ಫ್ರೆಂಚ್ ವಾಟರ್… ದೇಸಿ ಕಿಸ್..!

ಈ ಸುದ್ದಿಯನ್ನು ಶೇರ್ ಮಾಡಿ

Befikre

ಮುಂಬೈ, ಆ.10- ಯಾವುದೇ ಸಿನಿಮಾ ಇರಲಿ, ಅದು ಸಕ್ಸಸ್ ಆಗೋಕೆ ಪೋಸ್ಟರ್ ಸಹ ಮುಖ್ಯವಾಗುತ್ತೆ. ಬಿಫಿಕ್ರೆ ಚಿತ್ರದ ಹಸಿ ಬಿಸಿ ಪೋಸ್ಟರ್‍ದ್ದೇ ಈಗ ಸುದ್ದಿಯ  ದೊಡ್ಡ ಸದ್ದು. ರಿಲೀಸ್‍ಗೆ ಮುನ್ನವೇ ಈ ಸಿನಿಮಾ ಪೋಸ್ಟರ್ ಪಡ್ಡೆಗಳನ್ನು ಆಕರ್ಷಿಸಿದೆ. ರಣ್‍ವೀರ್‍ಸಿಂಗ್ ಮತ್ತು ವಾಣಿ ಕಪೂರ್ ನಟಿಸಿರುವ ಕಿಸ್ಸಿಂಗ್ ದೃಶ್ಯದ ಪೋಸ್ಟರ್ ಸದ್ಯ ಬಿ ಟೌನ್‍ನ ಹಾಟ್ ನ್ಯೂಸ್.
ಸಿಂಗ್ ಮತ್ತು ವಾಣಿ ಪರಸ್ಪರ ತುಟಿ ಬೆಸೆದುಕೊಂಡಿರೋ ಚುಂಬನ ಯುವಕರಿಗೆ ರೋಮಾಂಚನ.  ರಣ್‍ವೀರ್ ಈ ಪೋಸ್ಟರ್ ಕುರಿತು ಟೀಚ್ ಮಾಡಿದ್ದಾನೆ. ಫ್ರೆಂಚ್ ವಾಟರ್-ದೇಸಿ ಕಿಸಸ್ ಎಂದು ಆತ ಮಾರ್ಮಿಕವಾಗಿ ಉಲ್ಲೇಖಿಸಿದ್ದಾನೆ.  ಈ ಚಿತ್ರದ ಡೈರೆಕ್ಟರ್ ಆದಿತ್ಯ ಚೋಪ್ರಾ. 2009ರಲ್ಲಿ ರಬ್ ನೆ ಬನಾ ದೆ ಜೋಡಿ ಚಿತ್ರದ ಬಳಿಕ ಏಳು ವರ್ಷಗಳ ಗ್ಯಾಪ್ ನಂತರ ಚೋಪ್ರಾ ಬಿ ಫಿಕ್ರೆ ಸಿನಿಮಾ ಮೂಲಕ ಗ್ರ್ಯಾಂಡ್ ಎಂಟ್ರಿ ನೀಡಿದ್ದಾನೆ.

 

Facebook Comments

Sri Raghav

Admin