ಫೋನ್ ಕದ್ದಿದ್ದಕ್ಕೆ ನಾಲ್ವರ ಗುದದ್ವಾರಕ್ಕೆ ಪೆಟ್ರೋಲ್ ಇಂಜೆಕ್ಷನ್ ಚುಚ್ಚಿದ ದುರುಳರು..!

ಈ ಸುದ್ದಿಯನ್ನು ಶೇರ್ ಮಾಡಿ

Petrol-injection

ಗಾಜಿಯಾಬಾದ್, ಅ.21-ಹೇಸಿಗೆ ಹುಟ್ಟಿಸುವಂಥ ಮನುಷ್ಯನ ಕೌರ್ಯಕ್ಕೆ ಇಲ್ಲೊಂದು ಉದಾಹರಣೆ ಇದೆ. ಫೋನ್ ಕದ್ದ ಆರೋಪಕ್ಕಾಗಿ ಇಬ್ಬರು ಬಾಲಕರೂ ಸೇರಿದಂತೆ ನಾಲ್ವರನ್ನು ಥಳಿಸಿದ್ದ ದುರುಳರು ಅವರ ಗುದದ್ವಾರಕ್ಕೆ ಪೆಟ್ರೋಲ್ ಇಂಜೆಕ್ಷನ್ ಚುಚ್ಚಿದ ಹೀನಾಯ ಘಟನೆ ಉತ್ತರಪ್ರದೇಶದ ಗಜಿಯಾಬಾದ್‍ನಲ್ಲಿ ನಡೆದಿದೆ.  ಅಸ್ವಾಭಾವಿಕ ಅಪರಾಧ ಕೃತ್ಯಗಳನ್ನು ಎಸಗಿದ ಆರೋಪದ ಸಮಾಜವಾದಿ ಪಕ್ಷದ ನಾಯಕನೊಬ್ಬನ ಸಹೋದರ ಸೇರಿದಂತೆ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.

ಪ್ರಕರಣದ ಹಿನ್ನೆಲೆ :

ಸ್ಥಳೀಯ ಎಸ್‍ಪಿ ಪಕ್ಷದ ನಾಯಕನ ತಮ್ಮ ರಿಜ್ಜು ಗಜಿಯಾಬಾದ್‍ನ ಲೋನಿ ಪ್ರದೇಶದಲ್ಲಿ ಹಾಲಿನ ಡೇರಿ ನಡೆಸುತ್ತಿದ್ದ. ಅ.14ರಂದು ಈತನ ಫೋನ್ ಕಳ್ಳತನವಾಗಿತ್ತು. ಜಾಹೀರ್ ಬೇಗ್(17), ಗುಲ್ಜರ್(16) ಹಾಗೂ ಫಿಮೋ ಮತ್ತು ಫಿರೋಜ್ (ಇಬ್ಬರಿಗೂ 25 ವರ್ಷಗಳು) ಇವರ ಮೇಲೆ ರಿಜ್ಜು ಶಂಕೆ ವ್ಯಕ್ತಪಡಿಸಿದ. ನಂತರ ತನ್ನ ಸಹಚರರಾದ ಅಖಿಲ್ ಮತ್ತು ನದೀಮ್ ಅವರೊಂದಿಗೆ ಸೇರಿ ಈ ನಾಲ್ವರನ್ನು ಥಳಿಸಿದ್ದೇ ಅಲ್ಲದೇ ಅವರ ಗುದದ್ವಾರಗಳಿಗೆ ಪೆಟ್ರೋಲ್ ಇಂಜೆಕ್ಷನ್ ಚುಚ್ಚಿದ ಎಂದು ಪೊಲೀಸ್ ವರಿಷ್ಠಾಧಿಕಾರಿ (ಗ್ರಾಮಾಂತರ) ರಾಕೇಶ್ ಪಾಂಡೆ ತಿಳಿಸಿದ್ದಾರೆ.
ಈ ಕೃತ್ಯದಿಂದ ಅಸ್ವಸ್ಥರಾದ ನಾಲ್ವರನ್ನು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಚಿಕಿತ್ಸೆಗಾಗಿ ಕರೆದೊಯ್ಯಲಾಯಿತು. ನಂತರ ಅವರನ್ನು ಜಿಲ್ಲಾ ಆಸ್ಪತ್ರೆಗೆ ಸೇರಿಲಾಯಿತು. ಹೆಚ್ಚಿನ ಚಿಕಿತ್ಸೆಗಾಗಿ ಬಾಲಕರಾದ ಜಾಹೀರ್ ಮತ್ತು ಗುಲ್ಜರ್‍ಗೆ ದೆಹಲಿಯ ಜಿಟಿಬಿ ಆಸ್ಪತ್ರೆಗೆ ದಾಖಲಿಸಲಾಯಿತು. ಅಲ್ಲಿ ವೈದ್ಯರು ಗುದನಾಳಕ್ಕೆ ಬೈಪಾಸ್ ಮಾಡುವ ಮೂಲಕ ದೊಡ್ಡ ಕರುಳಿಗೆ ಶಸ್ತ್ರಕ್ರಿಯೆ ನಡೆಸಿ ಸೀಸ ರಾಸಾಯನಿಕಯುಕ್ತ ಪೆಟ್ರೋಲ್‍ನನ್ನು ಹೊರಗೆ ತೆಗೆದಿದ್ದಾರೆ.

ಲೋನಿ ಕೊಟ್ವಾಲ ಪೊಲೀಸ್ ಠಾನೆಯಲ್ಲಿ ಆರೋಪಿಗಳ ವಿರುದ್ಧ ಅಸ್ವಾಭಾವಿಕ ಅಪರಾಧ ಸೇರಿದಂತೆ ವಿವಿಧ ಪ್ರಕರಣಗಳ ಎಫ್‍ಐಆರ್ ದಾಖಲಿಸಲಾಗಿದೆ. ರಿಜು ಮತ್ತು ಅಖಿಲ್‍ನನ್ನು ಬಂಧಿಸಲಾಗಿದ್ದು, ನದೀಂ ನಾಪತ್ತೆಯಾಗಿದ್ದಾನೆ.

► Follow us on –  Facebook / Twitter  / Google+

Facebook Comments

Sri Raghav

Admin