ಫ್ಲೈಓವರ್‍ನಿಂದ ಉರುಳಿ ಬಿದ್ದ ಕ್ಯಾಂಟರ್, ನೂರಾರು ಕೋಳಿಗಳು ಸಾವು

ಈ ಸುದ್ದಿಯನ್ನು ಶೇರ್ ಮಾಡಿ

Canter--02

ಬೆಂಗಳೂರು, ನ.17- ಕೋಳಿಗಳನ್ನು ಸಾಗಣೆ ಮಾಡಿಕೊಂಡು ಬರುತ್ತಿದ್ದ ಕ್ಯಾಂಟರ್ ನಿಯಂತ್ರಣ ತಪ್ಪಿ ಫ್ಲೈಓವರ್‍ನಿಂದ ಕೆಳಕ್ಕೆ ಬಿದ್ದ ಪರಿಣಾಮ ಮೂವರು ಗಾಯಗೊಂಡಿರುವ ಘಟನೆ ಯಶವಂತಪುರ ಸಂಚಾರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಆಂಧ್ರಪ್ರದೇಶದ ಕರ್ನೂಲ್‍ನಿಂದ ಕೋಳಿಗಳನ್ನು ಕ್ಯಾಂಟರ್‍ನಲ್ಲಿ ಸಾಗಣೆ ಮಾಡಿಕೊಂಡು ಬೆಂಗಳೂರಿನ ಶಿವಾಜಿನಗರಕ್ಕೆ ಬರುತ್ತಿದ್ದಾಗ ಯಶವಂತಪುರ ಸರ್ಕಲ್ ಬಳಿ ಫ್ಲೈಓವರ್‍ನಲ್ಲಿ ಇಂದು ಬೆಳಗ್ಗೆ 7.15ರಲ್ಲಿ ಚಾಲಕನ ನಿಯಂತ್ರಣ ತಪ್ಪಿ ಕ್ಯಾಂಟರ್ ಉರುಳಿ ಬಿದ್ದಿದೆ.

ಪರಿಣಾಮವಾಗಿ ನೂರಾರು ಕೋಳಿಗಳು ಸಾವನ್ನಪ್ಪಿದರೆ, ಕ್ಯಾಂಟರ್‍ನಲ್ಲಿದ್ದ ಚಾಲಕ ಸೇರಿ ಮೂವರು ಗಾಯಗೊಂಡಿದ್ದು, ಇದರಲ್ಲಿ ಇಬ್ರಾಹಿಂ ಎಂಬಾತನ ಸ್ಥಿತಿ ಗಂಭೀರವಾಗಿದೆ. ಮೂವರನ್ನು ಪೋರ್ಟಿಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಯಶವಂತಪುರ ಸಂಚಾರಿ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

Facebook Comments

Sri Raghav

Admin