ಫೋಟೋಗೆ ಪೋಸ್ ಕೊಡಲು ಹೋಗಿ ಪ್ರಾಣ ಕಳೆದುಕೊಂಡ ವಿದ್ಯಾರ್ಥಿ..!

ಈ ಸುದ್ದಿಯನ್ನು ಶೇರ್ ಮಾಡಿ

Photo--02

ಬೆಂಗಳೂರು,ಅ.5-ಹಳಿ ಮೇಲಿನ ಸೆಲ್ಫಿ ಕ್ರೇಜಿಗೆ ಮೂವರು ವಿದ್ಯಾರ್ಥಿಗಳು ಬಲಿಯಾದ ಪ್ರಕರಣ ಮಾಸುವ ಮುನ್ನವೇ ಮತ್ತೊಬ್ಬ ವಿದ್ಯಾರ್ಥಿ ಕ್ಯಾಮೆರಾ ಮೋಹಕ್ಕೆ ಜೀವ ತೆತ್ತಿದ್ದಾನೆ. ಕೆ.ನಾರಾಯಣಪುರದಲ್ಲಿರುವ ಕೃಷ್ಣ ಜಯಂತಿ ಕಾಲೇಜಿನಲ್ಲಿ ಬಿಬಿಎ 3ನೇ ಸೆಮಿಸ್ಟರ್ ಓದುತ್ತಿದ್ದ ಕೇರಳ ಮೂಲದ ಅಖಿಲ್‍ನಾಥ್(19) ಕ್ಯಾಮೆರಾ ಮೋಹಕ್ಕೆ ಬಲಿಯಾದ ವಿದ್ಯಾರ್ಥಿ.  ಈತ ನಗರದ ಪಿಜಿಯಲ್ಲಿದ್ದು ಇಂದು ಬೆಳಗ್ಗೆ 10.30ರ ಸಮಯದಲ್ಲಿ ಕೇರಳದವರೇ ಆದ ತನ್ನ ಮೂವರು ಸಹಪಾಠಿ ವಿದ್ಯಾರ್ಥಿನಿಯರೊಂದಿಗೆ ಕೊತ್ತನೂರು ಸಮೀಪದ ಕ್ವಾರಿ ಬಳಿಗೆ ತೆರಳಿದ್ದನು.

ಇತ್ತೀಚೆಗೆ ಬಿದ್ದ ಮಳೆಯಿಂದಾಗಿ ಕ್ವಾರಿಯಲ್ಲಿ ನೀರು ನಿಂತು ಹೊಂಡವಾಗಿ ಪರಿವರ್ತನೆಯಾಗಿತ್ತು. ನೀರಿನ ಸಮೀಪ ಅಖಿಲ್‍ನಾಥ್ ಫೋಟೋ ತೆಗೆಸಿಕೊಳ್ಳುವ ಸಮಯದಲ್ಲಿ ಕ್ವಾರಿ ತುದಿಯಲ್ಲಿ ನಿಂತು ಪೋಸ್ ಕೊಡಲು ಹೋಗಿ ಹಿಂಬದಿಯಲ್ಲಿದ್ದ ನೀರಿಗೆ ಬಿದ್ದಿದ್ದಾನೆ.  ತಕ್ಷಣ ಜೊತೆಯಲ್ಲಿದ್ದ ಮೂವರು ವಿದ್ಯಾರ್ಥಿನಿಯರು ಕೂಗಿಕೊಂಡಾಗ ಅಕ್ಕಪಕ್ಕದವರು ಬಂದು ನೋಡುವಷ್ಟರಲ್ಲಿ ಅಖಿಲ್‍ನಾಥನ ಪ್ರಾಣಪಕ್ಷಿ ಹಾರಿಹೋಗಿತ್ತು.  ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಹೊಂಡದಲ್ಲಿ ಬಿದ್ದಿದ್ದ ಅಖಿಲ್‍ನಾಥ್‍ನ ಶವ ಹೊರ ತೆಗೆದಿದ್ದಾರೆ. ಕೊತ್ತನೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಜರುಗಿಸಿದ್ದಾರೆ.

Facebook Comments

Sri Raghav

Admin