೊನ್ನೆ ನಡೆದ ಸಮಾರಂಭವೊಂದರಲ್ಲಿ ಸಿನಿ ಪತ್ರಕರ್ತರು ನೀವು ಅತ್ಯಧಿಕ ಸಂಭಾವನೆ ಪಡೆಯುವ ಬಾಲಿವುಡ್ ನಟಿಯಂತೆ ಎಂದು ಮಾತಿಗೆಳೆಯಲು ಯತ್ನಿಸಿದಾಗ, ಕಂಗನಾ ಸಿಡಿಮಿಡಿಗೊಂಡಳು. ನಾನು ಎಷ್ಟು ಸಂಭಾವನೆ ಪಡೆಯುತ್ತೇನೆ, ಎಷ್ಟು ಶುಲ್ಕ ವಿಧಿಸುತ್ತೇನೆ ಎಂಬುದು ಬೇರೆಯವರಿಗೆ ಸಂಬಂಧಪಟ್ಟ ವಿಷಯವಲ್ಲ. ಅದು ನನಗೆ ಮಾತ್ರ ಗೊತ್ತು. ನಾನು ಕಷ್ಟಪಡುತ್ತೇನೆ. ಅದಕ್ಕೆ ತಕ್ಕ ಸಂಭಾವನೆ ಪಡೆಯುತ್ತೇನೆ. ಅದನ್ನು ಕಟ್ಟಿಕೊಂಡು ಬೇರೆಯವರಿಗೆ ಏನಾಗಬೇಕು ಎಂದು ಖಾರವಾಗಿ ಪ್ರಶ್ನಿಸಿದ್ದಾಳೆ ಕಂಗನಾ. ಪತ್ರಕರ್ತರು ಮತ್ತೆ ಕೆದಕಿದಾಗ ಈಕೆ ಸ್ಪಷ್ಟ ಉತ್ತರ ನೀಡದಿದ್ದರೂ, ಅತ್ಯಧಿಕ ಸಂಭಾವನೆ ಪಡೆಯುವ ತಾರೆಯಲ್ಲಿ ತಾನೂ ಕೂಡ ಒಬ್ಬಳೆಂಬ ವರದಿಗಳನ್ನು ತಳ್ಳಿ ಹಾಕಿಲ್ಲ.

> ಯಾವ ಸುದ್ದಿಯನ್ನೂ ಮಿಸ್ ಮಾಡ್ಕೋಬೇಡಿ… :  Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

Sri Raghav

Admin