ಬಂಗಾರಪೇಟೆ ತಾಲ್ಲೂಕಿನ ವಟರಕುಂಟೆ ಗ್ರಾಮದಲ್ಲಿ ಡಿಫ್ತೀರಿಯಾಗೆ 2 ಮಕ್ಕಳು ಬಲಿ

ಈ ಸುದ್ದಿಯನ್ನು ಶೇರ್ ಮಾಡಿ

Bangarapete--01

ಬಂಗಾರಪೇಟೆ, ಜು.13- ತಾಲ್ಲೂಕಿನಲ್ಲಿ ಡೆಂಘೀ ಮತ್ತು ಚಿಕುನ್‍ಗುನ್ಯಾ ಜ್ವರದಿಂದ ನರಳುತ್ತಿರುವ ಬೆನ್ನಲ್ಲೇ ಮತ್ತೊಂದು ಡಿಫ್ತೀರಿಯಾ ಕಾಯಿಲೆ ಬೆಳಕಿಗೆ ಬಂದಿದ್ದು, ತಾಲ್ಲೂಕಿನ ವಟರಕುಂಟೆ ಗ್ರಾಮದಲ್ಲಿ ಇಬ್ಬರು ಬಾಲಕರು ಡಿಫ್ತೀರಿಯಾಗೆ ಬಲಿಯಾಗಿದ್ದು, ಗ್ರಾಮದಲ್ಲಿ ಆತಂಕ ಮನೆ ಮಾಡಿದೆ. ಕಳೆದ ಮೂರು ದಿನಗಳ ಹಿಂದೆ ಜ್ವರ ದಿಂದ ನರಳುತ್ತಿದ್ದ ಜಾಕೀರ್ ಪಾಷ ಮೃತಪಟ್ಟಿದ್ದಾನೆ. ಅದೇ ಗ್ರಾಮದ ಝುಕೃ (6) ಎಂಬ ಬಾಲಕ ಜ್ವರಕ್ಕೆ ಬಲಿಯಾಗಿದ್ದಾನೆ. ಡಿಪ್ತೀರಿಯಾ ಎಂದು ಹೇಳಲಾಗುತ್ತಿದ್ದು, ಒಂದರಿಂದ 15 ವರ್ಷದ ಒಳಗಿನ ಮಕ್ಕಳಿಗೆ ಈ ಕಾಯಿಲೆ ಕಾಣಿಸಿಕೊಳ್ಳಲಿದೆ ಎಂದು ಆರೋಗ್ಯ ಇಲಾಖೆ ಶಂಕೆ ವ್ಯಕ್ತಪಡಿಸಿದೆ.

ಇಬ್ಬರು ಜ್ವರದಿಂದ ಮೃತಪಟ್ಟಿರುವ ಹಿನ್ನಲೆಯಲ್ಲಿ ಗ್ರಾಮಸ್ಥರಲ್ಲಿ ಆತಂಕವನ್ನುಂಟು ಮಾಡಿಸಿದೆ. ಈ ಕಾಯಿಲೆ ಸೋಂಕು ರೋಗವಾಗಿದ್ದು, ಒಬ್ಬರಿಂದ ಮತ್ತೊಬ್ಬರಿಗೆ ಹರಡುವ ಕಾಯಿಲೆ. ಈ ಘಟನೆಯಿಂದ ಬೆಚ್ಚಿ ಬಿದ್ದಿರುವ ಗ್ರಾಮಕ್ಕೆ ವೈದ್ಯರ ತಂಡ ಆಗಮಿಸಿ 15 ಕ್ಕೂ ಹೆಚ್ಚು ಮಕ್ಕಳ ರಕ್ತದ ಸ್ಯಾಂಪಲ್‍ನ್ನು ಪಡೆದುಕೊಂಡಿದ್ದಾರೆ. ಸುತ್ತಮುತ್ತಲಿನ ಗ್ರಾಮಗಳಲ್ಲಿ ಡಿಪ್ತೀರಿಯಾ ರೋಗದ ಬಗ್ಗೆ ಸರ್ವೆ ಕಾರ್ಯ ನಡೆಯುತ್ತಿದೆ. ಐದು ವರ್ಷದೊಳಗಿನ ಮಕ್ಕಳಿಗೆ ಸರಿಯಾದ ಲಸಿಕೆ ಹಾಕಿಸದೆ ಇದ್ದಲ್ಲಿ ಸಾಮಾನ್ಯವಾಗಿ ಕಂಡು ಬರುವ ಕಾಯಿಲೆ ಇದಾಗಿದೆ ಎಂದು ಹೇಳಲಾಗುತ್ತಿದೆ. ವಟ್ರಕುಂಟೆ ಗ್ರಾಮದ ಸರ್ಕಾರಿ ಶಾಲೆ ಆವರಣದಲ್ಲಿ ಜಿಲ್ಲಾ ವೈದ್ಯರ ತಂಡ ಚಿಕಿತ್ಸೆ ನೀಡುತ್ತಿದೆ.

ಆರೋಗ್ಯ ಸಚಿವ ರಮೇಶ್ ಕುಮಾರ್ ತವರು ಜಿಲ್ಲೆಯಲ್ಲಿ ಅನಾರೋಗ್ಯ ತಾಂಡವಾಡುತ್ತಿದ್ದರೆ, ತಾಲ್ಲೂಕಿನ ವಟ್ರಕುಂಟೆ ಗ್ರಾಮದಲ್ಲಿ ಡಿಫ್ತೀರಿಯಾ ರೋಗಕ್ಕೆ ಮಕ್ಕಳ ಸಾವಿನ ಸರಣಿ ಆರಂಭಗೊಂಡಿರುವುದು ಗ್ರಾಮಸ್ಥರಲ್ಲಿ ಆತಂಕಕ್ಕೆ ದಾರಿ ಮೂಡಿಸಿದ್ದು, ಕೂಡಲೆ ಆರೋಗ್ಯ ಇಲಾಖೆ ಸೂಕ್ತ ಕ್ರಮ ಕೈಗೊಳ್ಳಬೇಕು ಗ್ರಾಮಸ್ಥರು ಆಗ್ರಹಿಸಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

Sri Raghav

Admin