ಫ್ಲೆಕ್ಸ್ಗಳ ಕಿತ್ತಾಟಕ್ಕೆ ಸಾಕ್ಷಿಯಾಯ್ತು ಎಚ್ಡಿಕೆ ನೇತೃತ್ವದ ಪ್ರತಿಭಟನೆ

ಈ ಸುದ್ದಿಯನ್ನು ಶೇರ್ ಮಾಡಿ

turuve-kere-flex
ತುರುವೇಕೆರೆ, ಆ.24-ಕೊಬ್ಬರಿ ಹಾಗೂ ಅಡಿಕೆಗೆ ಬೆಂಬಲ ಬೆಲೆ ನೀಡಬೇಕೆಂದು ಒತ್ತಾಯಿಸಿ ತಾಲೂಕು ಜೆಡಿಎಸ್ ವತಿಯಿಂದ ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ನೇತೃತ್ವದಲ್ಲಿ ಪಟ್ಟಣದಲ್ಲಿ ಹಮ್ಮಿಕೊಂಡಿದ್ದ ಪ್ರತಿಭಟನೆಯು ಫ್ಲೆಕ್ಸ್ಗಳ ಕಿತ್ತಾಟಕ್ಕೆ ಸಾಕ್ಷಿಯಾಯಿತು. ಪ್ರತಿಭಟನೆ ಅಂಗವಾಗಿ ಪಟ್ಟಣದಲ್ಲಿ ದೊಡ್ಡ ದೊಡ್ಡ ಫ್ಲೆಕ್ಸ್ ಗಳಲ್ಲಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರಿಗೆ ಸ್ವಾಗತ ಕೋರಿ ಹಲವಾರು ಗಣ್ಯರು, ಮುಖಂಡರು ಹಾಗೂ ಕಾರ್ಯಕರ್ತರ ಕಟೌಟ್ಗಳು ರಾರಾಜಿಸುತ್ತಿದ್ದವು.

ಎಚ್.ಡಿ.ಕುಮಾರಸ್ವಾಮಿಯವರು ವೇದಿಕೆ ಬಂದು ಮಾತನಾಡಿ ವೇದಿಕೆಯಿಂದ ಹೊರಟ ಮರುಕ್ಷಣವೇ ಸ್ವಾಗತ ಕೋರುವ ಫೆಕ್ಸ್ಗಳ ಕಿತ್ತಾಟ, ತಳ್ಳಾಟ ಪ್ರಾರಂಭವಾಯಿತು. ನಾ ಮುಂದು ತಾ ಮುಂದು ಎಂಬಂತೆ ಫ್ಲೆಕ್ಸ್ ಕಿತ್ತುಕೊಳ್ಳಲು ಕೆಲ ಜನ ಮುಗಿಬಿದ್ದರು. ಈ ಸಂದರ್ಭದಲ್ಲಿ ಕೆಲವರು ಕೈ ಕೈ ಮಿಲಾಯಿಸುವ ಹಂತದವರೆಗೂ ಹೋಯಿತು. ಬಲಿಷ್ಠರಿಂದ ಕೆಲವರು ಏಟುಗಳನ್ನೂ ಸಹಾ ತಿನ್ನುವಂತಾಯಿತು. ಮಾಜಿ ಮುಖ್ಯಮಂತ್ರಿಗಳನ್ನು ಕಳುಹಿಸಿ ನಿಟ್ಟುಸಿರು ಬಿಡುತ್ತಿದ್ದ ಪೊಲೀಸರೂ ಸಹ ಇವರತ್ತ ಗಮನಿಸಲು ಸಾಧ್ಯವಾಗಲಿಲ್ಲ. ಒಟ್ಟಿನಲ್ಲಿ ಕುಮಾರಣ್ಣನ ಆಗಮನಕ್ಕೆ ಜರಿಸೀರೆಯುಟ್ಟ ನಾರಿಯಂತೆ ಕಂಗೊಳಿಸುತ್ತಿದ್ದ ತುರುವೇಕೆರೆ ಪಟ್ಟಣ ಕುಮಾರಣ್ಣ ವೇದಿಕೆ ಕಾರ್ಯಕ್ರಮ ಮುಗಿಸಿ ಹೊರ ನಡೆದ ಮರುಕ್ಷಣವೇ ಫ್ಲೆಕ್ಸ್ಗಳ ಕಿತ್ತಾಟ-ಜಗ್ಗಾಟಕ್ಕೆ ಸಿಲುಕಿ ನೂಲಿನ ಸೀರೆ ಹರಿದ ನಾರಿಯಂತಾಯಿತು.

► Follow us on –  Facebook / Twitter  / Google+

Facebook Comments

Sri Raghav

Admin