ಫ್ರಾನ್ಸ್ ನ ವಾಯುವ್ಯ ಸಮುದ್ರ ತೀರದಲ್ಲಿ ಪರಮಾಣು ಸ್ಥಾವರ ಸ್ಫೋಟ : ಹಲವರು ಅಸ್ವಸ್ಥ

ಈ ಸುದ್ದಿಯನ್ನು ಶೇರ್ ಮಾಡಿ

nuclear-plant

ಕೇನ್, ಫೆ.10-ಪರಮಾಣು ಸ್ಥಾವರವೊಂದು ಸ್ಫೋಟಗೊಂಡು ಹಲವರು ಅಸ್ವಸ್ಥರಾಗಿರುವ ಘಟನೆ ಫ್ರಾನ್ಸ್ ನ ವಾಯುವ್ಯ ಸಮುದ್ರ ತೀರದಲ್ಲಿ ಸಂಭವಿಸಿದೆ.   ಸ್ಫೋಟದಿಂದ ಹೊಗೆ ಸೇವಿಸಿ ಎಂಟು ಮಂದಿ ಅಸ್ವಸ್ಥರಾಗಿದ್ದಾರೆ. ಆದರೆ ಯಾರಿಗೂ ಗಂಭೀರ ಗಾಯಗಳಾಗಲಿ ಅಥವಾ ವಿಕಿರಣದ ಅಪಾಯವಾಗಿಲಿ ಆಗಿಲ್ಲ ಎಂದು ತಿಳಿಸಿದ್ದಾರೆ.   ಚೆರ್ಲ್‍ಬರ್ಗ್ ಬಂದರಿನಿಂದ 15 ಕಿ.ಮೀ.ದೂರದಲ್ಲಿರುವ ಫ್ಲೇಮಿನ್ ವಿಲ್ಲೆ ಸ್ಥಾಪರದ ಎಂಜಿನ್ ರೂಂನಲ್ಲಿ ಸ್ಫೋಟ ಸಂಭವಿಸಿದೆ. ಸ್ಥಾವರದ ಅಣುವಲಯದ ಹೊರ ವ್ಯಾಪ್ತಿಯ ಕೋಣೆಯ ವೆಂಟಿಲೇಟರ್‍ನಲ್ಲಿ ಸ್ಫೋಟ ಉಂಟಾಗಿದ್ದರಿಂದ ಪರಮಾಣು ದುರಂತ ತಪ್ಪಿದೆ.

ಈ ಘಟನೆ ಬಳಿಕ ಎರಡು ಎರಡು ಜಲ ರಿಯಾಕ್ಟರ್‍ಗಳ ಪೈಕಿ ಒಂದನ್ನು ಮುಚ್ಚಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Facebook Comments

Sri Raghav

Admin