ಫೋಟೋಗೆ ಪೋಸ್ ಕೊಡಲು ಮೇಯರ್- ಜಿ.ಪಂ.ಅಧ್ಯಕ್ಷೆ ಕೋಳಿ ಜಗಳ, ಜನರಿಗೆ ಪುಕ್ಕಟೆ ಮನರಂಜನೆ…!

ಈ ಸುದ್ದಿಯನ್ನು ಶೇರ್ ಮಾಡಿ

Tumakuru

ತುಮಕೂರು. ಜ.26 : 26 ಗಣರಾಜ್ಯೋತ್ಸವ ಕಾರ್ಯಕ್ರಮದ ಪ್ರಶಸ್ತಿ ಪ್ರಧಾನ ಸಮಾರಂಭ ತುಮಕೂರು ಮಹಾನಗರ ಪಾಲಿಕೆ ಮೇಯರ್ ಹಾಗೂ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಲತಾ ರವಿಕುಮಾರ್ ನಡುವಿನ ಒಳ ಜಗಳಕ್ಕೆ ಕಾರಣವಾಗಿದ್ದು, ಎಲ್ಲರ ಎದುರಲ್ಲಿಯೇ ಇಬ್ಬರು ವಾಗ್ವಾದ ನಡೆಸಿದ್ದಾರೆ.  ಮೇಯರ್ ಹಾಗೂ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಪ್ರಶಸ್ತಿ ಪ್ರಧಾನದ ವೇಳೆ ಪ್ರಶಸ್ತಿ ಪುರಸ್ಕೃತರ ಪಕ್ಕದಲ್ಲಿ ನಿಲ್ಲಲ್ಲು ಇನ್ನಿಲ್ಲದ ಕಸರತ್ತು ನಡೆಸಿದ್ದು, ಇದರಿಂದ ಇಬ್ಬರ ನಡುವೆ ಕೆಲ ಸಮಯ ಸಮರ ನಡೆದಿದೆ, ಪ್ರಶಸ್ತಿ ಪ್ರಧಾನ ಕಾರ್ಯಕ್ರಮದಲ್ಲಿ ಮುಂದೆ ನಿಂತಿದ್ದ ಮೇಯರ್ ಅವರನ್ನು ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಲತಾ ರವಿಕುಮಾರ್ ಹಿಂದಕ್ಕೆ ಎಳೆಯಲು ಯತ್ನಿಸಿದ್ದರಿಂದ ಇಬ್ಬರ ನಡುವೆ ಮಾತಿನ ಚಕಮಕಿ ನಡೆಯಿತು ಎನ್ನಲಾಗಿದೆ.

ಲತಾ ರವಿಕುಮಾರ್ ಅವರು ಎಷ್ಟೇ ಹಿಂದಕ್ಕೆ ಎಳೆದರು ಜಗ್ಗದೇ ನಿಂತಿದ್ದ ಮೇಯರ್ ಯಶೋಧಮ್ಮ ಶ್ರೀನಿವಾಸ್ ಅವರ ನಡೆ ಬಗ್ಗೆ ಜಿ.ಪಂ.ಅಧ್ಯಕ್ಷೆ ಅಸಮಾಧಾನ ವ್ಯಕ್ತಪಡಿಸಿದ್ದು, ವಾರ್ನಿಂಗ್ ಸಹ ನೀಡಿದರು ಎಂದು ಇವರಿಬ್ಬರ ವಾಕ್ಸಮರವನ್ನು ನೋಡಿದವರು ಹೇಳಿದ್ದಾರೆ. ಏನೇ ಆಗಲಿ ಗಣರಾಜ್ಯೋತ್ಸವ ದಿನದಂದೇ ಇಬ್ಬರು ಮಹಿಳಾ ಜನಪ್ರತಿನಿಧಿಗಳ ನಡುವಿನ ತಿಕ್ಕಾಟ ಹೊರಬಿದ್ದಂತಾಗಿದೆ.

ಆಗಿದ್ದೇನು..?

68ನೇ ಗಣರಾಜ್ಯೋತ್ಸವ ಕಾರ್ಯಕ್ರಮದ ಅಂಗವಾಗಿ ತುಮಕೂರಿನ ಎಂ.ಜಿ.ಸ್ಟೇಡಿಯಂನಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರಿಗೆ ಸನ್ಮಾನ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು, ಈ ವೇಳೆ ಜಿಲ್ಲಾ ಉಸ್ತುವಾರಿ ಸಚಿವ ಟಿ.ಬಿ.ಜಯಚಂದ್ರ, ಸಂಸದ ಮುದ್ದಹನುಮೇಗೌಡ ಹಾಗೂ ಇತರರಿದ್ದರು, ಈ ವೇಳೆ ಸಂಸದರ ಜೊತೆಗೆ ನಿಂತಿದ್ದ ಮೇಯರ್ ಅವರನ್ನು ಹಿಂದಕ್ಕೆ ಸರಿಸಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಲತಾ ರವಿ ಕುಮಾರ್ ಸಂಸದರ ಪಕ್ಕಕ್ಕೆ ಬರಲು ಯತ್ನಿಸಿದ್ದಾರೆ, ಆದರೆ ಮೇಯರ್ ಜಿಲ್ಲಾ ಪಂಚಾಯಿತಿ ಅಧ್ಯಕ್ಷರು ಬದಿಗೆ ಸರಿಸಲು ಯತ್ನಿಸಿದರು ಪಕ್ಕಕ್ಕೆ ಸರಿದು ನಿಲ್ಲದೇ ಇರುವುದರಿಂದ ಇಬ್ಬರ ನಡುವೆ ವಾಕ್ಸಮರ ನಡೆದಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಇದೆಲ್ಲಾ ಆಗಿದ್ದು ಕೇವಲ ಫೋಟೋಗಾಗಿ ಎನ್ನುವುದು ಮಾತ್ರ ವಿಶೇಷ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin