ಫ್ಲಾರಿಡಾ ಏರ್‍ಪೋರ್ಟ್‍ನಲ್ಲಿ ಬಂದೂಕುಧಾರಿಯ ಅಟ್ಟಹಾಸ : ಐವರ ಬಲಿ

ಈ ಸುದ್ದಿಯನ್ನು ಶೇರ್ ಮಾಡಿ

glorida

ಹೌಸ್ಟನ್, ಜ.7-ಬಂದೂಕುಧಾರಿಯೊಬ್ಬ ನಡೆಸಿದ ಗುಂಡಿನ ದಾಳಿಯಲ್ಲಿ ಐವರು ಸ್ಥಳದಲ್ಲೇ ಮೃತಪಟ್ಟು, ಇತರ ಎಂಟು ಮಂದಿ ತೀವ್ರ ಗಾಯಗೊಂಡಿರುವ ಘಟನೆ ಅಮೆರಿಕದ ಫ್ಲಾರಿಡಾದಲ್ಲಿನ ಲಾಡರ್‍ಡೆಲ್-ಹಾಲಿವುಡ್ ಇಂಟರ್‍ನ್ಯಾಷನಲ್ ಏರ್‍ಪೋರ್ಟ್‍ನಲ್ಲಿ ನಿನ್ನೆ ರಾತ್ರಿ ನಡೆದಿದೆ. ಈ ಘಟನೆಯಿಂದ ಇಡೀ ಪ್ರಾಂತ್ಯದಲ್ಲಿ ಆತಂಕದ ವಾತಾವರಣ ಸೃಷ್ಟಿಯಾಗಿದೆ.
ಹತ್ಯಾಕಾಂಡಕ್ಕೆ ಕಾರಣನಾದ ಇರಾಕ್ ಮೂಲದ 26 ವರ್ಷದ ಎಸ್ಟೆಬನ್ ಸ್ಯಾಂಟಿಯಾಗೋ ಎಂಬ ಯುವಕನನ್ನು ಪೊಲೀಸರು ಬಂಧಿಸಿದ್ದು, ತನಿಖೆ ನಡೆಸುತ್ತಿದ್ದಾರೆ.  ಇರಾಕ್ ಯೋಧನಾದ ಈತನ ಅತೃಪ್ತಿಕರ ಸಾಧನೆಯಿಂದಾಗಿ ಕಳೆದ ವರ್ಷ ಅಲಾಸ್ಕ ಆರ್ಮಿ ನ್ಯಾಷನಲ್ ಗಾರ್ಡ್ ಸೇವೆಯಿಂದ ವಜಾಗೊಳಿಸಲಾಗಿತ್ತು.

glorida-1
ಲಾಡರ್‍ಡೆಲ್ ಏರ್‍ಪೋರ್ಟ್‍ನ ಟರ್ಮಿನಲ್-2 ಸರಕು ವಿಭಾಗದಲ್ಲಿ ತಪಾಸಣಾ ಕೇಂದ್ರದ ಹೊರಗೆ ಈ ಗುಂಡಿನ ದಾಳಿ ನಡೆಯಿತು. ಬಂದೂಕುಧಾರಿಯ ಆಕ್ರಮಣದ ನಂತರ ಜನರು ದಿಕ್ಕಾಪಾಲಾಗಿ ಓಡಿದರು. ಫೈರಿಂಗ್‍ನಲ್ಲಿ ಕನಿಷ್ಠ ಐವರು ಮೃತಪಟ್ಟು, 8 ಮಂದಿ ತೀವ್ರ ಗಾಯಗೊಂಡರು ಎಂದು ಫ್ಲೋರಿಡಾದ ಬ್ರೊವಾರ್ಡ್ ಕೌಂಟಿಯ ಶರೀಫ್ (ಪೊಲೀಸ್) ಕಚೇರಿ ತಿಳಿಸಿದೆ.
ಈ ನರಮೇಧಕ್ಕೆ ನಿಖರ ಕಾರಣ ತಿಳಿಯಲು ಸ್ಯಾಂಟಿಯಾಗೋನನ್ನು ತೀವ್ರ ವಿಚಾರಣೆಗೆ ಒಳಪಡಿಸಲಾಗಿದೆ.

Eesanje News 24/7 ನ್ಯೂಸ್ ಆ್ಯಪ್ –  Click Here to Download 

glorida-2

glorida-5

glorida-3

glorida-4

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin