ಫ್ರಾನ್ಸ್ ಚೆಲುವೆಗೆ 2017ನೆ ಸಾಲಿನ ವಿಶ್ವಸುಂದರಿ ಕಿರೀಟ

ಈ ಸುದ್ದಿಯನ್ನು ಶೇರ್ ಮಾಡಿ

Miss-Universe-2017

ಮನಿಲಾ ಫಿಲಿಪೈನ್ಸ್, ಜ.30-ಮಿಸ್ ಫ್ರಾನ್ಸ್ ಐರಿಸ್ ಮಿಟ್ಟೆನಾಯಿರೆ (24) 2017ನೆ ಸಾಲಿನ ವಿಶ್ವಸುಂದರಿಯಾಗಿ ಹೊರಹೊಮ್ಮಿದ್ದಾರೆ. ದ್ವೀಪರಾಷ್ಟ್ರ ಫಿಲಿಪೈನ್ಸ್‍ನಲ್ಲಿ ನಿನ್ನೆ ರಾತ್ರಿ ನಡೆದ ಅದ್ದೂರಿ ವರ್ಣರಂಜಿತ ಕಾರ್ಯಕ್ರಮದಲ್ಲಿ ಐರಿಸ್ ಭುವನ ಸುಂದರಿ ಕಿರೀಟ ತೊಟ್ಟು ಗೆಲುವಿನ ಮುಗುಳ್ನಗೆ ಬೀರಿದರು. ಉತ್ತರ ಫ್ರಾನ್ಸ್‍ನ ಲಿಲ್ಲೆಯಲ್ಲಿ ಡೆಂಟಲ್ ಸರ್ಜರಿ ವ್ಯಾಸಂಗ ಮಾಡುತ್ತಿರುವ ಐರಿಸ್ ಈ ಸ್ಪರ್ಧೆಯಲ್ಲಿ ವಿಶ್ವದ ಅತಿಲೋಕ ಸುರಸುಂದರಿಯನ್ನು ಹಿಂದೆ ಸರಿಸಿ ಭುವನ ಸುಂದರಿಯಾಗಿ ಆಯ್ಕೆಯಾದರು. ದ್ವೀಪರಾಷ್ಟ್ರ ಹೈಲಿ ಮತ್ತು ಮಿಸ್ ಕೊಲಂಬಿಯಾ ಸ್ಪರ್ಧಿಗಳು ಕ್ರಮವಾಗಿ ಮೊದಲ ಮತ್ತು ಎರಡನೇ ರನ್ನರ್ ಅಪ್ ಆದರು.

ಜಾಗತಿಕ ನಿರಾಶ್ರಿತರ ಬಿಕ್ಕಟ್ಟು ಕುರಿತು ಫೈನಲ್ ತೀರ್ಪುಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಐರಿಸ್, ನಿರಾಶ್ರಿತರ ಅನುಕೂಲಕ್ಕಾಗಿ ದೇಶಗಳ ನಡುವೆ ಮುಕ್ತ ಗಡಿಗಳು ಇರಬೇಕು ಎಂದು ಉತ್ತರಿಸಿ ಪ್ರೇಕ್ಷಕರೆಲ್ಲರ ಮನಗೆದ್ದರು. ಭÁರತದ ಮಾಜಿ ಭುವನ ಸುಂದರಿ ಮತ್ತು ಬಾಲಿವುಡ್ ನಟಿ ಸುಷ್ಮಿತಾ ಸೇನ್ ಈ ಸ್ಪರ್ಧೆಯ ತೀರ್ಪುಗಾರರಲ್ಲಿ ಒಬ್ಬರಾಗಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin